ಆಸ್ಟ್ರೇಲಿಯಾ ವಿರುದ್ಧದ ಯಶಸ್ಸು ಆರಂಭ ಮಾತ್ರ- ಲಕ್ಷ್ಮಣ್
ಹೈದರಾಬಾದ್ : ಆಸ್ಟ್ರೇಲಿಯಾ ವಿರುದ್ಧದ ಅದ್ಭುತ ಯಶಸ್ಸು ಆರಂಭ ಮಾತ್ರ. ಆ ಯಶಸ್ಸಿನ ಮೇಲೆ ನನ್ನ ಕ್ರಿಕೆಟ್ ಕೆರಿಯರ್‌ನ ಸೌಧ ನಿರ್ಮಿಸಬೇಕಿದೆ ಎಂದು ಕಲ್ಕತ್ತಾ ಟೆಸ್ಟ್‌ನಲ್ಲಿ ಅಮೋಘ 281 ರನ್ ಚಚ್ಚಿದ ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.
ಮೂರನೇ ಕ್ರಮಾಂಕದಲ್ಲಿ ನಾನು ಆಡಲು ಬಂದದ್ದೇ ಈ ಎಲ್ಲಾ ತಿರುವುಗಳಿಗೆ ಕಾರಣವಾಯಿತು. ಮೊದಲನೇ ಕ್ರಮಾಂಕದಲ್ಲಿ ಇನಿಂಗ್ಸ್ ಪ್ರಾರಂಭಿಸುವುದು ನನಗೆ ಅಷ್ಟಾಗಿ ಒಗ್ಗದು ಎಂದು ಪಿಟಿಐನೊಂದಿಗೆ ಮಾತನಾಡಿರುವ 27 ರ ಹರಯದ ಸಾಂಪ್ರದಾಯಿಕ ಶೈಲಿಯ ಬ್ಯಾಟ್ಸ್‌ಮನ್ ಹೇಳಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಹಾಗೂ ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಲಕ್ಷ್ಮಣ್ ಭಾರತೀಯ ಬ್ಯಾಟ್ಸ್‌ಮನ್‌ಗಳ ಪೈಕಿ ಅತ್ಯಧಿಕ ಸರಾಸರಿ ಹೊಂದಿದ್ದಾರೆ.
ಮೊನ್ನಿನ ಸರಣಿಗೆ ಮುನ್ನ 13 ಒಂಡೇ ಮ್ಯಾಚ್‌ಗಳನ್ನು ಆಡಿದ್ದ ಲಕ್ಷ್ಮಣ್ ಗಳಿಸಿದ್ದು 86 ರನ್ ಮಾತ್ರ. ಕಾಂಗರೂಗಳ ವಿರುದ್ಧ ಆಡುವಾಗ ಈ ವೈಫಲ್ಯ ಕಣ್ಣೆದುರಿತ್ತು . ಹೆಚ್ಚಿನದನ್ನು ಸಾಧಿಸಬೇಕೆಂಬ ಕೆಚ್ಚು ಎದೆಯಾಳಗಿತ್ತು ಎನ್ನುತ್ತಾರೆ ಲಕ್ಷ್ಮಣ್. ದೇಶೀಯ ಕ್ರಿಕೆಟ್‌ನಲ್ಲಿ ಭಾರೀ ಮೊತ್ತಗಳನ್ನು ಕಲೆ ಹಾಕಿರುವ ಅವರು, ಸಂಕೋಚದ ಚಿಪ್ಪಿನಲ್ಲಿ ಕೂರುವ ವ್ಯಕ್ತಿ . ಅಂದಹಾಗೆ, 11 ವರ್ಷದ ಹುಡುಗನಿದ್ದಾಗ, ಕೋಚಿಂಗ್ ಕ್ಯಾಂಪ್‌ಗೆ ಸೇರ್ಪಡೆಯಾಗಿದ್ದಾಗ ಮುಂದೊಂದು ದಿನ ಅಂತರರಾಷ್ಟ್ರೀಯ ಮಟ್ಟದಲ್ಲಿ ಬ್ಯಾಟು ಬೀಸಬಹುದೆನ್ನುವ ಕಲ್ಪನೆ ಯಾರಿಗೂ ಇರಲಿಲ್ಲ .
ರೈಟ್ ಆತ್ಮ ವಿಶ್ವಾಸ ತುಂಬಿದರು, ಸಾಮರ್ಥ್ಯ ಗುರ್ತಿಸಿದರು
ತರಬೇತುದಾರ ಜಾನ್ ರೈಟ್ ಅವರ ಪ್ರೋತ್ಸಾಹವನ್ನು ಲಕ್ಷ್ಮಣ್ ನೆನೆಯುತ್ತಾರೆ. ನೀನೊಬ್ಬ ಪ್ರತಿಭಾವಂತ, ಚೆನ್ನಾಗಿ ಆಡುತ್ತೀ, ಆಡು ಎಂದು ರೈಟ್ ಬೆನ್ನು ತಟ್ಟಿದಾಗಲೇ ನನ್ನಲ್ಲಿ ಆತ್ಮ ವಿಶ್ವಾಸ ಮೊಳೆತಿದ್ದು . ಹೆತ್ತವರ, ಕುಟುಂಬದವರ ಪ್ರೋತ್ಸಾಹವಂತೂ ಸದಾ ಇದ್ದದ್ದೇ ಎನ್ನುತ್ತಾರೆ ಲಕ್ಷ್ಮಣ್. ಅವರ ಡ್ರಾಯಿಂಗ್ ರೂಂ ಅಲಂಕರಿಸಿರುವ ಸ್ಮರಣಿಕೆಗಳು, ಹೂಗಳು, ಬೊಕ್ಕೆಗಳು ಹಾಗೂ ಗಣೇಶ ಮತ್ತು ಸಾಯಿಬಾಬಾರ ಫೋಟೋಗಳು ಲಕ್ಷ್ಮಣ್‌ರ ಸಾಧನೆಗೆ ಸಾಕ್ಷಿಯಾಗಿವೆ.
ಅಜರುದ್ದೀನ್, ಗವಾಸ್ಕರ್ ಹಾಗೂ ರಿಚರ್ಡ್ಸ್ ಎಂದರೆ ಲಕ್ಷ್ಮಣ್‌ಗೆ ಅಚ್ಚುಮೆಚ್ಚು . ಗವಾಸ್ಕರ್ ಅವರ ತಾಳ್ಮೆ, ಅಜರ್ ಅವರ ರಿಸ್ಕೀ ಆಟ ಹಾಗೂ ರಿಚರ್ಡ್ಸ್‌ರ ಆಕ್ರಮಣಕಾರಿ ಧೋರಣೆ ನಂಗಿಷ್ಟ ಅನ್ನುತ್ತಾರೆ. ಈಗಿನವರಲ್ಲಿ ತೆಂಡೂಲ್ಕರ್ ಹಾಗೂ ಮಾರ್ಕ್ ವಾ ಇಷ್ಟವಂತೆ. ಬೌಲರ್‌ಗಳಲ್ಲಿ ವಾಸಿಂ ಅಕ್ರಂ ಅತ್ಯುತ್ತಮ, ನಮ್ಮವರೇ ಆದ ಶ್ರೀನಾಥ್, ಕುಂಬ್ಳೆ ಕೂಡ ಮೆಚ್ಚೆನ್ನುತ್ತಾರೆ.
ಅಪಾರ ಯಶಸ್ಸಿನ ನಡುವೆಯೂ ಲಕ್ಷ್ಮಣ್ ಟೀಕಾತೀತರೇನಲ್ಲ . ಅವರ ವಿಕೆಟ್ ನಡುವಣ ಓಟ ಅಷ್ಟು ತೃಪ್ತಿದಾಯಕವಾಗಿಲ್ಲ . ನಾನು ಸದಾ ಸುಧಾರಣೆಗಾಗಿ ತುಡಿಯುತ್ತೇನೆ ಎನ್ನುವ ಲಕ್ಷ್ಮಣ್ ಮೇ ತಿಂಗಳಲ್ಲಿ ಪ್ರಾರಂಭವಾಗುವ ಜಿಂಬಾಬ್ವೆ ವಿರುದ್ಧದ ಸೆಣಸನ್ನು ಎದುರು ನೋಡುತ್ತಿದ್ದಾರೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications