ಕೇಳ್ರಪ್ಪೋ... ಸಿಸ್ಕೋದಿಂದ 8500 ಜನ ಔಟಂತೆ !
ಅಮೆರಿಕ : ದೇಶದ ಮಾಹಿತಿ ತಂತ್ರಜ್ಞಾನ ಮಂದಿಗೆ ಇನ್ನೂ ನಿದ್ದೆ ಹತ್ತುತ್ತಿಲ ್ಲ. ಹೆಸರಾಂತ ಕಂಪನಿ ಸಿಸ್ಕೋ ಸಿಸ್ಟಂಸ್ ಎಂಟೂವರೆ ಸಾವಿರ ಕೆಲಸಗಾರರನ್ನು ಮನೆಗೆ ಕಳುಹಿಸಲಿದೆ. ಅಂದರೆ ಕಂಪನಿಯ ಒಟ್ಟು ಸಿಬ್ಬಂದಿಯ 17 ಪ್ರತಿಶತ ಕೆಲಸಗಾರರು ಮನೆಗೆ.
ವಿತ್ತ ವಾರ್ಷಿಕದ ಮೂರನೇ ತ್ರೆೃಮಾಸಿಕದಲ್ಲಿ ಕಂಪನಿಯ ಮಾರಾಟದ ಪ್ರಮಾಣದಲ್ಲಿ ಶೇ.30ರಷ್ಟು ಇಳಿಕೆಯಾಗಲಿದೆ ಎಂಬ ಲೆಕ್ಕಾಚಾರವೇ ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಲು ಕಾರಣ. ಎರಡನೇ ತ್ರೆೃ ಮಾಸಿಕದಲ್ಲಿ 6.75 ಬಿಲಿಯನ್ ಬೆಲೆಯ ಉತ್ಪನ್ನಗಳನ್ನು ಮಾರಾಟ ಮಾಡಿ, ದಾಖಲೆ ಸೃಷ್ಟಿಸಿರುವ ಸಿಸ್ಕೋ ಈಗ ಕಂಗಾಲು. ಭಾರತದ ಐಟಿ ದಿಗ್ಗಜ ಸಂಸ್ಥೆ ಇನ್ಫೋಸಿಸ್ ತನ್ನ ವಾರ್ಷಿಕ ವಿತ್ತ ವರದಿಯಲ್ಲಿ ಮುಂದಿನ ಲೆಕ್ಕಾಚಾರ (ಪ್ರಸ್ತುತ ವಿತ್ತ ವರ್ಷದಲ್ಲಿ ಬರುವ ಲಾಭ ಕೇವಲ ಶೇ.30) ಹೇಳಿ ಶಾಕ್ ಕೊಟ್ಟಂತೆಯೇ ಇಲ್ಲಿ ಈಗ ಸಿಸ್ಕೋ ನಡೆ ಆತಂಕ ಹುಟ್ಟಿಸಿದೆ.
ಏಷ್ಯಾ ಪೆಸಿಫಿಕ್ ಹಾಗೂ ಯೂರೋಪ್‌ನಲ್ಲಿ ಸಿಸ್ಕೋ ಉತ್ಪನ್ನಗಳಿಗೆ ಇರುವ ಮಾರುಕಟ್ಟೆ ಈಗ ಕುಸಿದಿದೆ. ಕಂಪನಿಯ ಸ್ಪರ್ಧಿಗಳಾದ ನಾರ್ಟೆಲ್ ನೆಟ್‌ವರ್ಕ್ಸ್, ಲ್ಯೂಸೆಂಟ್ ಟೆಕ್ನಾಲಜೀಸ್ ಮೊದಲಾದವು ಈಗಾಗಲೇ ಸಿಬ್ಬಂದಿ ಸಂಖ್ಯೆಯಲ್ಲಿ ಕಡಿತ ಮಾಡಿದ್ದಾರೆ. ಈಗ ಸಿಸ್ಕೋ ಕೂಡ ತನ್ನ ಪ್ರತಿಸ್ಪರ್ಧಿಗಳ ಸ್ಥಿತಿಯಿಂದ ಭಿನ್ನವಾಗೇನೂ ಇಲ್ಲ . ಮುಂದೆ ಎರಗಲಿರುವ ಪ್ರವಾಹಕ್ಕೆ ನಾವು ಕೊಚ್ಚಿ ಹೋಗದಂತೆ ಗೋಡೆ ಕಟ್ಟಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸಿಬ್ಬಂದಿ ಸಂಖ್ಯೆಯಲ್ಲಿ ಕಡಿತ ಅನಿವಾರ್ಯ. ಈ ನಡೆಯಿಂದ ಕಂಪನಿಗೆ 3.7 ಬಿಲಿಯನ್ ಡಾಲರ್ ಹಣ ಉಳಿಯಲಿದೆ ಎನ್ನುತ್ತಾರೆ ಕಂಪನಿಯ ಹಿರಿಯ ಅಧಿಕಾರಿ. ಒಟ್ಟಿನಲ್ಲಿ ಮಾಹಿತಿ ತಂತ್ರಜ್ಞಾನಕ್ಕೆ ಇದು ಶನಿಗಾಲ.
(ರಾಯ್ಟರ್ಸ್)
ವಾರ್ತಾಸಂಚಯ
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications