Get Updates
Get notified of breaking news, exclusive insights, and must-see stories!

‘ಸೈಬರ್‌ ಕ್ರೆೃಂ ತನಿಖೆಗೆ ಬೆಂಗಳೂರಲ್ಲಿವಿಶೇಷ ಪೊಲೀಸ್‌ ಠಾಣೆ’

ಬೆಂಗಳೂರು : ಸೈಬರ್‌ ಅಪರಾಧಗಳನ್ನು ಪತ್ತೆ ಹಚ್ಚುವುದು ಹೇಗೆ? ತಡೆಯುವುದು ಹೇಗೆ? ಎಂಬ ಬಗ್ಗೆ ಪೊಲೀಸರನ್ನು ಸನ್ನದ್ಧಗೊಳಿಸಲು ಬೆಂಗಳೂರು ನಗರದಲ್ಲಿ ಎರಡು ದಿನಗಳ ಕಾರ್ಯಾಗಾರ ಬುಧವಾರ ಮುಕ್ತಾಯಗೊಂಡಿತು. ಈ ತರಬೇತಿ ಶಿಬಿರದಲ್ಲಿ ಹೈದರಾಬಾದ್‌, ತಮಿಳುನಾಡು, ಪಾಂಡಿಚೇರಿ ಹಾಗೂ ಕರ್ನಾಟಕದ ಹಲವು ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಸೈಬರ್‌ ಪಾತಕಗಳನ್ನು ಪತ್ತೆಹಚ್ಚಲು ಹಾಗೂ ತಡೆಯಲು ಪೊಲೀಸರಿಗೆ ಅಗತ್ಯವಾದ ಕೌಶಲವನ್ನು ಹೆಚ್ಚಿಸುವುದು ಈ ಕಾರ್ಯಾಗಾರದ ಉದ್ದೇಶವಾಗಿತ್ತು. ಸೈಬರ್‌ ಕ್ರೆೃಂ ತನಿಖೆಗೆ ಹಾಗೂ ವಿಚಾರಣೆಗೆ ನಗರದಲ್ಲಿ ವಿಶೇಷ ಪೊಲೀಸ್‌ ಠಾಣೆ ಸ್ಥಾಪಿಸುವ ಪ್ರಸ್ತಾವವೂ ಇದ್ದು, ರಾಜ್ಯಸರಕಾರ ಒಪ್ಪಿಗೆ ನೀಡಲಿದೆ ಎಂದು ಸಿ.ಓ.ಡಿಯ ಐಜಿಪಿ ವಿ.ವಿ. ಭಾಸ್ಕರ್‌ ಕಾರ್ಯಾಗಾರದಲ್ಲಿ ತಿಳಿಸಿದರು.

ಈ ಠಾಣೆಯು ವಿವಿಧ ರಾಜ್ಯಗಳೊಂದಿಗೆ ಸಂಪರ್ಕ ಸಂವಹನ ಕೇಂದ್ರವಾಗಿ ಕೆಲಸ ಮಾಡಲಿದೆ ಎಂದರು. ಕೇಂದ್ರ ಹಾಗೂ ರಾಜ್ಯದಲ್ಲಿರುವ ತನಿಖಾ ದಳಗಳ ನಡುವೆ ಪರಸ್ಪರ ಸಹಕಾರ ಮೂಡಿಸಲು ಈ ಕಾರ್ಯಾಗಾರದಿಂದ ಅನುವಾಯಿತು ಎಂದೂ ಅವರು ಹೇಳಿದರು. ಸಿ.ಬಿ.ಐ ಹಾಗೂ ರಾಜ್ಯ ಸಿ.ಓ.ಡಿ ಸಂಯುಕ್ತಾಶ್ರಯದಲ್ಲಿ ಈ ತರಬೇತಿ ಶಿಬಿರ ಏರ್ಪಡಿಸಲಾಗಿತ್ತು.

ಕರ್ನಾಟಕದಲ್ಲಿ 1999ರಿಂದಲೇ ಸೈಬರ್‌ ಅಪರಾಧಗಳ ತಡೆಗೆ ತನಿಖಾದಳ ರೂಪುಗೊಂಡಿದ್ದು, ಕಾರ್ಯಪ್ರವೃತ್ತವಾಗಿದೆ. ನಗ-ರ-ದ-ಲ್ಲಿ-ನ ಸೈಬ-ರ್‌ ಕೆಫೆ-ಗ-ಳು, ತಂತ್ರ-ಜ್ಞ-ರು ಹಾಗೂ ಇಂ-ಡಿ-ಯ-ನ್‌ ಇ-ನ್‌-ಸ್ಟಿ-ಟ್ಯೂ-ಟ್‌ ಆಫ್‌ ಸೈನ್ಸ್‌-ನ ಅಧಿ-ಕಾ-ರಿ-ಗ-ಳೊಂ-ದಿ-ಗೆ ಉನ್ನ-ತ ಪೊಲೀ-ಸ್‌ ಅಧಿ-ಕಾ-ರಿ-ಗ-ಳು -ಸ-ಮಾ-ಲೋ-ಚ-ನೆ ನಡೆ-ಸಿ ಸೈಬ-ರ್‌ ಅಪ-ರಾ-ಧ-ಗ-ಳ-ನ್ನು ತಡೆ-ಯ-ಲು ಯೋಜ-ನೆ-ಗ-ಳ-ನ್ನು ರೂಪಿ-ಸಿದ್ದಾರೆ.

ಕೇಂದ್ರದ ವಿಜ್ಞಾ-ನ ಮತ್ತು ತಂತ್ರ-ಜ್ಞಾ-ನ -ಕು-ರಿ-ತ ಸಂಸ-ತ್ತಿ-ನ ಸ್ಥಾಯಿ ಸಮಿ-ತಿ-ಯು ಸೈಬ-ರ್‌ ಅಪ-ರಾ-ಧಿ-ಗ-ಳಿ-ಗೆ 3 ವ-ರ್ಷ-ಗ-ಳ ಜೈಲು-ಶಿಕ್ಷೆ ಅಥ-ವಾ 2 ಲಕ್ಷ ರುಪಾ-ಯಿ-ವ-ರೆ-ಗೆ ದಂಡ ವಿಧಿ-ಸ-ಬೇ-ಕೆಂ-ದು -ಸ-ಲ-ಹೆ ನೀಡಿತ್ತು. ಸಚಿವ ಸಂಪುಟ ಇದಕ್ಕೆ ಅನುಮೋದನೆಯನ್ನೂ ನೀಡಿತ್ತು.

ಸೈಬರ್‌ ತಂತ್ರಜ್ಞಾನ ವಿಶ್ವ ವ್ಯಾಪಿಯಾಗುತ್ತಿರುವಂತೆಯೇ ರಾಷ್ಟ್ರದಲ್ಲಿ ಅಧಿಕಗೊಳ್ಳುತ್ತಿರುವ ಸೈಬರ್‌ ಅಪರಾಧಗಳನ್ನು ತಡೆಗಟ್ಟಲು ಸಮಗ್ರ ಕಾಯಿದೆಯಾಂದನ್ನು ತರಲು ಸಹ ಕೇಂದ್ರ ಸರಕಾರ ನಿರ್ಧರಿಸಿದ್ದು, ಬೆಂಗಳೂರಿನಲ್ಲಿ ನಡೆದ ಈ ತರಬೇತಿ ಕಾರ್ಯಾಗಾರಕ್ಕೆ ಮಹತ್ವ ಬಂದಿದೆ.

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+