ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಆರ್ಥಿಕ ಸಮಸ್ಯೆ ಎದುರಾಗಲಿದೆ. ವ್ಯಾಪಾರದಲ್ಲಿ ಹಿನ್ನಡೆಯಿದೆ. ಕುಲದೇವರ ಪೂಜೆಯಿಂದ ಸಂಕಷ್ಟ ಪರಿಹಾರ. ಅನಿರೀಕ್ಷಿತ ಸುದ್ದಿ.ವೃಷಭ : ವ್ಯವಹಾರದಲ್ಲಿ ಅನುಕೂಲವಿದೆ. ಪ್ರಣಯಿಗಳಿಗೆ ಶುಭದಿನ. ಸಂತಸದ ಸುದ್ದಿ. ಅನಾರೋಗ್ಯದ ಭೀತಿ. ಭ್ರಮೆಯಿಂದ ವಾಸ್ತವಕ್ಕೆ ಬಂದರೆ ಒಳಿತು.
ಮಿಥುನ : ಶತ್ರು ಭಯವಿದೆ. ಹಿತಶತ್ರುಗಳಿಂದ ಅಪಾಯ. ನಂಬಿದವರೇ ಕೈಕೊಡುತ್ತಾರೆ. ನೀವು ಎಷ್ಟು ಎಚ್ಚರಕಿಯಿಂದಿದ್ದರೆ ಅಷ್ಟೂ ಉತ್ತಮ.
ಕಟಕ : ಮೇಲಧಿಕಾರಿಗಳ ಕಿರುಕುಳದಿಂದ ಬೇಸತ್ತಿದ್ದೀರಿ. ಕಾಲ ಹಾಗೇ ಇರುವುದಿಲ್ಲ. ಶುಭಕಾಲ ಬರುತ್ತದೆ. ನಿಮ್ಮ ಶ್ರಮಕ್ಕೆ ಇಂದು ಪ್ರತಿಫಲ ದೊರಕುತ್ತದೆ.
ಸಿಂಹ : ಮಕ್ಕಳ ವಿಷಯದಲ್ಲಿ ಅತೃಪ್ತಿ. ಮನೆಯಲ್ಲಿ ಮದುವೆಯ ಮಾತುಕತೆ. ಬಡ್ತಿಯ ಬಂಪರ್ ಸುದ್ದಿ. ಅನಿರೀಕ್ಷಿತ ಧನಾಗಮ.
ಕನ್ಯಾ : ಹೊಸ ಯೋಜನೆಗಳಿಗೆ ಇಂದು ಕೈ ಹಾಕಬೇಡಿ. ನೆಚ್ಚಿದ ಎಮ್ಮೆ ಕೋಣದ ಮರಿ ಹಾಕಿದಂತೆ ಎನ್ನುವ ಗಾದೆಯಂತೆ ಇಂದು ನಿಮ್ಮ ನಿರೀಕ್ಷೆ ಹುಸಿಯಾಗುತ್ತದೆ.
ತುಲಾ : ಕಾರ್ಯಕ್ಷೇತ್ರದಲ್ಲಿ ಅನುಕೂಲವಿದೆ. ಊಟ ಬಲ್ಲವನಿಗೆ ರೋಗವಿಲ್ಲ ಎಂಬುದು ಗೊತ್ತಲ್ಲ. ಆಹಾರ ಕ್ರಮದ ಬಗ್ಗೆ ಕಾಳಜಿ ವಹಿಸಿ. ಷೇರು ವ್ಯವಹಾರ ಬೇಡ.
ವೃಶ್ಚಿಕ : ನಿಧಾನವೇ ಪ್ರಧಾನ. ಆದರೆ, ನೀವು ಆಲಸ್ಯ ಮಾಡಿದರೆ, ಅಮೃತವೂ ವಿಷವಾಗುತ್ತದೆ. ತ್ವರಿತ ನಿರ್ಧಾರ ಕೈಗೊಂಡರೆ, ಲಾಭ ಕಟ್ಟಿಟ್ಟ ಬುತ್ತಿ.
ಧನಸ್ಸು : ಶುಭಪ್ರಯಾಣ. ಪುಣ್ಯಕ್ಷೇತ್ರ ದರ್ಶನ ಭಾಗ್ಯವೂ ಇದೆ. ವ್ಯವಹಾರದ ವಿಷಯದಲ್ಲಿ ಎಚ್ಚರಿಕೆ ಅಗತ್ಯ. ನಷ್ಟದ ಭೀತಿ ಇದೆ.
ಮಕರ : ಎಲ್ಲ ನೀವು ಅಂದುಕೊಂಡಂತೆಯೇ ನಡೆಯುತ್ತಿದೆಯಾದರೂ, ಹತ್ತಾರು ತೊಡಕುಗಳು. ಮಕ್ಕಳ ಬಗ್ಗೆ ಅಸಮಾಧಾನ. ವಿಶ್ರಾಂತಿ ಪಡೆಯುವ ನಿಮ್ಮ ಆಶೆ ಕೈಗೂಡದು. ಪ್ರಯಾಣ ಅನಿವಾರ್ಯ.
ಕುಂಭ : ಕೌಟುಂಬಿಕ ಸಮಸ್ಯೆಗಳಿಂದ ಮನಸ್ಸು ಕೆಡುತ್ತದೆ. ಅನಿರೀಕ್ಷಿತ ಅತಿಥಿಗಳ ಆಗಮನದಿಂದ ಮನೆಯಲ್ಲಿ ಕಿರಿಕಿರಿ. ಭೂ ವ್ಯವಹಾರದಲ್ಲಿ ನಷ್ಟ.
ಮೀನ : ನಿಮ್ಮ ಬುದ್ಧಿ ನಿಮ್ಮ ಕೈಯಲ್ಲಿದ್ದರೆ ಒಳಿತು. ಪ್ರಯಾಣದಲ್ಲಿ ಅಡಚಣೆ. ವಿದ್ಯಾರ್ಥಿಗಳಿಗೆ ತೊಂದರೆ, ಕಾರ್ಯಕ್ಷೇತ್ರದಲ್ಲಿ ನಿಮ್ಮ ಶ್ರಮಕ್ಕೆ ಮನ್ನಣೆ ಇದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications