ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಉನ್ನತ ವ್ಯಾಸಂಗದಲ್ಲಿ ಹೆಚ್ಚಿನ ಯಶಸ್ಸು ಗಳಿಸುತ್ತೀರಿ. ಈ ನಿಟ್ಟಿನಲ್ಲಿ ಮಿತ್ರರೊಬ್ಬರ ಸಹಾಯಹಸ್ತ ನಿಮಗೆ ದೊರೆಯಲಿದೆ. ಈ ಆತುರದಲ್ಲಿ ಆರೋಗ್ಯವನ್ನು ಎಡವಟ್ಟು ಮಾಡಿಕೊಂಡೀರಿ, ಆರೋಗ್ಯವೇ ಭಾಗ್ಯವಲ್ಲವೇ!ವೃಷಭ : ಸಟ್ಟಾ ಲಾಟರಿ ವ್ಯವಹಾರ ಅಷ್ಟೇನೂ ಲಾಭದಾಯಕ ಎನಿಸದು. ಉದ್ಯೋಗದಲ್ಲಿ ಸ್ವಂತಿಕೆಯನ್ನು ತೋರುವ ನಿಮ್ಮ ಪ್ರಯತ್ನವನ್ನು ಮೇಲಧಿಕಾರಿಗಳು ಗುರ್ತಿಸುತ್ತಾರೆ. ಸೃಜನಶೀಲ ಕೆಲಸಗಳಲ್ಲಿ ಗೆಲ್ಲುತ್ತೀರಿ.
ಮಿಥುನ : ಬಹಳ ದಿನಗಳ ನಂತರ ಮನೆಯವರನ್ನು ಸೇರಿಕೊಂಡಿರುವುದಕ್ಕೆ ಸಂತೋಷದ ಲಹರಿಯಲ್ಲಿದ್ದೀರಿ. ಸಣ್ಣ ಪುಟ್ಟ ಘಟನೆಗಳು ಎಷ್ಟು ಅಪ್ಯಾಯಮಾನ ಎನಿಸುತ್ತವೆ ಅನ್ನುವುದು ನಿಮ್ಮ ಅನುಭವಕ್ಕೆ ಬರುತ್ತದೆ.
ಕಟಕ : ಪ್ರೇಮಿ ಸಿಟ್ಟು ಮಾಡಿಕೊಂಡರೆ, ನೀವೂ ಮುನಿಸಿಕೊಂಡರೆ ಸರಿಹೋಗದು. ನಿಮ್ಮ ಅಭಿಪ್ರಾಯವನ್ನು ತಾಳ್ಮೆಯಿಂದ ಹೇಳಿನೋಡಿ. ಕೇಳಿಸಿಕೊಳ್ಳದಷ್ಟು ದಡ್ಡರೇನೂ ಅಲ್ಲ ಅವರು. ಸಂಜೆ ಒಂದಷ್ಟು ಸುತ್ತಾಟವಿದೆ.
ಸಿಂಹ : ರಾಜಕಾರಣಿಗಳಿಗೆ ಕಷ್ಟದ ದಿನ. ಮುಖಂಡರ ನಂಬುಗೆಯನ್ನು ಉಳಿಸಿಕೊಳ್ಳಲು ಸಾಕಷ್ಟು ಹೆಣಗಾಡಬೇಕಾದೀತು. ವಿದ್ಯಾರ್ಥಿಗಳಿಗೆ ಶುಭದಿನ. ಸರಸ್ವತಿಯನ್ನು ಒಲಿಸಿಕೊಳ್ಳಲು ಬೇಕಾಗಿರುವುದು ಶ್ರದ್ಧೆ.
ಕನ್ಯಾ : ಕೈಗೆಟುಕುವಷ್ಟು ಮಾತ್ರ ನಮ್ಮದು ಎನ್ನುವ ಅನುಭಾವದ ಮಾತುಗಳು ಅಷ್ಟೇನೂ ಸರಿಹೊಂದುವುದಿಲ್ಲ . ನಿಮ್ಮದು ಸಾಲದು ಅನ್ನುವ ವಯಸ್ಸು. ಅಲ್ಪ ತೃಪ್ತಿಗೂ, ದುರಾಶೆಗೂ ಸಾಕಷ್ಟು ವ್ಯತ್ಯಾಸವಿದೆ.
ತುಲಾ : ಕೋರ್ಟ್ ವ್ಯವಹಾರಗಳಲ್ಲಿ ಜಯಲಕ್ಷ್ಮಿ ಈ ಹೊತ್ತು ಚಂಚಲೆ ಎನಿಸುತ್ತಾಳೆ. ಯಾವುದಕ್ಕೂ ಎಚ್ಚರವಾಗಿರಿ, ಈ ಹೊತ್ತು ರಾಜಿಯೇ ಒಳ್ಳೆಯದು ಅನಿಸಿದಲ್ಲಿ ಹಟ ಹಿಡಿಯದಿರುವುದೇ ಒಳ್ಳೆಯದು.
ವೃಶ್ಚಿಕ : ಈ ಹೊತ್ತಿನ ಸಂತೋಷವನ್ನು ರೂಢಿಸಿಕೊಳ್ಳುವಲ್ಲಿ ಸೋಲುತ್ತಿದ್ದೀರಿ. ಮಧುರ ಸ್ಮೃತಿಗಳು ಜೊತೆಯಲ್ಲೇ ಇವೆ. ಅಂದುಕೊಂಡದ್ದನ್ನು ನಾಳೆಗೆ ಮುಂದೂಡುವುದರಿಂದ ನಿಮಗೇ ನಷ್ಟ.
ಧನಸ್ಸು : ಹೊಸ ವಸ್ತ್ರ , ಒಡವೆ ಕೊಳ್ಳುವ ಅವಕಾಶವಿದೆ. ಪ್ರಿಯರಾದ ಗೆಳೆಯರ ಸಹವಾಸವೂ ಇರುವುದರಿಂದ ದಿನ ಮಧುರ ಮಧುರ ಅನ್ನಿಸುತ್ತದೆ. ಆದರೆ, ತಿಂಗಳ ಪ್ರಥಮಾರ್ಧದಲ್ಲೇ ಜೇಬು ಖಾಲಿ ಮಾಡಿಕೊಳ್ಳುತ್ತಿದ್ದೀರಿ.
ಮಕರ : ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ವಹಿಸುವುದು ಅಗತ್ಯ. ಸುಖಾ ಸುಮ್ಮನೇ ಕೊರಗುವ ಬದಲು ಮನೆಯವರೊಂದಿಗೆ ಮನಸ್ಸನ್ನು ಹಂಚಿಕೊಳ್ಳಲಿದು ಸಕಾಲ. ಇದರಿಂದಾಗಿ ತೊಳಲಾಟ ತಪ್ಪುತ್ತದೆ.
ಕುಂಭ : ನಿಮ್ಮ ನೆಮ್ಮದಿಯ ಸಲುವಾಗಿ ಇಷ್ಟಪಾತ್ರರನ್ನು ಘಾಸಿಗೊಳಿಸುತ್ತಿದ್ದೀರಿ. ಇತ್ತೀಚಿನ ದಿನಗಳಲ್ಲಂತೂ ನಿಮ್ಮ ನಡವಳಿಕೆ ಆಕ್ರಮಣಕಾರಿಯಾಗಿದೆ. ಒಂಟಿಯಾಗಿದ್ದೀರಿ, ಆತ್ಮಾವಲೋಕನ ಮಾಡಿಕೊಳ್ಳಿ.
ಮೀನ : ಬಣ್ಣದ ಕೆಲಸದವರಿಗೆ ವೃತ್ತಿಯಲ್ಲಿ ಯಶಸ್ಸು . ಕ್ರೀಡಾಳುಗಳು ಹಾಗೂ ಕಂಪ್ಯೂಟರ್ ತಜ್ಞರಿಗೆ ಕಡಿಮೆ ಯಶಸ್ಸಿನ ದಿನ . ಮನೆ ಮಂದಿಯಲ್ಲಿ ವಿನಾ ಕಾರಣ ಹುಳುಕು ಹುಡುಕುತ್ತೀರಿ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications