ಶಾರ್ಜಾದಲ್ಲಿ ಸಚಿನ್ ಇದ್ದಿದ್ದರೆ... ಜಿಯಾಗೂ ಹೀಗನ್ನಿಸುತ್ತಿರಬಹುದೆ?
ಶಾರ್ಜಾ : ಪ್ರಸ್ತುತ ಇಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿ ನೀರಸ ಅನ್ನಿಸುತ್ತಿದೆ. ಏಕಮುಖವಾದ ಪಂದ್ಯಗಳಲ್ಲಿ ಸದ್ಯಕ್ಕೆ ಪಾಕಿಸ್ತಾನವೇ ದೊರೆ. ಪೋಟಿಯೇ ಇಲ್ಲದ ಪಂದ್ಯಗಳು ಮಜಾ ಕೊಡುತ್ತಿಲ್ಲ. ಅಲ್ಲಿ ತೆಂಡೂಲ್ಕರ್ ಇದ್ದಿದ್ದರೆ... ಎಂಬಂಥಾ ಮಾತುಗಳು ಸರ್ವೇ ಸಾಮಾನ್ಯ.
ಭಾರತದೊಟ್ಟಿಗೆ ಇನ್ನು ಮುಂದೆ ಪಾಕ್ ಎಲ್ಲೂ ಕ್ರಿಕೆಟ್ಟೇ ಆಡೋದಿಲ್ಲ ಅಂತ ಎದೆ ತಟ್ಟಿಕೊಂಡು ಹೇಳಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ತಾಕ್ವಿರ್ ಜಿಯಾ ಕೂಡ ತಮ್ಮ ಪಟ್ಟು ಸಡಿಲಿಸಿದ್ದಾರೆ. ಭಾರತ- ಪಾಕ್ ಆಟದ ಮಜಾ ಅವರಿಗೂ ಬೇಕು ಅನ್ನೋದನ್ನ ಅವರ ಈ ಮಾತುಗಳು ಸ್ಪಷ್ಟಪಡಿಸುತ್ತವೆ-
- ನಮಗೇನೋ ಆಡಲು ಇಷ್ಟ . ಆದರೆ ಭಾರತದ ಕಥೆಯೇನು?
- 2 ವರ್ಷಗಳಿಂದ ಪಾಕ್ ವಿರುದ್ಧ ಭಾರತ ಕ್ರಿಕೆಟ್ಟಾಡದಿರುವುದು, ಬರುವ ಆಗಸ್ಟ್‌ನಲ್ಲಿ ನಡೆಯಲಿರುವ ಏಷ್ಯನ್ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲೂ ಭಾರತ ಆಡುವುದರ ಬಗ್ಗೆ ಅತೀವ ಅನುಮಾನ ಹುಟ್ಟಿಸಿದೆ
- ಅನಿಯಮಿತ ಸ್ಥಳಗಳಲ್ಲಿ ನಡೆಯಬೇಕಿರುವ ಏಷ್ಯನ್ ಟೆಸ್ಟ್ ಚಾಂಪಿಯನ್‌ಷಿಪ್ ವಿಷಯದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲು ಭಾರತ, ಪಾಕಿಸ್ತಾನ, ಶ್ರೀಲಂಕಾ ಹಾಗೂ ಬಾಂಗ್ಲಾದೇಶದ ಅಧಿಕಾರಿಗಳು ಈ ವಾರ ಸಭೆ ಸೇರಬೇಕಿತ್ತು. ಆದರೆ ನಿರ್ಣಯ ಕಾರ್ಯಗತವಾಗುವ ಕಿಂಚಿತ್ತೂ ನಿರೀಕ್ಷೆಯಿಲ್ಲದಿರುವ ಈ ಸಂದರ್ಭದಲ್ಲಿ ಸಭೆ ನಿರರ್ಥಕ
- ಭಾರತ ಕೂಡ ಈ ಚಾಂಪಿಯನ್‌ಷಿಪ್ ಬಗ್ಗೆ ಎಳ್ಳಷ್ಟೂ ಯೋಚಿಸದೆ ಈಗಾಗಲೇ ವಿವಿಧ ಪ್ರವಾಸಗಳಿಗೆ ಅಣಿಯಾಗಿಬಿಟ್ಟಿದೆ. ಮೇ- ಜೂನ್‌ನಲ್ಲಿ ಜಿಂಬಾಬ್ವೆ, ಜುಲೈ- ಆಗಸ್ಟ್‌ನಲ್ಲಿ ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡ ಸಿದ್ಧವಾಗಿದೆ. ಮೆಲ್ಬೋರ್ನ್‌ನ ಕೊಲೋನಿಯಲ್ ಸ್ಟೇಡಿಯಂ ಹಾಗೂ ಬ್ರಿಸ್ಬೇನ್‌ನ ಒಳಾಂಗಣ ಕ್ರೀಡಾಕಣದಲ್ಲಿ ಬರುವ ಸೆಪ್ಟೆಂಬರ್ ತಿಂಗಳಲ್ಲಿ ಭಾರತ- ಆಸ್ಟ್ರೇಲಿಯಾ ಸೆಣಸು ನಡೆಯುವ ಸಾಧ್ಯತೆಗಳೂ ಇವೆ.
- ಬರುವ ವರ್ಷ ಭಾರತದಲ್ಲಿ ನಡೆಯಲಿರುವ ಐಸಿಸಿ ನಾಕ್‌ಔಟ್ ಟೂರ್ನಿಯಲ್ಲಿ ಪಾಕಿಸ್ತಾನ ಭಾಗವಹಿಸುವುದರ ಬಗೆಗೂ ಅನುಮಾನಗಳಿವೆ
- ನನ್ನ ಮೊದಲ ಪ್ರತಿಕ್ರಿಯೆ- ಭಾರತದಲ್ಲಿ ಆಡುವುದು ಬೇಡ ಎಂಬುದು. ಆದರೆ ಸರ್ಕಾರ ನಿರ್ದೇಶಿಸಿದಲ್ಲಿ ನಾವು ಆಡಲೇ ಬೇಕಾಗುತ್ತದೆ
- ಐಸಿಸಿ ಅಭಿವೃದ್ಧಿಗಾಗಿ ದೇಣಿಗೆ ಸಂಗ್ರಹಿಸಲು, ಪ್ರತಿ 2 ವರ್ಷಗಳಿಗೊಮ್ಮೆ 10 ಟೆಸ್ಟ್ ಕ್ರಿಕೆಟ್ ತಂಡಗಳು ಸೆಣಸುತ್ತವೆ. ಆದರೆ ಮುಂದೇನು? ನೆರೆದೇಶಗಳ ತಾಪತ್ರಯ, ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸಲು ಫುಟ್‌ಬಾಲ್ ಆಡಳಿತ ‘ಫಿಫಾ’ ಮಾದರಿಯಲ್ಲಿ ಐಸಿಸಿ ಕೂಡ ಸುಧಾರಣೆಗಳನ್ನು ತಂದುಕೊಳ್ಳಬೇಕು. ಫಿಫಾದ ಕೆಲವು ನಿರ್ದೇಶನ ಹಾಗೂ ತತ್ತ್ವಗಳನ್ನು ಐಸಿಸಿ ಅಳವಡಿಸಿಕೊಂಡಲ್ಲಿ ಸಮಸ್ಯೆಗಳನ್ನು ಬಗೆಹರಿಸಬಹುದು
- ಇನ್ನು 3 ವರ್ಷಗಳ ಕಾಲ ಶಾರ್ಜಾ, ಟೊರಾಂಟೋ ಮೊದಲಾದ ಅನಿಯಮಿತ ಸ್ಥಳಗಳಲ್ಲಿ ಕ್ರಿಕೆಟ್ ಆಡೆವು ಎಂಬ ಭಾರತದ ನಿರ್ಧಾರದ ಹಿಂದೆ ಪಾಕಿಸ್ತಾನದೊಟ್ಟಿಗೆ ಆಡಕೂಡದೆಂಬ ಛಾಯೆ ಇದೆ
- ಪಾಕ್ ಒಟ್ಟಿಗೆ ಕ್ರಿಕೆಟ್ ಆಡಕೂಡದೆಂಬುದೇ ಭಾರತದ ಮೊದಲ ಪಟ್ಟಾಗಿತ್ತು. ಆದರೆ ಐಸಿಸಿ ಅಧ್ಯಕ್ಷ ಮಾಲ್ಕಂ ಗ್ರೇ ಭಾರತಕ್ಕೆ ಭೆಟ್ಟಿ ಕೊಟ್ಟಾಗ, ಅದು ತನ್ನ ವರಸೆ ಬದಲಿಸಿ ಅನಿಯಮಿತ ಜಾಗೆಗಳಲ್ಲಿ ಆಡೆವು ಎಂದು ಠರಾವು ಹೊರಡಿಸಿತು
(ಎಎಫ್‌ಪಿ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications