ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಚ್ಮಂಡ್‌ ಸರ್ಕಲ್‌ ಮೇಲ್ಸೇತುವೆ ಮೇಲೆ ನೀವು ಗಾಡಿ ಓಡಿಸಬಹುದು

By Staff
|
Google Oneindia Kannada News

ಬೆಂಗಳೂರು : ಇವತ್ತು- ನಾಳೆ ಅನ್ನುತ್ತಾ ಎಳೆದಾಟದ ನಡುವೆಯೇ ನಿರ್ಮಾಣವಾಗುತ್ತಾ ಬಂದ ರಿಚ್ಮಂಡ್‌ ವೃತ್ತದ ಮೇಲು ಸೇತುವೆ ರಸ್ತೆ (ಫ್ಲೈಓವರ್‌) ಕೊನೆಗೂ ಸಿದ್ಧವಾಗಿದೆ. ಬುಧವಾರ (ಏಪ್ರಿಲ್‌ 11) ದಿಂದ ಏಪ್ರಿಲ್‌ 14ರವರೆಗೆ ಈ ರಸ್ತೆ ಪ್ರಾಯೋಗಿಕ ಸಂಚಾರಕ್ಕೆ ತೆರೆದುಕೊಂಡಿದ್ದು, ನೀವೂ ರಸ್ತೆಯ ಮೇಲೆ ನಿಮ್ಮ ಗಾಡಿಯ ಮೂಲಕ ಟ್ರಯಲ್‌ ರನ್‌ ಮಾಡಬಹುದು. ಅಷ್ಟೇ ಅಲ್ಲ, ರಸ್ತೆ ಸುಧಾರಣೆಗೆ ಯಾವುದಾದರೂ ಸಲಹೆ ಇದ್ದರೆ ಅದಕ್ಕೂ ಸ್ವಾಗತ.

ಪ್ರಾಯೋಗಿಕ ಸಂಚಾರದ ನಂತರ ಎಲ್ಲಾ ಸರಿಯಿದೆ ಎಂದಾದರೆ, ಏಪ್ರಿಲ್‌ 17ರಂದು ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ರಸ್ತೆಯನ್ನು ಉದ್ಘಾಟಿಸುವರು. ನಿಮ್ಮ ಸಲಹೆ ಅಥವಾ ದೂರನ್ನು ಪಾಲಿಕೆಯ ಮುಖ್ಯ ಎಂಜಿನಿಯರ್‌ಗೆ ಅಥವಾ ಸಾರ್ವಜನಿಕ ಸಂಪರ್ಕಾಧಿಕಾರಿಗೆ ದೂರವಾಣಿ ಸಂಖ್ಯೆ 2237315 ಮೂಲಕ ತಿಳಿಸಬಹುದು. ಪಾಲಿಕೆ ಪ್ರಕಟಣೆ ಈ ವಿಷಯ ತಿಳಿಸಿದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X