ನನಗೆ ಕ್ಷಮಾದಾನ ಕೊಡಿ- ಜಯಲಲಿತಾಗೆ ವೀರಪ್ಪನ್ ಪತ್ರ?
ಬೆಂಗಳೂರು : ನರಹಂತಕ ವೀರಪ್ಪನ್ ಎಐಎಡಿಎಂಕೆ ನಾಯಕಿ ಜಯಲಲಿತಾ ಅವರಿಗೊಂದು ಪತ್ರ ಬರೆದಿದ್ದು, ಒಂದು ವೇಳೆ ಆಕೆ ಮುಖ್ಯಮಂತ್ರಿಯಾದರೆ ತನಗೆ ಸಾರ್ವತ್ರಿಕ ಕ್ಷಮಾದಾನ ನೀಡಬೇಕು ಎಂದು ಕೇಳಿಕೊಂಡಿದ್ದಾನೆ.
ಗೃಹ ಇಲಾಖೆಯಲ್ಲಿ ಗುರುವಾರ ಈ ಸುದ್ದಿಯದೇ ಗುಲ್ಲು . ಒಂದು ಮಾಧ್ಯಮ ಕೂಡ ಈ ಸುದ್ದಿಯನ್ನು ವರದಿ ಮಾಡಿದೆ. ನರಹಂತಕ ಜಯಲಲಿತಾ ಅವರಿಗೆ ಬರೆದಿರುವ ಪತ್ರದ ತಿರುಳು ಇಂತಿದೆ- ನೀವು ಲೋಕಸಭಾ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಯಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ನೀವು ಅಧಿಕಾರಕ್ಕೆ ಬಂದ ತಕ್ಷಣ ನನಗೆ ಸಾರ್ವತ್ರಿಕ ಕ್ಷಮಾದಾನ ನೀಡಬೇಕು.
ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಕೆ.ಶ್ರೀನಿವಾಸನ್ ಆಗಲೀ, ಗೃಹ ಸಚಿವಾಲಯ ಆಗಲೀ ವೀರಪ್ಪನ್ ಪತ್ರದ ಪ್ರತಿಯನ್ನು ಈವರೆಗೆ ಪಡೆದಿಲ್ಲ. ಆದರೆ ಜಯಲಲಿತಾ ಅವರಿಗೆ ಬರೆದಿರುವ ಪತ್ರದ ಒಂದು ಪ್ರತಿಯನ್ನು ವೀರಪ್ಪನ್ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರಿಗೂ ಕಳುಹಿಸಿದ್ದಾನೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಯಾವುದೇ ಸ್ಪಷ್ಟೀಕರಣ ಸಿಕ್ಕಿಲ್ಲ.
ಜಯಲಲಿತಾಗೇ ಪತ್ರ ಯಾಕೆ ?
ಪ್ರಸ್ತುತ ತಮಿಳುನಾಡಿನಲ್ಲಿ ಜಯಲಲಿತಾ- ಕರುಣಾನಿಧಿ ಚುನಾವಣಾ ಟಂಗಾಟುಂಗಿಯ ಬಿಸಿ. ವಿವಾದಗಳ ನಡುವೆಯೂ ಜಯಲಲಿತಾ ಚರಿಷ್ಮಾ ಮಾಸಿಲ್ಲ. ತನ್ನ ಅಧಿಕಾರಾವಧಿಯಲ್ಲಿ ವೀರಪ್ಪನ್ ವಿರುದ್ಧ ಜಯಲಲಿತಾ ತೀವ್ರ ಕಾರ್ಯಾಚರಣೆ ನಡೆಸಿದ್ದರು. ಎಷ್ಟೋ ಬಾರಿ ಕೂದಲೆಳೆಯಲ್ಲಿ ಕಾಡುಗಳ್ಳ ಪಾರಾಗಿದ್ದ . ರಾಜ್ ಅಪಹರಣ ಪ್ರಕರಣದ ನಂತರ ವೀರಪ್ಪನನ್ನು ಹಿಡಿಯಿರಿ ಎಂಬ ಒತ್ತಾಯವನ್ನು ಸದಾ ಸರ್ಕಾರದ ಮೇಲೆ ಜಯಲಲಿತಾ ಹೇರುತ್ತಲೇ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ವೀರಪ್ಪನ್‌ಗೆ, ಜಯಲಲಿತಾ ಮುಖ್ಯಮಂತ್ರಿಯಾದರೆ ತನಗೆ ಉಳಿಗಾಲವಿಲ್ಲ ಎಂಬುದು ಮನದಟ್ಟಾಗಿರಬಹುದು. ಈ ಕಾರಣಕ್ಕಾಗೇ ಆತ ಖುದ್ದು ಆಕೆಗೇ ಕ್ಷಮಾದಾನ ನೀಡುವಂತೆ ಪತ್ರ ಬರೆದಿದ್ದಾನೆ ಎಂದು ಗೃಹ ಇಲಾಖೆಯಲ್ಲಿ ಗುಸುಗುಸು ಕೇಳುತ್ತಿದೆ.
-
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ












Click it and Unblock the Notifications