Get Updates
Get notified of breaking news, exclusive insights, and must-see stories!

ಉಪ್ಪಿನಂಗಡಿಯಲ್ಲಿ ಏಳು ಸೆಂಮೀ ಮಳೆ

ಯಾವ್ಯಾವುದೋ ಕೆಲಸಗಳಲ್ಲಿ ಮೈ ಮರೆತಿದ್ದ ಮಂದಿ, ಮಳೆ ಸುರಿಯುತ್ತದೆಂದು ಯಾವ ಕ್ಷಣದಲ್ಲೂ ಎಣಿಸಿರಲಿಲ್ಲ . ಆದರೆ, ಯಾವುದೇ ಲೆಕ್ಕಾಚಾರಕ್ಕೆ ಸಿಗದ ಮಳೆ ಸೋಮವಾರ ರಾಜ್ಯದ ಕೆಲವು ಭಾಗಗಳಲ್ಲಿ ಬಗ್ಗಿತ್ತು . ಹಮ್ಮು ಬಿಮ್ಮು ಬದಿಗಿಟ್ಟ ಕೆಲವರಾದರೂ ಮೊದಲ ಮಳೆಯಲ್ಲಿ ನೆಂದು ರೋಮಾಂಚಿತರಾಗಿರಬೇಕು.

ಸುರಿದ ಮಳೆಯನ್ನು ಲೆಕ್ಕ ಹಿಡಿದು ಹೇಳುವುದಾದರೆ, ಉಪ್ಪಿನಂಗಡಿಯಲ್ಲಿ ಅತಿಹೆಚ್ಚು ಮಳೆ, 7 ಸೆಂಮೀ ಸುರಿದಿದೆ. ಆನಂತರದ ಸ್ಥಾನ ಮಂಗಳೂರು ವಿಮಾನ ನಿಲ್ದಾಣಕ್ಕೆ- 4 ಸೆಂಮೀ. ಗೋಕಾಕದಲ್ಲಿ ಮೂರು ಸೆಂಮೀ, ಮಾಣಿ, ಸಿದ್ಧಾಪುರ (ಉಡುಪಿ), ಬನವಾಸಿ, ಪಣಂಬೂರುಗಳಲ್ಲಿ ತಲಾ ಎರಡು, ಕಾರ್ಕಳ, ಮಂಗಳೂರು, ಹಂಸಭಾವಿ, ಚಿತ್ತಾಪೂರ, ಚೆನ್ನಗಿರಿ ಹಾಗೂ ಕಲಘಟಗಿಗಳಲ್ಲಿ ತಲಾ ಒಂದು ಸೆಂಮೀ ಮಳೆ ಸುರಿದಿದೆ.

ಬೆಂಗಳೂರಿನಲ್ಲಿ ಮಾತ್ರ, ಮೋಡ ಕರಗಲಿಲ್ಲ , ಹನಿ ನೆಲಕ್ಕಿಳಿಯಲಿಲ್ಲ . ಅಲ್ಲಲ್ಲಿ ಆಕಾಶದೆತ್ತರಕ್ಕೆ ಎದ್ದ ಕೆಂಧೂಳು ಇಂಗಾಲದ ಆಕಾಶಕ್ಕೆ ಹೊಸ ರಂಗು ಹಚ್ಚಿದ್ದ ದೃಶ್ಯ ಅಪರೂಪದ್ದಾಗಿತ್ತು . ರಾಜ್ಯದ ಇತರ ಭಾಗಗಳಲ್ಲಿ ಒಣಹವೆ ಮುಂದುವರಿದಿದೆ. ಗುಲ್ಬರ್ಗಾದಲ್ಲಿ ದಿನದ ಗರಿಷ್ಠ ತಾಪಮಾನ 42.9 ಡಿಗ್ರಿ ಸೆಂಟಿಗ್ರೇಡ್‌ ದಾಖಲಾಗಿತ್ತು .

ಮಂಗಳವಾರ, ರಾಜ್ಯದ ಕೆಲವು ಪ್ರದೇಶಗಳಲ್ಲಿ ಚದುರಿದಂತೆ ಮಳೆಯಾಗುವ ನಿರೀಕ್ಷೆಯಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು , ಸಂಜೆ ಅಥವಾ ರಾತ್ರಿಯಲ್ಲಿ ಒಂದೆರಡು ಸಲ ಮಳೆಯೂ ಬಿದ್ದೀತು. ದಿನದ ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಂಟಿಗ್ರೇಡ್‌ ಆಸುಪಾಸಿನಲ್ಲಿರುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+