Get Updates
Get notified of breaking news, exclusive insights, and must-see stories!

ಆಸ್ಟ್ರೇಲಿಯಾದಲ್ಲಿ ಕಳೆದುಹೋಗಿರುವ ಕ್ರಿಕೆಟಿಗರು ಇವರು...

ಮಂಗಳೂರು : ತ್ರಿಶೂರ್‌ನ ಸೈಜಿ, ಸೆಬಿ, ಬಿಜು, ಜೋಫಿ ಕೆ.ಯು. ಹಾಗೂ ಥಾಮಸ್‌ ಇವರೇ ಆಸ್ಟ್ರೇಲಿಯಾದಲ್ಲಿ ಕಳೆದು ಹೋಗಿರುವ ಇಲ್ಲಿನ ಕರಾವಳಿ ಕ್ರಿಕೆಟ್‌ ಕ್ಲಿನಿಕ್‌ನ ಕ್ರಿಕೆಟಿಗರು.

ಕಳೆದ ಮಾರ್ಚ್‌ 24ರಂದು ಸಿಂಗಪೂರ್‌ ಏರ್‌ಲೈನ್ಸ್‌ನಲ್ಲಿ ಆಸ್ಟ್ರೇಲಿಯಾಕ್ಕೆ ತರಪೇತಿಗಾಗಿ ಈ ಆಟಗಾರರು ಪ್ರಯಾಣ ಬೆಳೆಸಿದರು. ಆಸ್ಟ್ರೇಲಿಯಾದಲ್ಲಿ ಇವರನ್ನು ಬರಮಾಡಿಕೊಳ್ಳಲು ಅಲ್ಲಿನ ಕ್ರಿಕೆಟ್‌ ತರಪೇತಿ ಅಕಾಡೆಮಿಯ ಮುಖ್ಯಸ್ಥ ಫಿಲಿಪ್ಸ್‌ ಒಂದು ಗಂಟೆ ತಡವಾಗಿ ಬಂದಿದ್ದಾರೆ. ಈ ಹುಡುಗರು ಅವರ ಕಣ್ಣಿಗೆ ಬಿದ್ದಿಲ್ಲ. ಅದಾದ ನಂತರ ಹುಡುಗರ ಬಗ್ಗೆ ಸುಳಿವೇ ಸಿಕ್ಕಿಲ್ಲ. ಅವರಿಂದ ಒಂದು ಫೋನ್‌ ಕರೆಯೂ ಬಂದಿಲ್ಲ.

ಕ್ರಿಕೆಟಿಗರ ಬಳಿ 3 ಸಾವಿರ ಡಾಲರ್‌ ಹಣ ಹಾಗೂ 1 ತಿಂಗಳ ಅವಧಿಯ ವೀಸಾ ಇದೆ. ಕದ್ರಿ ಪೊಲೀಸ್‌ ಠಾಣೆಯಲ್ಲಿ ಕ್ರಿಕೆಟಿಗರ ನಾಪತ್ತೆಯ ಬ-ಗ್ಗೆ ದೂರು ಕೊಡಲಾಗಿದೆ.

(ಮಂಗಳೂರು ಪ್ರತಿನಿಧಿಯಿಂದ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+