Get Updates
Get notified of breaking news, exclusive insights, and must-see stories!

ಜಿಎಸ್‌ಎಲ್‌ವಿ ಯಶಸ್ವೀ ಉಡಾವಣೆ: ಭಾರತ ವಿಜ್ಞಾನಿಗಳ ಸಾಧನೆ

ಶ್ರೀಹರಿಕೋಟಾ : ಮಾರ್ಚ್‌ 28ರಂದು ಉಡ್ಡಯನಕ್ಕೆ ಕೇವಲ ಒಂದು ಕ್ಷಣ ಬಾಕಿ ಉಳಿದಿದ್ದಾಗ ತಾಂತ್ರಿಕ ದೋಷದಿಂದ ಮೇಲೇರದೆ ವಿಫಲಗೊಂಡಿದ್ದ, ಭಾರತದ ಮಹತ್ವಾಕಾಂಕ್ಷೆಯ ಜಿ.ಎಸ್‌.ಎಲ್‌.ವಿ. - ಡಿ.1 ಅಂತರಿಕ್ಷ ವಾಹನದ ಮರು ಉಡಾವಣೆ ಬುಧವಾರ ಯಶಸ್ವಿಯಾಗಿದೆ.

ದೇಶೀ ನಿರ್ಮಿತ ಉಪಗ್ರಹ ವಾಹನವು ಬುಧವಾರ ಮಧ್ಯಾಹ್ನ 3:44ರಲ್ಲಿ ತನ್ನ ನಿಗದಿತ ಕಕ್ಷೆಯತ್ತ ಪ್ರಯಾಣ ಬೆಳೆಸಿತು. ಮೊದಲು ನಿಗದಿಯಾಗಿದ್ದ ದಿನದಂದು ಮೋಟರ್‌ ದೋಷದಿಂದ ಉಪಗ್ರಹ ಉಡಾವಣೆ ವಾಹನದ ಕೆಳಭಾಗದಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ಕೊನೆ ಕ್ಷಣದಲ್ಲಿ ಉಪಗ್ರಹ ಉಡಾವಣೆಯನ್ನು ರದ್ದುಗೊಳಿಸಲಾಗಿತ್ತು.

ಆದರೆ, ಉಡಾವಣೆ ವಿಫಲವಾದ ಕೇವಲ 15 ದಿನಗಳ ಅವಧಿಯಾಳಗೆ ದೋಷವೇನೆಂಬುದನ್ನು ಪತ್ತೆಹಚ್ಚಿ, ಸರಿಪಡಿಸಿ, ಮರು ಉಡಾವಣೆ ದಿನಾಂಕ ನಿಗದಿ ಪಡಿಸಿ, ಯಶಸ್ವಿಯಾಗಿರುವುದು ಭಾರತೀಯ ವಿಜ್ಞಾನಿಗಳ ಸಾಧನೆಯಾಗಿದೆ.

ಮೂರು ಹಂತಗಳ ಜಿಯೋ ಸಿಂಕ್ರೋನಸ್‌ ಉಪಗ್ರಹ ಉಡ್ಡಯನ ವಾಹನದಲ್ಲಿ (ಜಿ.ಎಸ್‌.ಎಲ್‌.ವಿ) ಜೋಡಿಸಲಾಗಿದ್ದ ನಾಲ್ಕು ಮೋಟರ್‌ಗಳ ಪೈಕಿ ಒಂದು ವಿಫಲವಾಗಿ, ದೋಷಪೂರಿತವಾಗಿದ್ದ ಆಕ್ಸಿಡೈಸರ್‌ ಪ್ಲಂಬಿಂಗ್‌ ಉಡ್ಡಯನಕ್ಕೆ ಅಡ್ಡಿಪಡಿಸಿತ್ತು ಎಂದು ತಿಳಿಸಲಾಗಿತ್ತು. ಅಗ್ನಿ ಅನಾಹುತದಿಂದ ಹಾಳಾಗಿದ್ದ ಇಂಜೆಕ್ಟರ್‌ ಮೊದಲಾದ ಭಾಗಗಳನ್ನು ವಿಜ್ಞಾನಿಗಳು ಬದಲಾಯಿಸಿದ್ದರು.

ಬುಧವಾರ ಶ್ರೀಹರಿ ಕೋಟಾದಲ್ಲಿ ಶುಭ್ರ ಆಕಾಶ ಇತ್ತು. ಸ್ವಚ್ಛ ಬೆಳಕು ಹರಡಿತ್ತು. ಜಿ.ಎಸ್‌.ಎಲ್‌.ವಿ. ಮರು ಉಡಾವಣೆಗೆ ಕಾಲ ಪಕ್ವವಾಗಿತ್ತು. ಹವಾಮಾನವೂ ಸಹಕರಿಸಿತು. ಸೋಮವಾರ ಬೆಳಗ್ಗೆ ಕ್ಷಣಗಣನೆ ಆರಂಭವಾದ ಸಮಯದಿಂದ ಉಪಗ್ರಹ ವಾಹನದ ಯಶಸ್ವೀ ಉಡಾವಣೆಗೆ ಅವಿರತವಾಗಿ ಶ್ರಮಿಸಿದ ವಿಜ್ಞಾನಿಗಳು ಈ ಯಶಸ್ಸಿನಿಂದ ಅಮಿತಾನಂದರಾಗಿದ್ದರು.

ಇಸ್ರೋ ಅಧ್ಯಕ್ಷ ಕಸ್ತೂರಿ ರಂಗನ್‌ ಅವರ ನೇತೃತ್ವದ ವಿಜ್ಞಾನಿಗಳ ತಂಡ ಈ ಉಡಾವಣೆಯಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಜಿ.ಎಸ್‌.ಎ.ಟಿ. 1 ಸಂಪರ್ಕ ಉಪಗ್ರಹವನ್ನು ಹೊತ್ತು ನಿಗದಿತ ಕಕ್ಷೆಯತ್ತ ಜಿಎಸ್‌ಎಲ್‌ವಿ ಯಶಸ್ವಿಯಾಗಿ ಜಿಗಿದಾಗ ಆನಂದ ತುಂದಿಲರಾಗಿದ್ದ ಡಾ. ಕೆ. ಕಸ್ತೂರಿ ರಂಗನ್‌ ತಮ್ಮ ಸಹೋದ್ಯೋಗಿಗಳನ್ನು ಅಭಿನಂದಿಸಿದರು.

ಪ್ರಧಾನಿ ಅಭಿನಂದನೆ : ಜಿಎಸ್‌ಎಲ್‌ವಿ ಯಶಸ್ವಿ ಉಡಾವಣೆಯಾದ ಸುದ್ದಿ ತಿಳಿದ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಭಾರತೀಯ ವಿಜ್ಞಾನಿಗಳನ್ನು ಮುಕ್ತಕಂಠದಿಂದ ಅಭಿನಂದಿಸಿದ್ದಾರೆ.

ಈ ಯಶಸ್ಸಿನೊಂದಿಗೆ ಭಾರತವು ಬಾಹ್ಯಾಕಾಶದಲ್ಲಿ ಸಾರ್ವಭೌಮತ್ವ ಸ್ಥಾಪಿಸಿದ ಅಮೆರಿಕ, ರಷ್ಯ, ಜಪಾನ್‌, ಚೈನಾ ಮತ್ತು ಯೂರೋಪ್‌ ಒಕ್ಕೂಟವನ್ನೊಳಗೊಂಡ ಐದು ರಾಷ್ಟ್ರಗಳ ಸಾಲಿಗೆ ಸೇರ್ಪಡೆಯಾಯಿತು.
(ಇನ್‌ಫೋ ವಾರ್ತೆ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+