ಮಲ್ಲಿಗೆ ಮಳೆಯಲ್ಲಿ ಕರಗ ಬಂತು ಕರಗ
ಬೆಂಗಳೂರು : ಮೋಡಗಳೆಲ್ಲ ಹುಸಿಯಾದವು,
ಮಳೆ ಸುರಿಯಲಿಲ್ಲ . ಸುರಿದದ್ದು ಬಿಡಿ ಮಲ್ಲಿಗೆಗಳ ಮಳೆ. ಬಿಚ್ಚುಗತ್ತಿಯ ಕಾವಲಿನವರ ಜೊತೆ ಕರಗ ಹೊತ್ತ ವೀರ ಕುಮಾರ ಅಭಿಮನ್ಯು ಮುನ್ನಡೆಯುತ್ತಿದ್ದಂತೆ, ಹೆಜ್ಜೆ ಹೆಜ್ಜೆಗೂ ಭಕ್ತರಿಂದ ಹೂ ಮಳೆ. ಅದು ಬೆಂಗಳೂರು ಕರಗ. ರಜೆ ದಿನ, ಭಾನುವಾರದ ರಾತ್ರಿ, ಸಂದು ಹೋಗುವ ಮುನ್ನ ಸಂಭ್ರಮವೊಂದಕ್ಕೆ ಸಾಕ್ಷಿಯಾಯಿತು.
ಚೈತ್ರ ಹುಣ್ಣಿಮೆ. ಅಕ್ಕಿರೊಟ್ಟಿಯಂಥಾ ಚಂದ್ರಮನ ಹಾಲು ಚೆಲ್ಲಿದಂತಿದ್ದ ಬೆಳದಿಂಗಳು. ಅಲಸೂರು ಪೇಟೆಯ ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಪ್ರಾರಂಭವಾದ ಕರಗ ಮತ್ತೆ ದೇವಸ್ಥಾನಕ್ಕೆ ಮರಳುವ ಹೊತ್ತಿಗಾಗಲೇ ಚಂದ್ರಮ ಕಳೆಗುಂದಿದ್ದ . ಅದಕ್ಕೂ ಮುನ್ನ , ಆಂಜನೇಯ ಸ್ವಾಮಿ ಹಾಗೂ ಗಂಗಾಧರೇಶ್ವರ ಸ್ವಾಮಿ ದೇಗುಲಗಳಲ್ಲಿ ಕರಗಕ್ಕೆ ಪೂಜೆ ಸಂದಿತ್ತು .
ಅಲಸೂರು ಪೇಟೆ, ತಿಗಳರ ಪೇಟೆ, ಗೊಲ್ಲರ ಪೇಟೆ, ನಗರ್ತ ಪೇಟೆ, ಗಾಣಿಗರ ಪೇಟೆ, ಕುಂಬಾರ ಪೇಟೆ, ದೇವಾಂಗ ಪೇಟೆ, ಜೋರಿ ಪೇಟೆ, ಚಿಕ್ಕ ಪೇಟೆ, ಕಿಲಾರಿ ಪೇಟೆ, ಅಕ್ಕಿ ಪೇಟೆ, ರಾಣಾಸಿಂಗ್ ಪೇಟೆ, ಬಳೇ ಪೇಟೆ, ಬಿನ್ನಿ ಪೇಟೆ ಹಾಗೂ ನಗರ ದೇವತೆ ಅಣ್ಣಮ್ಮನ ಗುಡಿ ಪ್ರದೇಶದಲ್ಲಿ ಸಾಗಿ ಬಂದ ಕರಗಕ್ಕೆ ಎಲ್ಲೆಲ್ಲೂ ಅದ್ದೂರಿ ಸ್ವಾಗತ. ಹಾದಿಯುದ್ದಕೂ ಜನ ಕಾದು ನಿಂತಿದ್ದರು, ಕರಗದೊಂದಿಗೇ ಸಾಗಿ ಬಂದರು. ಭಕ್ತಿ ಭಾವದಲ್ಲಿ ಕರಗಿದರು, ದಣಿವವರೆಗೆ ಕುಣಿದರು. ಇದರೊಂದಿಗೆ, ಮಾರ್ಚ್ 31 ರ ಮುಂಜಾವು ಧ್ವಜಾರೋಹಣದೊಂದಿಗೆ ಪ್ರಾರಂಭವಾಗಿದ್ದ ಶಕ್ತ್ತ್ಯೊತ್ಸವಕ್ಕೆ ಶಾಸ್ತ್ರೋಕ್ತ ತೆರೆಬಿತ್ತು .
ಕರಗವನ್ನು ಹೊತ್ತ ಗೌರವವನ್ನು ವರ್ಷದ ಅಂತರದ ನಂತರ ಅಭಿಮನ್ಯು ಮರಳಿ ಪಡೆದಿದ್ದರು. ಅವರು ಮೊದಲು ಕರಗ ಹೊತ್ತಿದ್ದು 1994 ರಲ್ಲಿ . ಆನಂತರ, 1996, 97, 99 ರಲ್ಲಿ ಕರಗ ಹೊತ್ತಿದ್ದರು. ಅಭಿಮನ್ಯು ಅವರ ತಂದೆ ಮುನಿಯಪ್ಪ ಹಾಗೂ ಅಜ್ಜ ಅರ್ಜುನಪ್ಪ ಇಬ್ಬರೂ ಕರಗ ಹೊತ್ತಿದ್ದರು. ಅವರಿಬ್ಬರೂ ಈಗಿಲ್ಲ . ಹೆಸರು ಹೇಳಲಿಕ್ಕೆ ಅಭಿಮನ್ಯು ಇದ್ದಾರೆ.
ಜನ ಸಾಮಾನ್ಯರು ಮಾತ್ರವಲ್ಲದೆ ರಾಜಕೀಯ ಪ್ರಮುಖರು, ಪಾಲಿಕೆಯ ಸದಸ್ಯರು ಕರಗ ನೋಡಲು ನೆರೆದವರಲ್ಲಿ ಸೇರಿದ್ದರು. ಜನ ಜಂಗುಳಿಯನ್ನು ನಿಯಂತ್ರಿಸಲು ಸೇರಿದ್ದ ಪೊಲೀಸರ ಸಂಖ್ಯೆಯೂ ಹೆಚ್ಚಿತ್ತು . ಮುನ್ನೆಚ್ಚರಿಕೆ ಕ್ರಮವಾಗಿ ವಿಶೇಷ ಪ್ರಹಾರ ದಳವೂ ಕರಗವನ್ನು ಹಿಂಬಾಲಿಸಿತು.
(ಇನ್ಫೋ ವಿಶೇಷ)
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications