ಕ್ಲಿಂಟನ್ ಅಪಾರ ಮಾನವೀಯತೆಯುಳ್ಳ ವ್ಯಕ್ತಿ - ಹೃತಿಕ್ ರೋಷನ್
ಮುಂಬಯಿ : ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಹಾಗೂ ಬಾಲಿವುಡ್‌ನ ಹೊಸ ಧ್ವನಿ ಹೃತಿಕ್ ರೋಷನ್ ಶನಿವಾರ ರಾತ್ರಿ ಒಟ್ಟಿಗೆ ಕೂತು ಊಟ ಮಾಡಿದರು. ಅಂದಹಾಗೆ, ಇಲ್ಲಿ ಅತಿಥಿಗಳ ಪಾತ್ರದಲ್ಲಿದ್ದುದು ಕ್ಲಿಂಟನ್ ಅಲ್ಲ , ಹೃತಿಕ್.
ಅಮೇರಿಕನ್ ಇಂಡಿಯಾ ಪೌಂಢೇಶನ್ ಹೃತಿಕ್‌ಗೆ ಡಿನ್ನರ್‌ನ ಆಹ್ವಾನ ಕಳುಹಿಸಿತ್ತು . ಜಗತ್ತಿನ ದೊಡ್ಡಣ್ಣ ಎನಿಸಿರು ರಾಷ್ಟ್ರದ ಅಧ್ಯಕ್ಷ ಪದ ವಹಿಸಿದ್ದ ವ್ಯಕ್ತಿಯನ್ನು ಭೇಟಿ ಮಾಡುವ ಅವಕಾಶವನ್ನು ಹೃತಿಕ್ ಕಳಕೊಳುತ್ತಾರಾ ? ಸರಿ, ಊಟಕ್ಕೆ ಜೊತೆಯಾದರು. ಕ್ಲಿಂಟನ್‌ರೊಂದಿಗೆ ನಗೆ- ಮಾತು ಹಂಚಿಕೊಳ್ಳುತ್ತಾ ರಾತ್ರಿಯಾಂದನ್ನು ಅವಿಸ್ಮರಣೀಯವಾಗಿಸಿಕೊಂಡರು. ಅಂದಹಾಗೆ, ಕ್ಲಿಂಟನ್ ಹಾಗೂ ಹೃತಿಕ್ ಏನನ್ನು ಮಾತಾಡಿಕೊಂಡಿರಬಹುದು, ಸಿನಿಮಾ- ರಾಜಕೀಯ. ಮಾತುಕತೆಯ ವಿವರಗಳು ತಿಳಿದುಬಂದಿಲ್ಲ .
ಹೃತಿಕ್‌ರಂತೂ, ಕ್ಲಿಂಟನ್ ಭೇಟಿಯ ನಂತರ ಖುಷಿಯಾಗಿದ್ದರು. ಆತನೊಬ್ಬ ಅಪಾರ ಮಾನವೀಯತೆಯುಳ್ಳ ವ್ಯಕ್ತಿ ಎಂದು ಕ್ಲಿಂಟನ್‌ರನ್ನು ಹೃತಿಕ್ ಬಣ್ಣಿಸುವಾಗ ಜೊತೆಗಿದ್ದ ಪತ್ನಿ ಸೂಸನ್ ನಸು ನಕ್ಕರು. ಡಿನ್ನರ್‌ನಲ್ಲೂ ಅವರು ಇದೇ ರೀತಿ ಆಗಾಗ ನಗುತ್ತಲೇ ಇದ್ದರು.
ಊಟಕ್ಕೆ ಮುಂಚಿನ ಕ್ಲಿಂಟನ್‌ರ ಚಿಕ್ಕ ಭಾಷಣ ತುಂಬಾ ಅದ್ಭುತವಾಗಿತ್ತು . ನಾನಂತೂ, ಅದರಿಂದ ತುಂಬಾ ಪ್ರಭಾವಿತನಾದೆ ಎಂದು ಹೃತಿಕ್ ಹೇಳಿದರು. ಹೃತಿಕ್ ಪೋಷಕರಾದ ರಾಕೇಶ್ ರೋಷನ್ ಹಾಗೂ ಪಿಂಕಿ ಕೂಡ ಡಿನ್ನರ್‌ನಲ್ಲಿ ಭಾಗವಹಿಸಿದ್ದರು.
(ಯುಎನ್‌ಐ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications