ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಪ್ರಾಣಿಗಳ ಬಗ್ಗೆ ತುಂಬಾ ಒಲವು ಬೆಳೆಸಿಕೊಳ್ಳುತ್ತಿದ್ದೀರಿ. ಇದರಲ್ಲಿ ಒಂದಂಶ ನಿಮ್ಮ ಗೆಳೆಯರ ಮೇಲೆ ತೋರಿಸಿದ್ದರೆ, ವೃಥಾ ಕಿರಿಕಿರಿಗಳು ಕಡಿಮೆಯಾಗುತ್ತವೆ. ಈ ಹೊತ್ತು ಆರೋಗ್ಯದ ಬಗ್ಗೆ ಜಾಗೃತರಾಗಿರಿ.ವೃಷಭ : ನೀವು ಆಡುತ್ತಿರುವ ಜಗಳ ಇವತ್ತು ಕೊನೆಗಾಣುತ್ತದೆ. ಆದರೆ ಸ್ವಲ್ಪವೇ ಸ್ವಲ್ಪ ತಗ್ಗಲು ನೀವು ರೆಡಿಯಾಗಿದ್ದರೆ ಮಾತ್ರ. ಸುಮ್ಮನೇ ಜಂಭ ಮಾಡಬೇಡಿ.
ಮಿಥುನ : ದಿನವೂ ಹಿರಿಯರಿಂದ ಬೈಯಿಸಿಕೊಳ್ಳುವುದನ್ನು ರೂಢಿಸಿಕೊಳ್ಳಬಾರದು. ಅದು ಆರೋಗ್ಯಕ್ಕೂ ಒಳ್ಳೆಯದಲ್ಲ ಅಲ್ವಾ?
ಕಟಕ : ಒಪ್ಪಿಕೊಳ್ಳುವುದು ಎಂದರೆ ಅದು ಅಷ್ಟು ಸುಲಭದ ಕೆಲಸವಲ್ಲ. ನಿಮ್ಮ ಜೊತೆಗೇ ಬದುಕುತ್ತಿರುವ ಸಂಗತಿಗಳಿಂದ ಮನಸ್ಸು ರೋಸಿ ಹೋಗಿದೆ ಎನಿಸಿದರೆ ಸ್ವಲ್ಪ ದಿನ ರಿಲ್ಯಾಕ್ಸ್ ಆಗುವುದು ಒಳ್ಳೆಯದು.
ಸಿಂಹ : ಪತ್ರ ವ್ಯವಹಾರಗಳನ್ನು ಹಾಗೆಲ್ಲಾ ಇದ್ದಕ್ಕಿದ್ದಂತೆಯೇ ನಿಲ್ಲಿಸಿಬಿಟ್ಟರೆ ನಿಮ್ಮ ಬಗ್ಗೆ ತಪ್ಪು ಅರ್ಥಗಳು ಹುಟ್ಟಿಕೊಳ್ಳುತ್ತವೆ. ಸ್ವಲ್ಪವೇ ಇರುವ ಸೋಮಾರಿತನವನ್ನು ಪಕ್ಕಕ್ಕೆ ಇಟ್ಟರೆ ನಿಮ್ಮ ಗಂಟೇನು ಹೋಗುತ್ತದೆ.
ಕನ್ಯಾ : ಆಟೋಟಗಳತ್ತ ನೀವು ಗಮನ ಹರಿಸಿ, ಹಾಕಿದ ಶ್ರಮ ಸಾರ್ಥಕವೆನಿಸುತ್ತದೆ. ಇನ್ನೂ ಅತ್ತಲೇ ಮನಸ್ಸಿಟ್ಟುಕೊಂಡು ಕೆಲಸ ಮಾಡುತ್ತಿದ್ದರೆ ಸಮಯ ವ್ಯರ್ಥ ಮಾಡುತ್ತಿದ್ದೀರಿ ಎಂದೇ ಅರ್ಥ.
ತುಲಾ : ವ್ಹಾವ್ ! ಇವತ್ತು ಸಂಜೆ ಪಾರ್ಟಿ ಯೋಗ. ಕಿಸೆಯೂ ಖಾಲಿ ಆಗುವ ಮಾತು ಕಾಣೆ. ಆದ್ದರಿಂದ ಲಕ್ಕಿ ಪರ್ಸನ್ ಅನಿಸಿಕೊಳ್ಳುತ್ತೀರಿ. ಮನೆಯವರನ್ನು ಜೊತೆಗೆ ಕರೆದುಕೊಂಡು ಹೋಗಲು ಮರೆತುಬಿಡಬೇಡಿ ಮತ್ತೆ.
ವೃಶ್ಚಿಕ : ಸ್ನೇಹಿತರು ಕಡಕ್ಕಾಗಿ ಭವಿಷ್ಯ ನುಡಿದರೆ ಬೇಜಾರು ಯಾಕೆ ? ಇಷ್ಟಕ್ಕೂ ನಿಜ ಹೇಳಿದವರನ್ನು ನೀವು ಇನ್ನೂ ಅಭಿನಂದಿಸಲೇ ಇಲ್ಲವಲ್ಲ ! ಅವರು ಅಭಿನಂದನೆಗೆ ಅರ್ಹರಲ್ಲ ಅನ್ನುವುದು ಬೇರೆಯ ಮಾತು.
ಧನಸ್ಸು : ಸಂಗಾತಿಯಾಂದಿಗೆ ಜಗಳ ಕಾಯಬೇಡಿ. ತುಂಬಾ ವ್ಯವಹಾರಗಳು ಎಗರಿ ಬೀಳುತ್ತವೆ. ಆದ್ದರಿಂದ ಆದಷ್ಟು ಕೂಲ್ ಇದ್ದರೆ ಸಿಟ್ಟು ತನ್ನಿಂದ ತಾನೇ ಇಳಿದುಹೋಗುತ್ತದೆ.
ಮಕರ : ಬಂಧುಗಳನ್ನು ಕಾಡಿಸುವುದು, ಗೋಳಾಡಿಸುವುದನ್ನು ಸ್ವಲ್ಪವೂ ಕಡಿಮೆ ಮಾಡುವುದಕ್ಕಾಗುವುದಿಲ್ಲವೇ ? ಈಗ ಸಮಯವೆಲ್ಲಾ ಚಿನ್ನ . ಆ ಕಾರಣದಿಂದಲೇ ಕಾಲ ವ್ಯರ್ಥ ಮಾಡಬೇಡಿ.
ಕುಂಭ : ನಿಮ್ಮ ವಿರಾಮದ ವೇಳೆಯಲ್ಲಿ ಒಳ್ಳೆಯ ಯೋಚನೆಗಳನ್ನೇ ಮಾಡಬೇಕು. ಆಗ ನಿಮ್ಮ ಮುಂದಿನ ಯೋಜನೆಗಳ ರೂಪು ರೇಷೆಗಳೂ ಸ್ಪಷ್ಟವಾಗುತ್ತವೆ. ಇದಕ್ಕಿಂತ ದೊಡ್ಡ ಹೋಂ ವರ್ಕ್ ಬೇಕಾ?
ಮೀನ : ನಿಮಗಿಷ್ಟವಾದ ಕೆಲಸಗಳನ್ನು ಪೂರೈಸಿಕೊಳ್ಳಲು ಇದು ಉತ್ತಮ ಸಮಯ. ಆದ್ದರಿಂದ ಸುಮ್ಮನೇ ಟೈಂ ವೇಸ್ಟ್ ಮಾಡಿಕೊಳ್ಳಬೇಡಿ. ಪಾರುಪತ್ಯ ಎಲ್ಲ ನಿಮ್ಮದೇ ತಾನೇ?
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications