Get Updates
Get notified of breaking news, exclusive insights, and must-see stories!

ಮುಕ್ತ ಚರ್ಚೆಗೆ ಬನ್ನಿ , ವಿರೋಧಿಗಳಿಗೆ ಮಾತೆಮಹಾದೇವಿ ಸವಾಲು

ಹುಬ್ಬಳ್ಳಿ : ನಿರಾಕಾರನಾದ ಲಿಂಗದೇವರನ್ನು ಕೂಡಲಸಂಗಮ ಎಂದು ಬಸವಣ್ಣನವರು ಹೆಸರಿಸಿದ್ದಾರೆ. ಕೂಡಲಸಂಗಮ ಎನ್ನುವ ಪದ ಸೀಮಿತಾರ್ಥ ಹೊಂದಿರುವುದರಿಂದ, ತಾತ್ವಿಕ ಹಿನ್ನೆಲೆಯಲ್ಲಿ ಅಂಕಿತವನ್ನು ಲಿಂಗದೇವ ಎಂದು ಬಳಸಿರುವುದಾಗಿ ಸಮರ್ಥಿಸಿಕೊಂಡಿರುವ ಮಾತೆ ಮಹಾದೇವಿ, ಮುಕ್ತ ಚರ್ಚೆಗೆ ಬರುವಂತೆ ತಮ್ಮ ಟೀಕಾಕರರಿಗೆ ಸವಾಲೆಸೆದಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಅಕ್ಕ ಮಹಾದೇವಿ ವಚನವನ್ನು ತಿದ್ದಿಲ್ಲ , ಬದಲಾಗಿ ಶರವಾಣಿ ಧ್ವನಿ ಮುದ್ರಿಕೆಯಲ್ಲಿನ ನಾಲ್ಕು ವಚನಗಳಿಗೆ ಚೆನ್ನಮಲ್ಲಿಕಾರ್ಜುನ ಎಂದಿರುವಲ್ಲಿ ಲಿಂಗದೇವ ಎಂದು ಬಳಸಲಾಗಿದೆ ಅಷ್ಟೇ ಎಂದರು. ಬಸವಣ್ಣ ಹಾಗೂ ಅಕ್ಕನವರ ವಚನಗಳನ್ನು ಬದಲಿಸಿರುವ ಹಿನ್ನೆಲೆಯಲ್ಲಿ ತಮಗೆ ಯಾವುದೇ ದುರುದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ನಿರಾಕಾರನಾದ ದೇವರಿಗೆ ಆಕಾರ, ಸ್ವರೂಪವಿಲ್ಲ ಎಂದಿರುವ ಬಸವಾದಿ ಪ್ರಮಥರ ತತ್ವ, ಆದರ್ಶಗಳನ್ನು ಎತ್ತಿ ಹಿಡಿದಿರುವುದಾಗಿ ಬಣ್ಣಿಸಿಕೊಂಡರು.

ಸಾಮಾಜಿಕ ಬಹಿಷ್ಕಾರ ಹಾಕಬೇಕೆನ್ನುವ ವೀರಶೈವ ಪ್ರಮುಖರ ಬೆದರಿಕೆಗೆ ವಿಚಲಿತರಾಗಿಲ್ಲ ಎಂದು ಸ್ಪಷ್ಟಪಡಿಸಿದ ಮಾತೆ ಮಹಾದೇವಿ, ಯಾರು ಏನೇ ಹೇಳಲಿ, ತಾವು ಅದಕ್ಕೆ ಬಗ್ಗುವುದಿಲ್ಲ ಎಂದರು. ವೀರಶೈವ ಮಹಾಸಭಾದ ಪದಾಧಿಕಾರಿಗಳು ತಮ್ಮ ವಿರುದ್ಧ ಅಪ ಪ್ರಚಾರ ನಡೆಸುತ್ತಿದ್ದಾರೆ ಎಂದು ಆಪಾದಿಸಿದ ಮಹಾದೇವಿ, ಟೀಕಾಕಾರರನ್ನು ಮುಕ್ತ ಚರ್ಚೆಗೆ ಬರುವಂತೆ ಆಹ್ವಾನಿಸಿದರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+