Get Updates
Get notified of breaking news, exclusive insights, and must-see stories!

ಮೈಸೂರು ಸುತ್ತಮುತ್ತ ಮಳೆ

ಬೆಂಗಳೂರು : ಉತ್ತರ ಒಳನಾಡಿನಲ್ಲಿ ಒಣಹವೆ ಮೂಡಿದ್ದರೆ, ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಅಲ್ಲಲ್ಲಿ ಚದುರಿದಂತೆ ಗುಡುಗು ಸಹಿತ ಮಳೆ ಆಗಿದೆ. ಮೈಸೂರು, ಮಂಡ್ಯ, ಶ್ರೀರಂಗಪಟ್ಟಣದಲ್ಲಿ ತಲಾ 8 ಸೆಂಟಿ ಮೀಟರ್‌, ಬಳ್ಳಾರಿಯಲ್ಲಿ 7, ಗುಂಡ್ಲುಪೇಟೆಯಲ್ಲಿ 6, ಬೆಂಗಳೂರು, ಚಿಕ್ಕಮಗಳೂರುಗಳಲ್ಲಿ ತಲಾ 5 ಸೆಂಟಿ ಮೀಟರ್‌ ಮಳೆ ಬಿದ್ದಿದೆ.

ಕರ್ನಾಟಕದ ಹೆಮ್ಮೆಯ ಕೆ.ಆರ್‌.ಎಸ್‌.ನ ನೀರಿನ ಮಟ್ಟ ಕೆಲವೆ ದಿನಗಳ ಹಿಂದೆ ಇಳಿದು ಮತ್ತೆ ನೀರಿನಲ್ಲಿ ಮುಳುಗಿಹ ವೇಣುಗೋಪಾಲ ಸ್ವಾಮಿಯ ದೇವಾಲಯದ ಗೋಪುರ ದರ್ಶನ ಆಗಿತ್ತು. ಈಗ ಮೈಸೂರು ಹಾಗೂ ಸುತ್ತಮುತ್ತ ಮಳೆ ಬಿದ್ದಿದ್ದು ಹಳೆ ಮೈಸೂರಿಗರಿಗೆ ಆನಂದ ತಂದಿದೆ.

ಬೆಂಗಳೂರಲ್ಲಿ ಮಂಗಳವಾರ ಬೆಳಗ್ಗೆ ಭಾಗಶಃ ಮೋಡ ಮುಸುಕಿತ್ತು. ಮಧ್ಯಾಹ್ನವೆಲ್ಲಾ ಬಿಸಿಲು ಕಾದಿತ್ತು. ಆದರೂ, ಒಟ್ಟಾರೆಯಾಗಿ ಹವಾಮಾನ ಆಹ್ಲಾದಕರವಾಗಿತ್ತು.

ಕಳೆದ 24 ಗಂಟೆಗಳ ಅವಧಿಯಲ್ಲಿ ರಾಯಚೂರಿನಲ್ಲಿ 38.8 ಡಿಗ್ರಿ ಸೆಲ್ಸಿಯಸ್‌ ಅತ್ಯಧಿಕ ತಾಪಮಾನ ದಾಖಲಾಗಿದ್ದರೆ, ದಕ್ಷಿಣ ಭಾರತದ ಚಿರಾಪುಂಜಿ ಎಂದೇ ಖ್ಯಾತವಾದ ಆಗುಂಬೆಯಲ್ಲಿ ಅತಿ ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್‌ ಇತ್ತು.

ಮುಂದಿನ 24 ಗಂಟೆಗಳ ಹವಾಮಾನ ಮುನ್ಸೂಚನೆಯಂತೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮೋಡ ಮುಸುಕಿದ ವಾತಾವರಣ ಇದ್ದು, ಕೆಲವೆಡೆ ಗುಡುಗು ಸಹಿತ ಸುರಿಮಳೆ ಬೀಳುವ ಸಂಭವ ಇದೆ. ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾಗಶಃ ಮೋಡ ಇದ್ದು ಸಂಜೆ ಮಳೆ ಬೀಳುವ ಸಾಧ್ಯತೆ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+