ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಸ್‌ಕಾಂ ಅಧ್ಯಕ್ಷ ದೇವಾಂಗ್‌ ಮೆಹ್ತಾ ನಿಧನರಾದದ್ದು ಹೇಗೆ?

By Staff
|
Google Oneindia Kannada News

ಸಿಡ್ನಿ : ನಾಸ್‌ಕಾಂ ಅಧ್ಯಕ್ಷ ದೇವಾಂಗ್‌ ಮೆಹ್ತಾ ನಿಧನರಾಗಿದ್ದು ಹೃದಯಾಘಾತದಿಂದ ಎಂದು ಶವ ಪರೀಕ್ಷಾ ವರದಿ ಶುಕ್ರವಾರ ದೃಢಪಡಿಸಿದೆ.

ಅಪ-ರಾ-ಧ ಸಂಶೋ--ಧ-ನಾ (ಫೊರೆನ್ಸಿಕ್‌ ಸೈನ್ಸ್‌) ವೈದ್ಯರು ಶವಪರೀಕ್ಷೆ ನಡೆಸಿದಾಗ, 38ರ ಹರೆಯದ ದೇವಾಂಗ್‌ ಮೆಹ್ತಾ ಸಾವಿಗೆ ಹೃದಯಾಘಾತವೇ ಕಾರಣ ಎಂಬುದು ಖಚಿತವಾಗಿದೆ. ಪ್ರಸ್ತುತ ಸಿಡ್ನಿಯಲ್ಲಿರುವ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಪ್ರಮೋದ್‌ ಮಹಾಜನ್‌, ಮೆಹ್ತಾ ಅವರ ಕಳೇಬರ ತರುವ ಸಲುವಾಗಿ ಭಾರತಕ್ಕೆ ವಿಳಂಬವಾಗಿ ಹಿಂತಿರುಗಲಿದ್ದಾರೆ ಎಂದು ಸಿಡ್ನಿಯಲ್ಲಿನ ಭಾರತದ ಹಂಗಾಮಿ ಕನ್ಸಲ್‌ ಜನರಲ್‌ ಸುಧೀರ್‌ ಕುಮಾರ್‌ ಹೇಳಿದ್ದಾರೆ.

ನಾವು ಮೆಹ್ತಾ -ಅವರ ಪಾರ್ಥಿವ ಶರೀರ ಪಡೆಯಲು ಶತಾಯಗತಾಯ ಯತ್ನಿಸುತ್ತಿದ್ದೇವೆ. ಶುಕ್ರವಾರ ಗುಡ್‌ಫ್ರೆೃಡೆ ರಜೆ ಆದ್ದರಿಂದ ಇಲ್ಲಿನ ಪ್ರಕ್ರಿಯೆಯಲ್ಲಿ ವಿಳಂಬವಾಗಿದೆ. ಶುಕ್ರವಾರ ಇಳಿಸಂಜೆ ಹೊತ್ತಿಗೆ ಕಳೇಬರ ದೊರೆಯುವ ನಿರೀಕ್ಷೆಯಿದೆ ಎಂದು ಪ್ರಮೋದ್‌ ಮಹಾಜನ್‌ ತಿಳಿಸಿದ್ದಾರೆ.

ಮರಣಕ್ಕೆ ಮುನ್ನ : ಬುಧವಾರ ರಾತ್ರಿಯುನೈಟೆಡ್‌ ಇಂಡಿಯಾ ಅಸೋಸಿಯೇಷನ್‌ ಡಿನ್ನರ್‌ ನಂತರ ಮೆಹ್ತಾ ತಮ್ಮ ಸಹೋದರಿ ರುಪಾಲ್‌ ಮನೆಗೆ ಹೋಗಿದ್ದಾರೆ. ರುಪಾಲ್‌ ಕೈಲಿ ತಮಗಿಷ್ಟವಾದ ಮೆಕ್ಸಿಕನ್‌ ಅಡುಗೆ ಮಾಡಿಸಿ ತಿಂದು, ಮೆಚ್ಚಿದ್ದಾರೆ. ರುಪಾಲ್‌ರ 10 ವರ್ಷದ ಮಗಳ ಜೊತೆ ಕಂಪ್ಯೂಟರ್‌ನಲ್ಲಿ ಆಟ ಆಡಿದ್ದಾರೆ. ಹರಟೆ ಕೊಚ್ಚಿದ್ದಾರೆ. ರಾತ್ರಿ 1.45ಕ್ಕೆ ಅಲ್ಲಿಂದ ಹೊಟೇಲಿಗೆ ಹೊರಟಿದ್ದಾರೆ. ಇಷ್ಟೆಲ್ಲವನ್ನೂ ಹೇಳುವ ರುಪಾಲ್‌ಗೆ ಈಗ ತಮ್ಮ ಸೋದರನ ಸಾವನ್ನು ನಂಬಲಾಗುತ್ತಿಲ್ಲ. ಸಿಡ್ನಿಗೆ ಇದು ಮೆಹ್ತಾ ಕೊಟ್ಟ ಐದನೇ ಭೇಟಿ. ಈ ಬಾರಿ ತುಂಬಾ ಬಿಜಿಯಾಗಿದ್ದರು ಎಂದು ರುಪಾಲ್‌ ಹೇಳಿದ್ದಾರೆ.

ರುಪಾಲ್‌ ಸೋದರಿ ಅಮಿತ, ಮೆಹ್ತಾ ಪಾರ್ಥಿವ ಶರೀರವನ್ನು ದೆಹಲಿಗೆ ತರಲಿದ್ದಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X