ಮೋಡ ಆಡುತ್ತಿದೆ, ದಯವಿಟ್ಟು ನಂಬಿಕೆ ಉಳಿಸಿಕೊಳ್ಳಿ
ಈವತ್ತು ನೀವೀ ಎರಡು ಚಿತ್ರಗಳನ್ನು ತುಂಬ ಕುತೂಹಲದಿಂದ ಗಮನಿಸಬಹುದು . ಪರಸ್ಪರ ಆರೋಪ, ಹಗರಣಗಳನ್ನು ಎರಚಿಕೊಂಡು ಕೋಳಿ ಜಗಳ ಮಾಡುತ್ತಿರುವ ನಮ್ಮ ರಾಜಕಾರಣಿಗಳು ಹಾಗೂ ಭೂಕಂಪ ಸಂತ್ರಸ್ತರನ್ನು ಸಂತೈಸಲೆಂದು ಅಮೆರಿಕೆಯಿಂದ ಹಾರಿಬಂದಿರುವ ಕ್ಲಿಂಟನ್.
ಭಾರತದ ಉದ್ದಗಲದ ಓಣಿಗಳಲ್ಲಿ , ತುಂಬು ತೋಳಿನ ಷರಟನ್ನು ಕಲಾಸಿಪಾಳ್ಯಂನಲ್ಲಿ ಅಡ್ಡಾಡುವ ಹುಡುಗನಂತೆ ಮಡಚುತ್ತಾ ಅಡ್ಡಾಡುವ ಕ್ಲಿಂಟನ್ ಎನ್ನುವ ಮನುಷ್ಯನನ್ನು ನೋಡಿದರೆ, ಆತ ಸ್ವಲ್ಪೇ ದಿನಗಳ ಕೆಳಗೆ ಜಗತ್ತಿನ ಅತ್ಯಂತ ಶಕ್ತಿಶಾಲಿ ರಾಷ್ಟ್ರದ ಅಧ್ಯಕ್ಷನಾಗಿದ್ದ , ಅದೇ ಮನುಷ್ಯ ಸೆಕ್ಸ್ ಸ್ಕ್ಯಾಂಡಲ್‌ನಲ್ಲಿ ಸಿಕ್ಕಿ ಬಿದ್ದಿದ್ದ , ತಪ್ಪೊಪ್ಪಿಕ್ಕೊಂಡು ಮರ್ಯಾದಸ್ಥರೆದುರು ನಗೆಪಾಟಲಿಗೀಡಾಗಿದ್ದ ಅನ್ನುವುದನ್ನು ನಂಬಲಿಕ್ಕಾಗದು. ಭದ್ರತಾ ಸಿಬ್ಬಂದಿಯ ನಡುವೆ ಜನ ಸಾಮಾನ್ಯರಿಗೆ ಕಳೆದುಹೋಗಿರುವ ಭಾರತೀಯ ನಾಯಕರು, ಜನ ಸಾಮಾನ್ಯರೊಂದಿಗೇ ಬೆರೆತು ಹೋಗುತ್ತಿರುವ ಕ್ಲಿಂಟನ್. ಇಬ್ಬರನ್ನೂ ಅಕ್ಕಪಕ್ಕಕ್ಕಿಟ್ಟು ಒಂದು ಕ್ಷಣ ನೋಡಲಿಕ್ಕೆ ನಿಮಗೆ ಸಾಧ್ಯವಾದರೆ, ಭಾರತ ಯಾಕೆ ಐವತ್ತೂ ವರ್ಷಗಳಲ್ಲಿ ಅಭಿವೃದ್ಧಿ ಹೊಂದುತ್ತಲೇ ಉಳಿದಿದೆ ಅನ್ನುವುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ನಮ್ಮ ಹುದ್ದರಿಗಳಿಗೆ, ಗುಜರಾತಿನ ಭೂಕಂಪವೀಗ ಇತಿಹಾಸ. ತೆಹಲ್ಕಾ, ಚುನಾವಣೆ, ಮುಂತಾದ ತುರ್ತುಗಳಲ್ಲಿ ಅವರು ವ್ಯಸ್ತರು. ದೂರದೇಶದ ಮಂದಿಗಿರುವ ಅಂತಃಕರಣ ಇಲ್ಲಿನವರಿಗೇ ಯಾಕಿರುವುದಿಲ್ಲ . ಇವರಿಗೆಲ್ಲ ಯಾವ ಗರ ಬಡಿದಿದೆ. ಸ್ವಲ್ಪ ಬೆಂಗಳೂರಿನ ಆಕಾಶ ನೋಡಿ, ಅಂಥದ್ದೇ ಗರವನ್ನು ಗುರ್ತಿಸಬಹುದು. ಈ ಹೊತ್ತು ಶಿವಾನಂದ ಕೌಜಲಗಿ ಅನ್ನುವ ಮನುಷ್ಯನ ಕರಾಮತ್ತುಗಳನ್ನು ಮಾಧ್ಯಮಗಳು ಕೆತ್ತಿಟ್ಟಿದ್ದರೂ, ಆತ ನಾನು ಸಾಚಾ ಅನ್ನುತ್ತಿದ್ದಾನೆ. ಜಾರ್ಜ್ ಎನ್ನುವ ಮತ್ತೊಂದು ಪಳಯುಳಿಕೆ, ತೆಹಲ್ಕಾ ಎಲ್ಲಾ ಮೋಸ, ಕುಡಿಸಿ ಬೇಕಾದಂತೆ ಮಾತಾಡಿಸಿಕೊಂಡಿದ್ದಾರೆ ಎಂದು ಹೋದಲೆಲ್ಲಾ ಹೇಳುತ್ತಿದೆ. ಜನ ಎಲ್ಲವನ್ನೂ ಕೇಳುತ್ತಿದ್ದಾರೆ, ತಮಗೆ ಅಗತ್ಯವಾದಂತೆ ನಂಬುತ್ತಿದ್ದಾರೆ.
ಇಂಥದ್ದೇ ಗರ, ಬೆಂಗಳೂರಿನ ಮೇಲೆ ಕವಿದುಕೊಂಡಿರುವ ಮುಗಿಲಿಗೂ ಬಡಿದಿದೆ. ಮಳೆ ಇಂದು, ನಾಳೆ ಎಂದು ಹವಾಮಾನ ಇಲಾಖೆ ಹಾಕಿದ್ದ ಲೆಕ್ಕಾಚಾರವೆಲ್ಲ ಸುಳ್ಳಾಗಿದೆ. ನಾಳೆ ಸೋಮವಾರ ಹಾಗೂ ಮಂಗಳವಾರ ಕೂಡ ಮಳೆ ಬರುತ್ತದೆಂದು ಮತ್ತೆ ಇಲಾಖೆಯ ಮೂಲಗಳು ತಿಳಿಸಿವೆ. ಅದಕ್ಕೆ ತಕ್ಕನಾಗಿ ಆಕಾಶವೂ ಮೋಡದ ಹೊದಿಕೆ ಹೊದ್ದುಕೊಂಡಿದೆ. ರಜೆ ಬೇರೆ ನೋಡಿ, ರಸ್ತೆಗಳನ್ನು ಅಳೆಯುವ ಪುಟ್ಟ ಪುಟ್ಟಿಯರು ಬಿಸಿಲ ಜಳದಿಂದ ಪಾರಾಗಿ ಆರಾಮಾಗಿರಲಿ ಅನ್ನುವುದೂ ಆಗಸದ ಉದ್ದೇಶವಿದ್ದರೂ ಇದ್ದೀತು.
ಇದೇ ಹೊತ್ತಿಗೆ, ರಾಜ್ಯದ ಇತರ ಭಾಗಗಳಲ್ಲೂ ಒಣಹವೆಯಿಂದ ಹೊರತಾಗದ ವಾತಾವರಣವೇ ಮುಂದುವರಿದಿದೆ. ಕೆಲವೆಡೆ ಕಣ್ಣಿಗೆ ರಾಚದಷ್ಟು ಮಟ್ಟಿಗೆ ಕನಿಷ್ಠ , ಗರಿಷ್ಠ ತಾಪಮಾನದಲ್ಲಿ ವ್ಯತ್ಯಾಸವಾಗಿರುವುದು ಬಿಟ್ಟರೆ, ಉಳಿದಂತೆ ವಿಶೇಷವೇನೂ ಇಲ್ಲ .
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications