Get Updates
Get notified of breaking news, exclusive insights, and must-see stories!

ರಾಜ್ಯದಲ್ಲಿ ಬೀಟಿ, ಅವಸರ ಬೇಡಿ - ಡಾ.ಟಿ.ಎಂ.ಮಂಜುನಾಥ್‌

ಬೆಂಗಳೂರು : ಜೈವಿಕ ತಂತ್ರಜ್ಞಾನದಿಂದ ಅಭಿವೃದ್ಧಿ ಪಡಿಸಲಾದ ಕೃಷಿ ತಳಿಗಳು ನಮ್ಮ ರಾಜ್ಯದಲ್ಲಿ ಇನ್ನೂ ಪ್ರಯೋಗಾರ್ಥವಾಗಿವೆ. ಈ ಕಾರಣ ಅವುಗಳಲ್ಲಿ ಕೆಲವು ನ್ಯೂನತೆಗಳೂ ಇವೆ. ಹೀಗಾಗಿ ಅವಸರದಲ್ಲಿ ಹೆಜ್ಜೆ ಇಡಕೂಡದು ಎಂದು ಮಾನ್ಸಾಂಟೊ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಟಿ.ಎಂ.ಮಂಜುನಾಥ್‌ ಹೇಳಿದ್ದಾರೆ.

ನಗರದ ಅರಮನೆ ಆವರಣದಲ್ಲಿ ನಡೆದಿರುವ ದೇಶದ ಪ್ರಥಮ ಜೈವಿಕ ತಂತ್ರಜ್ಞಾನ ಮೇಳ ಬೆಂಗಳೂರು ಬಯೋ ಡಾಟ್‌ಕಾಂನಲ್ಲಿ ಸೋಮವಾರ ವಿಚಾರ ಸಂಕಿರಣವೊಂದರಲ್ಲಿ ಅವರು ಮಾತಾಡುತ್ತಿದ್ದರು. ಬಿಟಿ ಹತ್ತಿ ಬೆಳೆ ರಾಜ್ಯದ ಪ್ರಯೋಗಾರ್ಥ ಕೃಷಿ. ಯಾವುದೋ ಒಂದು ಪ್ರಬೇಧದ ಕೀಟಾಣುಗಳಿಂದ ಬಿಟಿ ಹತ್ತಿಗೆ ಬಾಧೆಯಾಗದು. ಆದರೆ ಇನ್ನಿತರ ಕೀಟಾಣುಗಳಿಂದ ರಕ್ಷಿಸಲು ರಾಸಾಯನಿಕಗಳ ಬಳಕೆ ಅನಿವಾರ್ಯ ಎಂದು ಮಂಜುನಾಥ್‌ ಪ್ರಶ್ನೆಯಾಂದಕ್ಕೆ ಉತ್ತರ ಕೊಟ್ಟರು.

ಆಯುರ್ವೇದ ಮೊದಲಾದ ಪರ್ಯಾಯ ಚಿಕಿತ್ಸಾ ವಿಧಾನಗಳು ಈಚಿನ ದಿನಗಳು ಬಹಳ ಯಶಸ್ವಿಯಾಗಿವೆ ಎಂದು ಅದೇ ವಿಚಾರ ಸಂಕಿರಣದಲ್ಲಿ ಮಾತನಾಡಿದ ಡಾ.ರಾಘವನ್‌ ತಿಳಿಸಿದರು.

ಜೈವಿಕ ತಂತ್ರಜ್ಞಾನ ಕ್ಷೇತ್ರದ ವ್ಯಾಪ್ತಿ, ಈ ಕ್ಷೇತ್ರದಲ್ಲಿ ಯುವಕರಿಗಿರುವ ಅವಕಾಶಗಳು, ಎಚ್‌ಐವಿ ಪೀಡಿತ ರೋಗಿಗಳಿಗೆ ನೂತನ ಚಿಕಿತ್ಸೆ, ಪೇಟೆಂಟ್‌ ಮೊದಲಾದ ವಿಷಯಗಳ ಕುರಿತು ವಿವಿಧ ವಿಚಾರ ಸಂಕಿರಣಗಳಲ್ಲಿ ಚರ್ಚಿಸಲಾಯಿತು.

ಬೆಂಗಳೂರಿನ ಮಳಿಗೆಗಳಿಗೆ ಪುರಸ್ಕಾರ : ರಾಜ್ಯದ ಜೈವಿಕ ತಂತ್ರಜ್ಞಾನ ಇಲಾಖೆಯ ಹಾಗೂ ರಾಜ್ಯ ತೋಟಗಾರಿಕಾ ಇಲಾಖೆಯ ಹುಳಿಮಾವು ಜೈವಿಕ ತಂತ್ರಜ್ಞಾನ ಮಳಿಗೆಗಳಿಗೆ ಉತ್ತಮ ಮಳಿಗೆ ಪ್ರಶಸ್ತಿಗಳು ದೊರೆತಿವೆ. ಧಾರಾಕಾರ ಸುರಿಯುತ್ತಿರುವ ಮಳೆಯ ನಡುವೆಯೂ ಈವರೆಗೆ 15 ಸಾವಿರ ಮಂದಿ ಈ ಮೇಳಕ್ಕೆ ಭೆಟ್ಟಿ ನೀಡಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+