ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಆಯಾಸದಿಂದಲೇ ದಿನ ಆರಂಭವಾಗುವುದರಿಂದ, ಈ ರಜೆಯ ದಿನ ನಿಮ್ಮ ಪಾಲಿಗೆ ವಿಶ್ರಾಂತಿ ದಿನವಾಗುತ್ತದೆ. ಇದರಿಂದಾಗಿ ಹೊರಗೆ ಸುತ್ತುವ ಮನೆಯವರ ಆಸೆಗೆ ಕಲ್ಲು ಬೀಳುತ್ತದೆ. ಆ ಸಿಟ್ಟನ್ನು ಭರಿಸಬೇಕಾದುದು ಅನಿವಾರ್ಯ.ವೃಷಭ : ಹೊಸತೊಂದು ಆಶಾಕಿರಣ ಹೊಸಿತಿಲಲ್ಲೇ ಇದೆ. ಸುತ್ತ ಮುತ್ತಲೂ ಬೆನ್ನು ತಟ್ಟುವವರು ಹೆಚ್ಚಾಗಿರುವುದರಿಂದ, ನಿಮ್ಮ ಯಶಸ್ಸಿನ ದಾರಿ ಸುಖಕರವೆನಿಸುತ್ತದೆ.
ಮಿಥುನ : ನಿಮ್ಮ ಆಯ್ಕೆಗೆ ಗೆಳೆಯರ ಸಹಮತವೂ ಇದೆ. ಆತ್ಮ ಪರಿವೀಕ್ಷಣೆಗೆ ಒಂಟಿತನ ಒಳ್ಳೆಯದು. ಈ ಹೊತ್ತಾದರೂ ನೆಮ್ಮದಿಯಾಗಿರಲು ಪ್ರಯತ್ನಿಸಿ. ವೈದ್ಯರು ನೀಡುವ ಸಲಹೆಗಳನ್ನು ಪಾಲಿಸಿ.
ಕಟಕ : ದೈಹಿಕ ಅಸಾಮರ್ಥ್ಯವುಳ್ಳ ಗೆಳೆಯರ ಬಗ್ಗೆ ವಿಶೇಷ ಅನುಕಂಪ ತೋರಿಸುತ್ತೀರಿ. ವೃತ್ತಿಯಲ್ಲೂ ಸದ್ಯಕ್ಕೆ ನಿಮ್ಮನ್ನು ಸರಿಗಟ್ಟುವವರಿಲ್ಲ . ಏಕ ಕಾಲಕ್ಕೆ ದೇಹ, ಮನಸ್ಸುಗಳ ಮೇಲಿನ ಹಿಡಿತದಿಂದ ಈ ಲೋಕವೆಲ್ಲಾ ಪೂಜಾ ಮಂದಿರ ಅನ್ನಿಸುತ್ತದೆ.
ಸಿಂಹ : ನಮ್ಮವರೇ ನಮಗೆ ಶತ್ರುಗಳು ಅನ್ನುವ ಮಾತು ನಿಮ್ಮ ಪಾಲಿಗೆ ನಿಜವಾಗುತ್ತಿದೆ. ಎಚ್ಚರಿಕೆಯಿಂದಿರಿ. ನಡೆಯುವ ಕಾಲೇ ಮುಗ್ಗರಿಸೀತು ಅಥವಾ ಮುಗ್ಗರಿಸುವಂತೆ ಮಾಡಿಯಾರು. ಕುಲದೇವರನ್ನು ಅರ್ಚಿಸಿ.
ಕನ್ಯಾ : ಹೊಸ ಸವಾಲೊಂದು ಕೈ ಬೀಸುತ್ತಿದೆ. ಒಪ್ಪಿ ಕೊಳ್ಳುವ ಮುನ್ನ ಮತ್ತೊಮ್ಮೆ ಯೋಚಿಸಿ. ಯಶಸ್ಸು ಸಣ್ಣ ಪ್ರಮಾಣದ್ದು ಮಾತ್ರ. ಆದರೆ, ಅದಕ್ಕಾಗಿ ತುಂಬಾ ದಣಿಯಬೇಕಾಗುತ್ತದೆ.
ತುಲಾ : ಉಸಿರಾಟದಷ್ಟೇ ಸಲೀಸಾಗಿ ದಿನ ಕಳೆದುಹೋಗುತ್ತದೆ. ಅನಿರೀಕ್ಷಿತವಾಗಿ ಜೊತೆಗೂಡುವ ಬಾಲ್ಯ ಸ್ನೇಹಿತರು ನೆನಪುಗಳ ಬುತ್ತಿ ತರುತ್ತಾರೆ. ಬೇಸಗೆಯ ದಿನಕ್ಕೆ ಹಳೆಯ ನೆನಪುಗಳು ತಂಪು ತಂದಾವು.
ವೃಶ್ಚಿಕ : ಬೇಜಾರು ಪಟ್ಟುಕೊಳ್ಳುವುದು ಕೂಡ ದಿನಚರಿಯ ಒಂದಂಗ ಅಂದುಕೊಂಡಿರುವುದರಿಂದ ಈ ಹೊತ್ತು ಗುಡ್ಡವೇನೂ ಕಡಿದು ಬೀಳುವುದಿಲ್ಲ . ಇಂಥಾ ಬೇಜಾರುಗಳನ್ನು ಅರಗಿಸಿಕೊಳ್ಳುವುದರಲ್ಲೂ ಒಂದು ಖುಷಿಯಿದೆ.
ಧನಸ್ಸು : ಹೊಸ ಉದ್ಯೋಗದ ನಿರೀಕ್ಷೆಯಲ್ಲಿದ್ದೀರಿ. ಆದರೆ, ಇರುವ ಹುದ್ದೆಯನ್ನು ಬಿಟ್ಟು ಹೋಗಲೂ ನಿಮಗೆ ಕಷ್ಟವಾಗುತ್ತಿದೆ. ಹೊಯ್ದಾಟಗಳಿಂದ ಶೀಘ್ರ ಹೊರಬರಲು ಪ್ರಯತ್ನಿಸಿ. ಧನ ಲಾಭದ ದಿನ.
ಮಕರ : ಸಿಟ್ಟು , ಜಗಳ, ಮಾತು ಎಲ್ಲವುಗಳಿಂದ ಒಂದಷ್ಟು ಕಾಲ ದೂರವಿರಲು ನಿರ್ಧರಿಸಿದ್ದೀರಿ. ಈ ಹೊತ್ತಿನಲ್ಲೇ ಪ್ರಯಾಣಕ್ಕೂ ಲಗೇಜ್ ರೆಡಿ ಮಾಡುತ್ತಿದ್ದೀರಿ. ನಾಳೆ ಖುಷಿಯಾಗಿರುತ್ತೇನೆ ಎಂದುಕೊಳ್ಳುತ್ತಾ ಈ ಹೊತ್ತು ಮನಸ್ಸನ್ನು ಹಾಳು ಮಾಡಿಕೊಳ್ಳಬೇಡಿ.
ಕುಂಭ : ಹಣಕಾಸಿನ ವಿಷಯವಾಗಿ ಮತ್ತಷ್ಟು ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ. ಸಣ್ಣ ಉಳಿತಾಯಕ್ಕೆ ಆದ್ಯತೆ ಕೊಡಿ. ಈ ಸಂಜೆ ತುಂಬಾ ರಂಗಾಗಿದೆ ಎನಿಸಲು ನೀವು ಒಳ್ಳೆಯ ಲಹರಿಯಲ್ಲಿರುವುದೇ ಕಾರಣ.
ಮೀನ : ಅತಿಯಾದ ಸ್ವಾಭಿಮಾನವನ್ನು ಇತರರು ತಪ್ಪಾಗಿ ತಿಳಿದುಕೊಳ್ಳುವ ಅಗತ್ಯವಿದೆ. ನೀವು ಈ ಹೊತ್ತು ಒಂದಷ್ಟು ರಾಜಿಗಳಿಗೆ ಅನಿವಾರ್ಯವಾಗಿ ಒಪ್ಪಲೇಬೇಕಾದೀತು.
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications