ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಉದ್ಯೋಗ ಹುಡುಕಲು ಹೊರಡುವವರಿಗೆ ಇವತ್ತು ಅನುಕೂಲ ಘಳಿಗೆ ಇದೆ. ಕೆಲಸದವರಿಂದ ಸುಲಲಿತ ಸಹಕಾರ ಒದಗುವುದರಿಂದ ನಿಮಗೆ ಸ್ವಲ್ಪ ಬಿಡುವು ಜಾಸ್ತಿ ಸಿಗಬಹುದು.ವೃಷಭ : ಮನೆಯಲ್ಲಿ ಸಂತೋಷದ ವಾತಾವರಣ ನೆಲೆಸಿರುತ್ತದೆ. ಭೂಮಿ ಖರೀದಿ ವ್ಯವಹಾರಗಳಿದ್ದರೆ ಇವತ್ತು ಮುಗಿಸುವುದು ಒಳ್ಳೆಯದು.
ಮಿಥುನ : ಒಂಟಿಯಾಗಿರುವುದು ಕಷ್ಟವಲ್ಲ. ಆದರೆ ಖಾಲಿತನವನ್ನು ಭರಿಸುವುದು ಮತ್ತು ಸಮಯವನ್ನು ನಿಭಾಯಿಸುವುದು ಕಷ್ಟ ಎನಿಸುತ್ತದೆ. ಎನಿ ವೇ, ನಿಮ್ಮದೇ ಆಯ್ಕೆ ತಾನೆ?
ಕಟಕ : ಷೇರು ವ್ಯವಹಾರದಲ್ಲಿ ಮುನ್ನಡೆ ಕಾಣುತ್ತೀರಿ ಆದ್ದರಿಂದ, ಆರ್ಥಿಕ ಸ್ಥಿತಿಯಲ್ಲಿ ಕೊಂಚ ಉತ್ತಮ ಸ್ಥಿತಿ ಕಾಣುತ್ತದೆ.
ಸಿಂಹ : ನೀವು ನಿರೀಕ್ಷಿಸಿದ ಜಯ ನಿಮ್ಮ ಬಾಗಿಲಿಗೆ ಬಂದಿದೆ. ಒಳ್ಳೆ ಮನಸ್ಸಿನಿಂದ ಬರಮಾಡಿಕೊಳ್ಳಿ, ಬೇರೆಯವರ ಬಗ್ಗೆ ಮತ್ಸರ ಬೇಡ.
ಕನ್ಯಾ : ನೀವು ನಡೆಸಿರುವ ಚಿಂತನೆಗಳು ನೂರಕ್ಕೆ ನೂರರಷ್ಟು, ಸತ್ಯ, ಆದರೆ ಸ್ನೇಹಿತರು ಇವನ್ನೆಲ್ಲಾ ನಂಬುತ್ತಿಲ್ಲವಲ್ಲಾ ಎಂಬ ಬಗ್ಗೆ ಬೇಸರ ಬೇಡ.
ತುಲಾ : ಆರೋಗ್ಯದ ಸ್ಥಿತಿ ಉತ್ತಮವಾಗಿರುತ್ತದೆ. ಪ್ರಯಾಣ ಸಂಭವ ಇರುವುದರಿಂದ ಯಾವುದರ ಬಗ್ಗೆಯೂ ನಿರ್ಲಕ್ಷ್ಯ ಬೇಡ.
ವೃಶ್ಚಿಕ : ನಿಮಗಿವತ್ತು ರಿಲ್ಯಾಕ್ಸ್ ಅಂತ ಸ್ನೇಹಿತರು ಅಂದುಕೊಂಡಿರುತ್ತಾರೆ. ಬೇಜಾರಿನ ದಿನ ಅಂತ ಬಂಧುಗಳು ಅಂದುಕೊಂಡಿರುತ್ತಾರೆ. ಅವೆರಡನ್ನೂ ಸುಳ್ಳು ಮಾಡುವುದು ನಿಮ್ಮ ಕೈಲಿದೆ.
ಧನಸ್ಸು : ಶಾಪಿಂಗ್ ಹೋದರೆ, ಟೋಪಿ ಬೀಳದಂತೆ ಗಮನ ವಹಿಸಿ. ಭೂ ವ್ಯವಹಾರದಲ್ಲಿ ಇವತ್ತೇನೂ ಲಾಭ ಕಾಣದು.
ಮಕರ : ನಿದ್ದೆಗಣ್ಣಿನಲ್ಲಿಯೇ ಇವತ್ತು ಮಧ್ಯಾಹ್ನವಾಗಿಬಿಡುತ್ತದೆ. ಆಫೀಸು ವ್ಯವಹಾರಗಳಲ್ಲಿ ಇಲ್ಲದ ಆಸಕ್ತಿಯನ್ನು ಎಳೆದು ತರಲು ಹೆಣಗಾಡುತ್ತೀರಿ.
ಕುಂಭ : ಸ್ನೇಹಿತರ ಭೇಟಿಯಿಂದ ಖುಷಿಯಾಗಿರುತ್ತೀರಿ. ಯಾರ ಬಗ್ಗೆಯೂ ಚಾಡಿ ಮಾತುಗಳು ಕೇಳಿ ಬಂದಲ್ಲಿ ಅವನ್ನು ನಿರ್ಲಕ್ಷಿಸಿ.
ಮೀನ : ಲಾಟರಿ ಕೊಂಡು ಕೊಂಡರೆ ತುಸು ಲಾಭ ಬರಬಹುದು. ಆದರೆ ಮನೆಯ ಬಗೆಗಿನ ಕಾಳಜಿ ಕುಂದದಿರಲಿ.
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications