Get Updates
Get notified of breaking news, exclusive insights, and must-see stories!

ಕುಂಬ್ಳೆ ಪತ್ನಿಗೆ ಕೋರ್ಟಿನಾಟದಲ್ಲಿ ಸಿಕ್ಕ ಅರ್ಧ ಯಶಸ್ಸು

ನವದೆಹಲಿ : ಲೆಗ್ಗಿ ಅನಿಲ್‌ ಕುಂಬ್ಳೆ ಪತ್ನಿ ಚೇತನ ಅವರಿಗೆ ತಮ್ಮ ಹೆಣ್ಣು ಮಗು ಲಾಲನೆಗೆ ತಾತ್ಕಾಲಿಕ ಅವಕಾಶ ಸಿಕ್ಕಿದೆ !

ಇದೇನು, ತನ್ನ ಮಗುವನ್ನು ಸಾಕಲು ಅವಕಾಶ ಎಂಥದ್ದು ಅಂದುಕೊಂಡಿರಾ ? ಕುಂಬ್ಳೆಗೆ ಚೇತನ ಮೊದಲ ಹೆಂಡತಿಯಾದರೆ, ಚೇತನ ಅವರಿಗೆ ಕುಂಬ್ಳೆ 2ನೇ ಗಂಡ. ಈ ಕಾರಣಕ್ಕೇ ಅಪ್ಪ- ಅಮ್ಮ ಇಬ್ಬರೂ ಮಗು ಖಾಯಂ ಆಗಿ ನನ್ನದು ಎನ್ನತೊಡಗಿದರು. ವಿಷಯ ಸುಪ್ರಿಂಕೋರ್ಟಿನ ಕಟಕಟೆವರೆಗೆ ಹೋಯಿತು. ಆದರೆ ಅಹವಾಲು ಇನ್ನೂ ವಿಚಾರಣೆ ಹಂತದಲ್ಲೇ ಇದ್ದು, ತೀರ್ಪು ಹೊರಬೀಳುವವರೆಗೆ ಮಗು ಚೇತನಾ ಅವರ ಬಳಿಯಲ್ಲೇ ಇರಲಿ ಎಂದು ಡಿ.ಪಿ.ಮೊಹಾಪಾತ್ರ ಹಾಗೂ ಶಿವರಾಜ್‌ ವಿ.ಪಾಟೀಲ್‌ ಅವರನ್ನೊಳಗೊಂಡ ಸುಪ್ರಿಂಕೋರ್ಟ್‌ನ ವಿಭಾಗೀಯ ಪೀಠ ಗುರುವಾರ ಆದೇಶಿಸಿದೆ.

ಅಂದಿನಿಂದ ಇಂದಿನವರೆಗೆ : ಚೇತನ, ಕುಮಾರ್‌ ವಿ. ಜಹಗೀರ್‌ದಾರ್‌ ಎಂಬ ಸ್ಟಾಕ್‌ ದಲ್ಲಾಳಿಯನ್ನು ಮದುವೆಯಾಗಿದ್ದರು. ಈ ದಂಪತಿಗಳಿಗೆ ಆರುಣಿ ಎಂಬ ಹೆಣ್ಣು ಮಗು ಇತ್ತು. 1999ರ ಏಪ್ರಿಲ್‌ 17ರಂದು ಕುಟುಂಬ ನ್ಯಾಯಾಲಯದಲ್ಲಿ ದಂಪತಿಗಳು ಒಪ್ಪಿ ವಿಚ್ಛೇದನ ಪಡೆದರು. ಮಗು ಇಬ್ಬರ ಬಳಿಯೂ ಬೆಳೆಯಲು ಕುಟುಂಬ ನ್ಯಾಯಾಲಯ ಅವಕಾಶ ಕೊಟ್ಟಿತು. ನಂತರ ಅನಿಲ್‌ ಕುಂಬ್ಳೆ ಅವರನ್ನು ಚೇತನ ಮದುವೆಯಾದರು. ಮಗು ಶಾಶ್ವತವಾಗಿ ತಮ್ಮ ಬಳಿಯೇ ಇರಬೇಕು, ಅದನ್ನು ವಿದೇಶಕ್ಕೆ ಕರೆದೊಯ್ಯಲು ಅನುಮತಿ ಕೊಡಬೇಕು ಎಂಬ ಚೇತನ ಅವರ ಅಹವಾಲನ್ನು ಕುಟುಂಬ ಕೋರ್ಟ್‌ ತಿರಸ್ಕರಿಸಿತು.

ಚೇತನ ಅವರ ಮೊದಲ ಗಂಡ ಸುಪ್ರಿಂಕೋರ್ಟ್‌ ಮೆಟ್ಟಿಲು ಹತ್ತಿದರು. ವಿಚಾರಣೆ ಇನ್ನೂ ನಡೆಯುತ್ತಿದೆ. ವಿಚಾರಣೆ ಮುಗಿಯುವವರೆಗೆ ಮಗು ತಾಯಿಯ ಸುಪರ್ದಿಯಲ್ಲೇ ಇರಲಿ, ಆದರೆ ವಿದೇಶಕ್ಕೆ ಕರೆದೊಯ್ಯುವಂತಿಲ್ಲ ಎಂದು ಸುಪ್ರಿಂಕೋರ್ಟ್‌ ವಿಭಾಗೀಯ ಪೀಠ ಈಗ ತೀರ್ಪಿತ್ತಿದೆ.

ಸೆಪ್ಟೆಂಬರ್‌ 29, 2000ದಲ್ಲಿ ಮಗು ಒಂದು ವರ್ಷಗಳ ಕಾಲ ತಾಯಿ ಜೊತೆಯಿರಲಿ ಎಂದು ಹೈಕೋರ್ಟ್‌ ತೀರ್ಪಿತ್ತಿತ್ತು. ಕುಟುಂಬ ನ್ಯಾಯಾಲಯದ ಅನುಮತಿ ಪಡೆದು ವಿದೇಶಕ್ಕೂ ಕರೆದೊಯ್ಯಬಹುದೆಂದು ಆದೇಶಿಸಿತ್ತು. ಆದರೆ, ಕುಮಾರ್‌ ವಿ. ಜಹಗೀರ್‌ದಾರ್‌ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಸುಪ್ರಿಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+