ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತ್ಯ ಭವಿಷ್ಯ

By Staff
|
Google Oneindia Kannada News

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ : ನಿಧಾನವಾಗಿ ಕೆಲಸ ಮಾಡಬೇಕು ಎಂದು ಅನಿಸುವುದಷ್ಟೇ. ನಿಮ್ಮ ಸ್ವಭಾವ ಅದಕ್ಕೆ ಸೂಟ್‌ ಆಗುವುದಿಲ್ಲ. ಆಫೀಸು ಕೆಲಸಗಳನ್ನು ನಿಭಾಯಿಸಲು ಇವತ್ತು ಸ್ನೇಹಿತರು ಸಹಕರಿಸುತ್ತಾರೆ.

ವೃಷಭ : ಪ್ರೀತಿ ಪ್ರೇಮದ ವಿಷಯದಲ್ಲಿ ಜೋಪಾನ ಇರಬೇಕು. ವಾದ ವಿವಾದಗಳು ಸಣ್ಣದಾಗಿ ಕಂಡರೂ ನೀವು ಭಾರೀ ಬೆಲೆ ತೆರಬೇಕಾಗುತ್ತದೆ.

ಮಿಥುನ : ಇವತ್ತು ನಿಮಗೆ ಶುಭ ಪ್ರಯಾಣ ಎನ್ನುವವರು ಯಾರೂ ಇಲ್ಲ ಎನ್ನುವುದು ನಿಮ್ಮ ಭ್ರಮೆ. ಸ್ನೇಹಿತರು ನಿಜವಾಗಿಯೂ ನಿಮ್ಮ ಹಿತವನ್ನು ಬಯಸುತ್ತಾರೆ.

ಕಟಕ : ನೆಗೆಟಿವ್‌ ಯೋಚನೆಗಳನ್ನೇ ಮಾಡಿದರೆ, ಕೆಲಸಗಳಲ್ಲಿ ಆಸಕ್ತಿ ಇರುವುದಿಲ್ಲ. ನಿಮ್ಮ ಶ್ರಮಕ್ಕೆ ತಕ್ಕುದಾದ ಫಲ ನಿಮ್ಮನರಿಸಿಕೊಂಡು ಬಂದೇ ಬರುತ್ತದೆ.

ಸಿಂಹ : ಈ ದಿನ ಎಲ್ಲವೂ ಸಸೂತ್ರವಾಗಿ ನಡೆಯುವುದನ್ನು ನೋಡಿ ನೀವೇ ಆಶ್ಚರ್ಯಪಡುತ್ತೀರಿ. ಹಳೇ ಸ್ನೇಹಿತನ ಭೇಟಿ ಖುಷಿಯ ಹಾಲಿಗೆ ಜೇನೆರೆದಂತಾಗುತ್ತದೆ.

ಕನ್ಯಾ : ಕ್ರಾಂತಿ, ಬದಲಾವಣೆ ಅಂತ ಹೆಚ್ಚು ಮನಸ್ಸಿಗೆ ಹಚ್ಚಿಕೊಳ್ಳಬೇಡಿ. ಯಾಕೆಂದರೆ ನಿಮ್ಮ ಜೊತೆಗಿರುವವರೂ ಕೂಡ ನಿಮ್ಮಷ್ಟೇ ಆಸಕ್ತಿಯಿಂದ ನಿಮಗೆ ಸಹಕಾರ ನಿಡಲು ಮುಂದೆ ಬರುತ್ತಿಲ್ಲ.

ತುಲಾ : ಸಿಹಿ ಊಟ ಮಾಡುವುದು ಇವತ್ತಿನ ನಿಮ್ಮ ಸುಯೋಗದ ಪಟ್ಟಿಯಲ್ಲಿ ಒಂದು. ಮುದ್ದು ಮಕ್ಕಳು ಮತ್ತೆ ಸಿಹಿ ವಾರ್ತೆ ತರುತ್ತಾರೆ. ನಿರೀಕ್ಷಿಸುತ್ತಿದ್ದೀರಿ ಅಲ್ವೇ?

ವೃಶ್ಚಿಕ : ಇವತ್ತೆಲ್ಲಾ ಬೇಜಾರನ್ನು ಮುಚ್ಚಿಕೊಂಡು ಬಂಧುಗಳನ್ನು ಕಳುಹಿಸಿಕೊಡುವುದೇ ಆಯ್ತು. ಕೆಲಸಗಳ ಹೊರೆ ನೋಡಿ ಬೆಚ್ಚಿ ಬೀಳಬೇಡಿ. ಆರತಿ ತೆಗೆದುಕೊಂಡರೆ ಉಷ್ಣ, ತೀರ್ಥ ತಗೊಂಡರೆ ಶೀತ ಅನ್ನುವ ಸ್ವಭಾವ ನಿಮ್ಮದಲ್ಲ. ಆದ್ದರಿಂದ ಆರೋಗ್ಯದ ಬಗ್ಗೆ ಹೆಚ್ಚು ಅರ್ತಿ ಬೇಡ.

ಧನಸ್ಸು : ಪತ್ರಗಳು ದಿನವೂ ಬಂದರೂ, ಇವತ್ತು ನಿಮ್ಮನ್ನು ರೋಮಾಂಚನಗೊಳಿಸುವ ಒಸಗೆ ಹೊತ್ತ ಪತ್ರ ನಿಮ್ಮ ಲೆಟರ್‌ ಬಾಕ್ಸಿಗೆ ಬಂದು ಬೀಳುತ್ತದೆ. ಎತ್ತಿಕೊಳ್ಳಿ!

ಮಕರ : ಆರೋಗ್ಯ ಸುಧಾರಿಸಿಕೊಳ್ಳುತ್ತಿದ್ದೀರಿ. ಪ್ರಯಾಣ ಯೋಗವಿರುವುದರಿಂದ ಜೋಪಾನ. ಆಫೀಸು ಕೆಲಸಗಳಿಂದ ಸ್ವಲ್ಪ ರಿಲಾಕ್ಸ್‌ ಪಡೆಯಲಿದ್ದೀರಿ.

ಕುಂಭ : ಪರದಾಡುವುದೇ ನನ್ನ ಹಣೆಬರಹ ಎಂಬ ಕೀಳರಿಮೆ ಬೇಡ. ಮತ್ತೆ ನೀವು ಎತ್ತರಕ್ಕೆ ಏರುತ್ತೀರಿ ಎನ್ನುವುದರಲ್ಲಿ ಸಂಶಯವಿಲ್ಲ. ಮನೆ ದೇವರನ್ನು ಪೂಜಿಸಿ.

ಮೀನ : ಸೃಜನ ಶೀಲ ಕೆಲಸಗಳಲ್ಲಿ ಜಯವಿದೆ. ಆದ್ದರಿಂದ ದಿನವೆಲ್ಲಾ ಅದಕ್ಕೆಂದೇ ಮೀಸಲಿಟ್ಟರೆ ಯಶಸ್ಸು ನಿಮ್ಮದಾಗುತ್ತದೆ. ಆಲ್‌ ದ ಬೆಸ್ಟ್‌.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X