ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಟರ್‌ನೆಟ್‌ನಲ್ಲಿ ಎಲ್‌.ಕೆ.ಜಿ,ಯು.ಕೆ.ಜಿ. ಪರೀಕ್ಷಾ ಫಲಿತಾಂಶ

By Staff
|
Google Oneindia Kannada News

* ಟಿ.ಎಂ. ಸತೀಶ್‌

ಬೆಂಗಳೂರು : ಕರ್ನಾಟಕ ಸರಕಾರ 1000 ಸರಕಾರಿ ಶಾಲೆಗಳಲ್ಲಿ ಕಂಪ್ಯೂಟರ್‌ ಅಳವಡಿಸುವ ಮಾತನಾಡುತ್ತಿದ್ದರೆ, ಕರ್ನಾಟಕದ ಸಿಲಿಕಾನ್‌ ಕಣಿವೆಯ ಹಲವು ಖಾಸಗಿ ಶಾಲೆಗಳು ತಮ್ಮ ವಿದ್ಯಾರ್ಥಿಗಳಿಗೆ ಈಗಾಗಲೇ ಕಂಪ್ಯೂಟರ್‌ ಶಿಕ್ಷಣ ನೀಡುತ್ತಿರುವುದೇ ಅಲ್ಲದೆ, ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ, ನರ್ಸರಿ, ಪ್ರೆೃಮರಿ ಹಾಗೂ ಪ್ರೌಢ ಶಾಲೆಯ ಪರೀಕ್ಷಾ ಫಲಿತಾಂಶಗಳನ್ನು ಇಂಟರ್‌ನೆಟ್‌ನಲ್ಲಿ ಪ್ರಕಟಿಸಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ನಾಗಾಲೋಟದಿಂದ ಸಾಗುತ್ತಿವೆ.

ಎರಡು ದಶಕಗಳ ಹಿಂದೆ ಎಸ್‌ಎಸ್‌ಎಲ್‌ಸಿ, ಪಿಯುಸಿ, ಯುನಿವರ್ಸಿಟಿ ರಿಸಲ್ಟ್ಸ್‌ ಪೇಪರ್‌ನಲ್ಲಿ ಬರುತ್ತದೆ ಎಂದರೇ ಜನ ನಂಬುತ್ತಿರಲಿಲ್ಲ. ಪತ್ರಿಕೆಗಳಲ್ಲಿ ಪ್ರಕಟವಾಗುವ ಫಲಿತಾಂಶ ಕಂಡು ನಿಬ್ಬೆರಗಾಗುತ್ತಿದ್ದವರು ಅದೆಷ್ಟೋ ಮಂದಿ. ಇದು ಕಂಪ್ಯೂಟರ್‌ಯುಗ. ಫಲಿತಾಂಶಗಳೆಲ್ಲ ಇಂಟರ್‌ನೆಟ್‌ನಲ್ಲೇ ಪ್ರಕಟವಾಗುತ್ತವೆ. ಮಾಹಿತಿ ತಂತ್ರಜ್ಞಾನದ ಮಹತ್ವ ಅರಿತಿರುವ ಕೆಲವು ವಿಶ್ವವಿದ್ಯಾಲಯಗಳು ಫಲಿತಾಂಶ ಪ್ರಕಟಿಸಲೆಂದೇ ಪ್ರತ್ಯೇಕ ವೆಬ್‌ಸೈಟ್‌ ಹೊಂದಿವೆ. ಮಾಹಿತಿ ತಂತ್ರಜ್ಞಾನದ ಕೊಡುಗೆಯನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿವೆ.

ಮಾಹಿತಿ ತಂತ್ರಜ್ಞಾನ ಬಳಕೆಯಲ್ಲಿ ನರ್ಸರಿ, ಪ್ರೆೃಮರಿ ಶಾಲೆಗಳೂ ಕೂಡ ಹಿಂದೆ ಬಿದ್ದಿಲ್ಲ ಎಂಬುದನ್ನು ಬೆಂಗಳೂರು ವಿ.ವಿ. ಜ್ಞಾನಭಾರತಿಯ ಬಳಿ ಇರುವ ಉಲ್ಲಾಳ ಉಪನಗರದ ವಿದ್ಯಾನಿಕೇತನ್‌ ಪಬ್ಲಿಕ್‌ ಸ್ಕೂಲ್‌ ಸಾಬೀತು ಪಡಿಸಿದೆ. ತನ್ನ ನರ್ಸರಿ, ಪ್ರೆೃಮರಿ ಶಾಲೆ ಹಾಗೂ ಪ್ರೌಢಶಾಲೆಯ ಫಲಿತಾಂಶವನ್ನು ಇಂಟರ್‌ನೆಟ್‌ನಲ್ಲಿ ಏಪ್ರಿಲ್‌ 8ರಂದು ಬಿಡುಗಡೆ ಮಾಡಿದೆ.

