Get Updates
Get notified of breaking news, exclusive insights, and must-see stories!

ಪುಸ್ತಕಗಳು ಜನರಿಗೆ ಸುಲಭವಾಗಿ ಸಿಗಬೇಕು :ಎಸ್‌.ಎಲ್‌. ಭೈರಪ್ಪ

ಗುಲ್ಬರ್ಗಾ : ಖಾಸಗಿ ಸಂಘ ಸಂಸ್ಥೆಗಳು ಹೆಚ್ಚು ಹೆಚ್ಚು ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಕೊಂಡರೆ, ಸರಕಾರದ ಮುಲಾಜು ತಪ್ಪುತ್ತದೆ. ಸರಕಾರವೇನೋ ರಂಗ ಮಂದಿರ ಕಟ್ಟಿಬಿಡುತ್ತದೆ. ಆದರೆ, ಸಂಘ- ಸಂಸ್ಥೆಗಳು ಅಲ್ಲಿ ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡಿಕೊಂಡು ಹೋಗುವ ಕಾರ್ಯ ಮಾಡಬೇಕು ಎಂದು ಖ್ಯಾತ ಲೇಖಕ ಎಸ್‌.ಎಲ್‌. ಭೈರಪ್ಪ ಅಭಿಪ್ರಾಯಪಟ್ಟರು.

ಪುಸ್ತಕಗಳು ಜ್ಞಾನ ಭಂಡಾರಗಳು, ಪುಸ್ತಕಗಳು ಸುಲಭವಾಗಿ ಜನರಿಗೆ ಲಭ್ಯವಾಗಲಿ ಎಂಬ ಕಾರಣಕ್ಕಾಗಿ ಹಿಂದೆ ಬ್ರಿಟಿಷರ ಆಳ್ವಿಕೆ ಇದ್ದ ಕಾಲದಲ್ಲಿ ತೆರೆದ ಅಂಚೆ ಸೌಕರ್ಯ ನೀಡಿ, ಕಡಿಮೆ ದರದಲ್ಲಿ ಅಂಚೆ ಸೇವೆ ಸೌಲಭ್ಯ ಒದಗಿಸಿದ್ದರು. ಆದರೆ, ಇಂದಿನ ನಮ್ಮ ಸರಕಾರ ಪುಸ್ತಕ ಮಾರಟದ ಮೇಲೂ ತೆರೆಗೆ ವಿಧಿಸುತ್ತದೆ. ಸರಕಾರ ರೂಪಿಸುವ ಕಾರ್ಯಕ್ರಮಗಳಲ್ಲಿ 108 ನಿಯಮಾವಳಿಗಳ ತೊಡಕು ತಲೆ ಎತ್ತುತ್ತದೆ. ಇಲ್ಲಿ ಸ್ವಾತಂತ್ರ್ಯ ಎಂಬುದೇ ಇಲ್ಲ ಎಂದರು.

ಖಾಸಗಿ ಸಂಘ - ಸಂಸ್ಥೆಗಳಿಗೆ ಸ್ವಾಯತ್ತೆ ಹಾಗೂ ಸ್ವಾತಂತ್ರ್ಯ ಎರಡೂ ಇರುವುದರಿಂದ ಉತ್ತಮ ಗುಣಮಟ್ಟದ ಕಾರ್ಯಕ್ರಮ ರೂಪಿಸಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ನಗರದ ಚೇಂಬರ್‌ ಆಫ್‌ ಕಾಮರ್ಸ್‌ ಸಭಾಂಗಣದಲ್ಲಿ ಎಸ್‌.ಆರ್‌. ಪಾಟೀಲ್‌ ಪ್ರತಿಷ್ಠಾನ ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

ಧರ್ಮ -- ಸಂಸ್ಕೃತಿ ಕೆಲಸ ಮಾಡಿದರೆ ಅದು ಸ್ತುತ್ಯಾರ್ಹ ಕ್ರಮವಾಗುತ್ತದೆ. ಧರ್ಮದ ಕಾರ್ಯ ಮೌಲ್ಯಯುತವಾದದ್ದು, ಸಮಾಜವಾದದ ಹೆಸರಲ್ಲಿ ಅದನ್ನು ಕಡೆಗಣಿಸುವುದು ಸೂಕ್ತವಲ್ಲ ಎಂದರು. ನಾವು ಮೊದಲು ಮಾನವ ಧರ್ಮ ಕಾಪಾಡುವತ್ತ ಹೆಚ್ಚಿನ ಗಮನ ಹರಿಸಬೇಕು ಎಂದೂ ಅವರು ಕರೆ ನೀಡಿದರು.

ಹಿರಿಯ ವೈದ್ಯ ಡಾ. ಎಂ.ಎಸ್‌. ಪಾಟೀಲ್‌, ಸಾಹಿತಿ ವಸಂತ ಕುಷ್ಟಗಿ, ವಾಣಿಜ್ಯೋದ್ಯಮಿಗಳ ಸಂಘದ ಉಪಾಧ್ಯಕ್ಷ ಅಮರನಾಥ ಪಾಟೀಲ್‌ ಮೊದಲಾದವರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಎಸ್‌.ಎಸ್‌. ಪಾಟೀಲ್‌ ಸ್ವಾಗತಿಸಿದರು. ಮನು ಬಳಿಗಾರ್‌ ಪ್ರಾಸ್ತಾವಿಕ ಭಾಷಣ ಮಾಡಿದರು. ಡಾ. ಸಂಗಮೇಶ ಸವದತ್ತಿ ಮಠ ಅವರು ಎಸ್‌.ಎಲ್‌. ಭೈರಪ್ಪನವರ ಪರಿಚಯ ಮಾಡಿಕೊಟ್ಟರು. ಶಿವರಾಜ ಪಾಟೀಲ್‌ ಕಾರ್ಯಕ್ರಮ ನಿರೂಪಿಸಿದರು.

(ಗುಲ್ಬರ್ಗಾ ಪ್ರತಿನಿಧಿಯಿಂದ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+