Get Updates
Get notified of breaking news, exclusive insights, and must-see stories!

ಮಾನನಷ್ಟ ವರದಿ : ಲಂಕೇಶ್‌ ಪತ್ರಿಕೆ ಕುಷ್ಟಗಿಗೆ ಜೈಲು

ಬೆಂಗಳೂರು : ಪದವಿ ಪೂರ್ವ ಶಿಕ್ಷಣ ಇಲಾಖೆಯ ಆಗಿನ ನಿರ್ದೇಶಕ ಬಿ.ಎ.ಹರೀಶ್‌ ಗೌಡರ ವಿರುದ್ಧ ಲಂಕೇಶ್‌ ಪತ್ರಿಕೆಯಲ್ಲಿ ಬರೆದಿದ್ದ ಲೇಖನ ಮಾನನಷ್ಟ ಮಾಡುವಂಥದ್ದು ಎಂದು ನಿರ್ಧರಿಸಿದ ಹೆಚ್ಚುವರಿ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌, ಪತ್ರಿಕೆಯ ವರದಿಗಾರ ಗಂಗಾಧರ ಕುಷ್ಟಗಿ ಅವರಿಗೆ 3 ತಿಂಗಳ ಸಾದಾ ಶಿಕ್ಷೆ ಹಾಗೂ 1 ಸಾವಿರ ರುಪಾಯಿ ದಂಡ ವಿಧಿಸಿದ್ದಾರೆ. ಇನ್ನಿಬ್ಬರು ವರದಿಗಾರರಾದ ರವೀಂದ್ರ ರೇಶ್ಮೆ ಹಾಗೂ ಟಿ.ಕೆ.ತ್ಯಾಗರಾಜ್‌ ಅವರಿಗೆ ತಲಾ 5 ಸಾವಿರ ರುಪಾಯಿ ದಂಡ ಹೇರಿದೆ.

ಮ್ಯಾಜಿಸ್ಟ್ರೇಟ್‌ ಪಿ.ಎ.ಶಿವಪ್ರಸಾದ್‌ ಗುರುವಾರ ಮಧ್ಯಾಹ್ನ ಈ ತೀರ್ಪನ್ನೊಳಗೊಂಡ ಆದೇಶ ನೀಡಿದರು. ಆದೇಶ ನೀಡಿದ ಸಂದರ್ಭದಲ್ಲಿ ಮೂವರೂ ಆರೋಪಿಗಳು ನ್ಯಾಯಾಲಯದಲ್ಲಿ ಹಾಜರಿದ್ದರು. ಕೇವಲ ದಂಡ ವಿಧಿಸಿರುವ ಆರೋಪಿಗಳಿಬ್ಬರು ಅದನ್ನು ಕಟ್ಟದಿದ್ದಲ್ಲಿ 2 ತಿಂಗಳ ಸೆರೆವಾಸ ಅನುಭವಿಸಬೇಕಾಗುತ್ತದೆ ಎಂದೂ ಮ್ಯಾಜಿಸ್ಟ್ರೇಟ್‌ ತಿಳಿಸಿದ್ದಾರೆ.

ಆದದ್ದೇನು ? : 1998ರ ಆಗಸ್ಟ್‌ ತಿಂಗಳ ಲಂಕೇಶ್‌ ಪತ್ರಿಕೆಯ 3 ಸಂಚಿಕೆಗಳಲ್ಲಿ , ಸಾಮಾನ್ಯ ಪ್ರವೇಶ ಪರೀಕ್ಷಾ ಘಟಕದ ವಿಶೇಷಾಧಿಕಾರಿಯೂ ಆಗಿದ್ದ ಹರೀಶ್‌ಗೌಡರ ವಿರುದ್ಧ ಅವಹೇಳನ ಮಾಡುವಂಥ ವರದಿಗಳನ್ನು ಪ್ರಕಟಿಸಲಾಗಿತ್ತು. ಇದು ಸುಳ್ಳೆಂದು ಹರೀಶ್‌ ಗೌಡ ನ್ಯಾಯಾಲಯದಲ್ಲಿ ಕ್ರಿಮಿನಲ್‌ ಮೊಕದ್ದಮೆ ಹೂಡಿದ್ದರು.

ಕನ್ನಡ ಉಪನ್ಯಾಸಕ ಎಲ್‌.ಎನ್‌.ಮುಕುಂದರಾಜ್‌ ಎಂಬುವರನ್ನು ಬೆಂಗಳೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಿಂದ ತುಮಕೂರು ತಾಲ್ಲೂಕಿನ ಕಾಲೇಜೊಂದಕ್ಕೆ ವರ್ಗಾವಣೆ ಮಾಡಿದ್ದರ ಫಲ ಆ ಲೇಖನವಾಗಿತ್ತು. ವಿಧಾನ ಪರಿಷತ್‌ ಸದಸ್ಯ ಎಸ್‌.ಚನ್ನಬಸವಯ್ಯ ತಮ್ಮ ಬೆಂಬಲಿಗರೊಟ್ಟಿಗೆ ಪದವಿ ಪೂರ್ವ ನಿರ್ದೇಶನಾಲಯದ ಮುಂದೆ ಧರಣಿ ಕೂತರೂ ನಾನು ವರ್ಗಾವಣೆ ಆದೇಶ ರದ್ದು ಮಾಡಲಿಲ್ಲ. ಈ ಕಾರಣಕ್ಕೆ ನನ್ನ ಮೇಲೆ ಇಲ್ಲ ಸಲ್ಲದ್ದನ್ನು ಲಂಕೇಶ್‌ ಪತ್ರಿಕೆ ಬರೆಯಿತು. ಹೋರಾಟದ ಹಾದಿಯಲ್ಲೇ ಮುಖ್ಯ ಆರೋಪಿ ಲಂಕೇಶ್‌ ಮೃತಪಟ್ಟರೂ, ನಾನು ಇತರೆ ಆರೋಪಿಗಳನ್ನು ಬಯಲಿಗೆ ಎಳೆಯಲು ಮೊಕದ್ದಮೆ ಮುಂದುವರೆಸಿದೆ. ಈಗ ಅದಕ್ಕೆ ಸತ್ಫಲ ದೊರೆತಿದೆ ಎಂದು ಹರೀಶ್‌ ಗೌಡ ಹರ್ಷದಿಂದ ಹೇಳಿದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+