ಹೊಸಹೆಜ್ಜೆ : ಏನು ? ನರ್ಸರಿ ಫಲಿತಾಂಶವೂ ಇಂಟರ್‌ನೆಟ್ಟಲ್ಲಿದೆಯೇ ಎಂದು ಹುಬ್ಬೇರಿಸಬೇಡಿ ! ಮನಸ್ಸಿದ್ದರೆ ಮಾರ್ಗ. ಬೇಸಿಗೆ ರಜೆಯಲ್ಲಿ ಮಡದಿ ಮಕ್ಕಳೊಂದಿಗೆ ಬೆಂಗಳೂರು ಬಿಟ್ಟು ದೂರದ ದೆಹಲಿಗೋ, ಗಿರಿಧಾಮಗಳಿಗೋ, ಪ್ರವಾಸಿ ತಾಣಗಳಿಗೋ ಇಲ್ಲವೇ ಮಾಮೂಲಿನಂತೆ ಅಜ್ಜಿಯ ಮನೆಗೋ ಹೋದ ಪಾಲಕರಿಗೆ ತಮ್ಮ ಮಕ್ಕಳ ಫಲಿತಾಂಶ ತಿಳಿಯುವ ತವಕ ಇದ್ದೇ ಇರುತ್ತದೆ. ಪ್ರವಾಸದ ಆನಂದದಲ್ಲಿರುವ ಪಾಲಕರಿಗೆ ಮತ್ತಷ್ಟು ಅಮಿತಾನಂದ ನೀಡುವ ಉದ್ದೇಶದಿಂದ ವಿದ್ಯಾನಿಕೇತನ್‌ ಪಬ್ಲಿಕ್‌ ಶಾಲೆ ಈ ಸಾಲಿನಿಂದ ನರ್ಸರಿ, ಪ್ರೆೃಮರಿ ಹಾಗೂ ಪ್ರೌಢಶಾಲೆಯ ಪರೀಕ್ಷಾ ಫಲಿತಾಂಶಗಳನ್ನು ಇಂಟರ್‌ನೆಟ್‌ನಲ್ಲಿ ಪ್ರಕಟಿಸುವ ಹೊಸ ಹೆಜ್ಜೆ ಇಟ್ಟಿದೆ.

http://www.trackstudent.com/vps ಎಂಬ ತನ್ನದೇ ಆದ ವೆಬ್‌ಸೈಟ್‌ ಹೊಂದಿರುವ ಶಾಲೆ, ಶಾಲೆಯ ಸಚಿತ್ರ ಮಾಹಿತಿ, ಪ್ರವೇಶಾವಕಾಶ, ಸೌಲಭ್ಯ, ಲೈಬ್ರರಿ, ಪ್ರಾಂಶುಪಾಲರ ಸಂದೇಶ, ಸಾಂಸ್ಕೃತಿಕ ಚಟುವಟಿಕೆಗಳ ಸಾಧನೆಯೇ ಅಲ್ಲದೆ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನೂ ಒಳಗೊಂಡಿದೆ.

ಫಲಿತಾಂಶದಲ್ಲಿ ಆಯಾ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಶೇಕಡಾವಾರು ಅಂಕ, ಮುಂದಿನ ತರಗತಿಗೆ ಅರ್ಹತೆ ಪಡೆದ ವಿದ್ಯಾರ್ಥಿಗಳ ಹೆಸರು, ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳ ಹೆಸರು, ವಿಷಯ, ಕ್ಲಾಸ್‌ ಟೀಚರ್‌ ವಿವರಗಳನ್ನೂ ನೀಡಿದೆ.

ಬೆಂಗಳೂರಿನ ಶ್ರೀನಗರ ಹಾಗೂ ಉಲ್ಲಾಳದ ಬಳಿ ಸುಂದರ ಪ್ರಶಾಂತ ಪರಿಸರದಲ್ಲಿ ಬೃಹತ್‌ ಭವ್ಯ ಕಟ್ಟಡದಲ್ಲಿ ಶಾಲೆಯನ್ನು ನಡೆಸುತ್ತಿರುವ ವಿದ್ಯಾನಿಕೇತನ್‌ ಪಬ್ಲಿಕ್‌ ಶಾಲೆಯಲ್ಲಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಪ್ರತಿಭೆಯ ಪ್ರಕಾಶಕ್ಕೆ ಆದ್ಯತೆ ನೀಡಲಾಗುತ್ತದೆ. ಮಕ್ಕಳ ಮನೋ ವಿಕಾಸಕ್ಕಾಗಿ ಯೋಗ, ಕರಾಟೆ, ಸಂಗೀತ, ನೃತ್ಯ, ಕ್ರೀಡೆ, ಕಂಪ್ಯೂಟರ್‌ ಶಿಕ್ಷಣ ಹಾಗೂ ಪ್ರತಿವರ್ಷ ವಿಜ್ಞಾನ ವಸ್ತು ಪ್ರದರ್ಶನಗಳನ್ನೂ ನಡೆಸುತ್ತದೆ.

ಸುಸಜ್ಜಿತ ಹಾಗೂ ಅತ್ಯಾಧುನಿಕ ವಿಜ್ಞಾನ ಪ್ರಯೋಗಾಲಯ, ಒಪ್ಪ ಓರಣವಾಗಿ ಪುಸ್ತಕಗಳನ್ನು ಜೋಡಿಸಿಟ್ಟ ಸುಂದರ ಗ್ರಂಥಾಲಯವನ್ನೂ ಶಾಲೆ ಹೊಂದಿದೆ. ಕಂಪ್ಯೂಟರ್‌ ಶಿಕ್ಷಣದ ಮಹತ್ವವನ್ನು ಮನಗಂಡಿರುವ ಶಾಲೆ ಸುಸಜ್ಜಿತವಾದ ಕಂಪ್ಯೂಟರ್‌ ಲ್ಯಾಬ್‌ ಹೊಂದಿದೆ. ಪ್ರೆೃಮರಿ ಶಾಲೆಯ ಮಕ್ಕಳಿಂದ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಇಲ್ಲಿ ಕಂಪ್ಯೂಟರ್‌ ಶಿಕ್ಷಣ ನೀಡಲಾಗುತ್ತಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X