Get Updates
Get notified of breaking news, exclusive insights, and must-see stories!

ಬೆಂಗಳೂರು ಸಂಪಂಗಿಕೆರೆ ಆವರಣದಲ್ಲಿ ಸಂಭ್ರಮದ ಹಸಿ ಕರಗ

ಬೆಂಗಳೂರು : ವಿಶ್ವ ವಿಖ್ಯಾತ ಬೆಂಗಳೂರು ಕರಗದ ಪೂರ್ವಭಾವಿಯಾಗಿ ಶನಿವಾರ ಬೆಳಗಿನ ಜಾವ ಸಂಪಂಗಿ ಕೆರೆ ಆವರಣದಲ್ಲಿ ಶ್ರದ್ಧೆ ಹಾಗೂ ಸಂಭ್ರಮದಿಂದ ಹಸಿ ಕರಗ ಪೂಜೆ ಹಾಗೂ ಮೆರವಣಿಗೆ ನಡೆಯಿತು. ಸಾವಿರಾರು ಜನ ಭಕ್ತಾದಿಗಳ ಸಮ್ಮುಖದಲ್ಲಿ ಹಸಿ ಕರಗವನ್ನು ಮಲ್ಲಿಗೆ ಹೂವಿನಿಂದ ಪೂಜಿಸಿ, ಗೋವಿಂದಾ ಗೋವಿಂದ ಎಂದು ಕೂಗುತ್ತಾ ವಹ್ನಿಕುಲ ವಂಶಸ್ಥರು ಉರಿಯುವ ಪಂಜಿನ ಬೆಳಕಲ್ಲಿ ಹಸಿ ಕರಗ ಹೊತ್ತು ಸಾಗಿದರು.

ಕರಗದ ಹಿಂದೆ ವೀರಕುಮಾರರು ಖಡ್ಗಗಳನ್ನು ಝಳಪಿಸುತ್ತಾ, ಗೋವಿಂದಾ ಡಿ, ಡಿಕ್‌ - ಡಿ ಎಂದು ಕೂಗುತ್ತಾ ಹಿಂಬಾಲಿಸಿದರು. ಭಾನುವಾರ ಚೈತ್ರ ಹುಣ್ಣಿಮೆ. ಭಾನುವಾರ ರಾತ್ರಿ ಬೆಂದಕಾಳೂರಿನಲ್ಲಿ ನಡೆಯುವ ಸಾಂಸ್ಕೃತಿಕ ಉತ್ಸವಕ್ಕೆ ನಗರ ಸಜ್ಜಾಗಿದೆ. ಅಂದೇ ಬೆಂಗಳೂರು ನಗರ ಪಾಲಿಕೆ ಕೂಡ ಬೆಂಗಳೂರಿನ ಸಂಸ್ಥಾಪಕ ಕೆಂಪೇಗೌಡರ ಜಯಂತಿಯನ್ನೂ ಆಚರಿಸುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನೂ ಸನ್ಮಾನಿಸುತ್ತದೆ.

ಭಾರತದ ಸಿಲಿಕಾನ್‌ ಕಣಿವೆ ಎನಿಸಿರುವ ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ಅಭಿವೃದ್ಧಿಯ ನಡುವೆಯೂ ಕೂಡ ಕರಗ ಕಳೆಗುಂದಿಲ್ಲ. ದೇಶ ವಿದೇಶಗಳಿಂದ ಜನರು ಬೆಂಗಳೂರು ಕರಗ ಕಾಣಲು ಬರುತ್ತಾರೆ. ಅಷ್ಟೇಕೆ. ಬೆಂಗಳೂರಿನಲ್ಲಿರುವ ಯುವಪೀಳಿಗೆ, ಅದರಲ್ಲೂ ಸಾಫ್ಟ್‌ವೇರ್‌ ಎಂಜಿನಿಯರ್‌ಗಳ ದಂಡು ಕೂಡ ಕರಗ ವೀಕ್ಷಣೆಗೆ ಧರ್ಮರಾಯನ ದೇವಾಲಯದ ಬಳಿ ಬೀಡು ಬಿಡುತ್ತದೆ.

ಕಳೆದ ವರ್ಷ ಲಕ್ಷ್ಮೀಶರು ಹೊತ್ತಿದ್ದ ಕರಗ ಕಾಣಲು ಎಲೆಕ್ಟ್ರಾನಿಕ್‌ ಸಿಟಿಯಿಂದ ಬಸ್‌ ಮಾಡಿಕೊಂಡು ಬಂದ ಎಂಜಿನಿಯರ್‌ಗಳ ಸಂಖ್ಯೆಯೂ ಕಡಿಮೆ ಇರಲಿಲ್ಲ. ಈ ಬಾರಿ ಅಭಿಮನ್ಯು ಕರಗ ಹೊರುತ್ತಿದ್ದಾರೆ. ಬೆಂಗಳೂರಿನ ಕರಗ ಕುಣಿಯುವ ಕರಗ ಅಲ್ಲ. ಓಡುವ ಕರಗ. ಗಂಟೆ ಗಟ್ಟಲೆ ಕರಗ ಈಗ ಬರುತ್ತದೆ, ಆಗ ಬರುತ್ತದೆ ಎಂದು ಕಾಯುವ ಜನರನ್ನು ಕರಗ ಬಂತು ಕರಗ ಎಂದು ಕೂಗಿ ಏಪ್ರಿಲ್‌ ಫೂಲ್‌ ಮಾಡುವವರ ಸಂಖ್ಯೆಯೂ ಕಡಿಮೆ ಇಲ್ಲ. ಆದರೂ ಜನ ಕಾದು ಕರಗ ನೋಡಿ, ಪುರಿ ಬತ್ತಾಸು, ಕಡಲೆಕಾಯಿ ತಿನ್ನುತ್ತಾ ಆನಂದದಿಂದ ಮನೆಗೆ ಮರಳುತ್ತಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+