ಅವರಿಗೆ ಮಗು ಬೇಕಿತ್ತು, ಇವಳಿಗೆ ಹಣ ಬೇಕಿತ್ತು, ಇದೇ ಹಿಕಮತ್ತು!
ಮೈಸೂರು : ಮಕ್ಕಳಾಗದ ನೋವನ್ನು ಭರಿಸಿಕೊಳ್ಳಲು ದಂಪತಿಗಳು, ಅಮಾಯಕ ಹುಡುಗಿಯಾಬ್ಬಳನ್ನು ಹೆರಿಗೆ ಬಾಡಿಗೆಗೆ ಪಡೆದ ವಿದ್ಯಮಾನ ಮೈಸೂರಿನಿಂದ ವರದಿಯಾಗಿದೆ. ನಗರದಿಂದ ಪ್ರಕಟವಾಗುವ ಆಂಗ್ಲ ಪತ್ರಿಕೆಯಾಂದರ ವರದಿ ಹೀಗೆ ಹೇಳುತ್ತದೆ.....
ಆ ದಂಪತಿಗಳಿಗೆ ಹೇಗಾದರೂ ಮಾಡಿ ಮಕ್ಕಳನ್ನು ಪಡೆಯಬೇಕಿತ್ತು. ಆದರೆ ಹೆಂಡತಿ ಗರ್ಭ ಧರಿಸಲಾಗದು ಎಂದು ವೈದ್ಯಕೀಯ ವರದಿ ಹೇಳಿತ್ತು. ಪತಿ ಇನ್ನೊಂದು ಮದುವೆಯಾಗಬಹದು ಎಂಬ ಹೆದರಿಕೆಯಿಂದ ಹುಡುಗಿಯಾಬ್ಬಳನ್ನು ಮಗು ಹೆರುವುದಕ್ಕಾಗಿ ಗೊತ್ತು ಮಾಡಲು ಗಂಡನಿಗೆ ಸಲಹೆ ಮಾಡಿದಳು.
ಮೈಸೂರಿನ ಬೋಗಾದಿ ಏರಿಯಾದ ಪತಿರಾಯ ಒಬ್ಬ ಉದ್ಯಮಿ. ಅವಿವಾಹಿತ ಹುಡುಗಿಯಾಬ್ಬಳನ್ನು ಗೊತ್ತು ಮಾಡುವಲ್ಲಿ ಯಶಸ್ವಿಯಾದ. ಆಕೆಯ ತಂದೆ ತಾಯಿಯೂ ಈ ವ್ಯವಹಾರಕ್ಕೆ ಒಪ್ಪಿದರು. ಐದು ಸಾವಿರ ರೂಪಾಯಿ ಬಾಡಿಗೆ ಮತ್ತು ಹುಡುಗಿಯ ಎಲ್ಲ ಖರ್ಚು ವೆಚ್ಚಗಳನ್ನು ದಂಪತಿಗಳು ಭರಿಸುವುದೆಂದು ಒಪ್ಪಂದವಾಯಿತು. ಹುಡುಗಿ ಗರ್ಭವತಿಯಾದಳು. ಖಾಸಗಿ ಆಸ್ಪತ್ರೆಯಾಂದರಲ್ಲಿ ಆಕೆ ಮಾರ್ಚ್ 26ರಂದು ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದಳು.
ಆದರೆ, ಸರಿಯಾದ ಸಮಯಕ್ಕೆ ಆಕೆಯಿಂದ ಮಗುವನ್ನು ಪಡೆಯುವುದು ದಂಪತಿಗಳಿಗೆ ಸಾಧ್ಯವಾಗಲಿಲ್ಲ. ದಾರಿ ಕಾದು ಸೋತ ಆ ಹುಡುಗಿ ಹಾಗೂ ಆಕೆಯ ಹೆತ್ತವರು ಮಗುವನ್ನು ಲಿಂಗಾಬುಧಿ ಕೆರೆಗೆ ಬಿಸಾಡಲು ನಿರ್ಧರಿಸಿದರು. ಆದರೆ ಲಿಂಗಾಂಬುಧಿ ಕೆರೆಗೆ ಮಗುವನ್ನು ಎಸೆಯುವಾಗ ಪುಣ್ಯಾತ್ಮನೊಬ್ಬ ಆ ಮಗುವನ್ನು ರಕ್ಷಿಸಿದ. ಈತನನ್ನು ನಂಬಿದ ಹುಡುಗಿ ತನ್ನ ಕತೆಯನ್ನೆಲ್ಲಾ ಹೇಳಿ, ಮಗುವನ್ನು ಆತನಿಗೇ ಒಪ್ಪಿಸಿದಳು. ಹೆತ್ತವರೂ ಜವಾಬ್ದಾರಿ ಕಳೆಯಿತು ಎಂದುಕೊಂಡರು.
ಮಗುವನ್ನು ಆತ ಒಡನಾಡಿ ಸ್ವಯಂ ಸೇವಾ ಸಂಸ್ಥೆಗೆ ತಲುಪಿಸಿದ. ಒಡನಾಡಿ, ಲೈಂಗಿಕ ಕಾರ್ಯಕರ್ತರ ಮತ್ತು ಬೀದಿ ಮಕ್ಕಳ ಕಲ್ಯಾಣ ಸಂಸ್ಥೆ. ಮಗುವನ್ನು ಪಡೆಯುವಲ್ಲಿ ಕೊನೆಗೂ ಸೋತ ದಂಪತಿಗಳು ಒಡನಾಡಿಯ ಮೊರೆ ಹೋದರು. ಇದೊಂದು ಲೈಂಗಿಕ ಶೋಷಣೆಯ ಪ್ರಕರಣ ಎಂದು ಒಡನಾಡಿಯ ಸಂಯೋಜಕ ಪರಶುರಾಮ್ ಹೇಳುತ್ತಾರೆ.
ಅವರ ಪ್ರಕಾರ ದಂಪತಿಗಳು ತಪ್ಪು ಮಾಡಿದ್ದಾರೆ. ಹುಡುಗಿ ಒಪ್ಪಿದಲ್ಲಿ ಗರ್ಭವನ್ನು ಕೃತಕವಾಗಿ ದಾನ ಮಾಡುವುದು ನ್ಯಾಯಸಮ್ಮತ. ಆದರೆ ಆ ಹುಡುಗಿಯಾಂದಿಗೆ ದೇಹ ಸಂಬಂಧ ಹೊಂದುವ ಮೂಲಕ ಗಂಡ ಮಹಾಶಯ ಅಮಾಯಕ ಹುಡುಗಿಯನ್ನು ದುರುಪಯೋಗ ಪಡಿಸಿಕೊಂಡಿದ್ದಾನೆ. ಆದ್ದರಿಂದ ಈ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ ಎನ್ನುತ್ತಾರೆ ಪರಶುರಾಮ್. ಇವತ್ತು ಮಗು ಒಡನಾಡಿ ಸಂಸ್ಥೆಯಲ್ಲಿದೆ. ಹೆತ್ತ ತಾಯಿ ಮನೆಯಲ್ಲಿದ್ದಾಳೆ. ಬಾಡಿಗೆ ಮಗುವನ್ನು ಆಶಿಸಿದ ತೆಂದೆತಾಯಿಗಳು ಈಗ ಇತ್ತಲೂ ಇಲ್ಲ, ಅತ್ತಲೂ ಇಲ್ಲ ಎನ್ನುವಂತಾಗಿದ್ದಾರೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications