• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಗ್ಗರಿಸಿತೇ ಅಮೇರಿಕಾ! ಅಲ್ಲೇನಾಗಿದೆ ಗೊತ್ತಾ?

By Staff
|

*ಆಲ್‌ಮಿತ್ರ

ಸಾಫ್ಟ್‌ವೇರ್‌ ಟೈಟಾನಿಕ್‌ ಮುಳುಗುತ್ತಿದೆ. ಅಮೇರಿಕೆದ ಆರ್ಥಿಕ ಪರಿಸ್ಥಿತಿಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ. ಕಳೆದ ಎರಡು ತಿಂಗಳಿಂದ ನಿತ್ಯ ಇಂಥದ್ದೇ ಸುದ್ದಿಗಳನ್ನು ಕೇಳುತ್ತಿದ್ದೇವೆ. ಇನ್ನೇನು ಸಾಫ್ಟ್‌ವೇರ್‌ ಉದ್ಯಮ ನಾಮಾವಶೇಷವಾಯಿತು, ಐಟಿ ತಂತ್ರಜ್ಞರು ದಿಕ್ಕು ಕಳಕೊಂಡರು ಅನ್ನುವ ಆತಂಕದ ಮಾತುಗಳನ್ನೂ ಕೇಳಿದ್ದೇವೆ. ಈ ಎಲ್ಲಾ ಮಾತುಗಳಲ್ಲಿ ವಾಸ್ತವಕ್ಕಿಂತ ಅತಿಶಯವೇ ಹೆಚ್ಚು . ಹಾಗಾದರೆ, ವಾಸ್ತವ ಏನು ? ಅಮೇರಿಕಾದಲ್ಲಿ ನಡೆದಿರುವುದಾದರೂ ಏನು ?

 1. ಅಮೆರಿಕೆಯಲ್ಲಿ , ಕಳೆದ ವರ್ಷ ಆರ್ಥಿಕ ಬೆಳವಣಿಗೆಯ ದರ ಪ್ರತಿಶತ 10 ರಷ್ಟಿತ್ತು . ಈ ವರ್ಷ ಆ ಪ್ರಮಾಣ ಶೇ. 1 ಕ್ಕಿಳಿದಿದೆ. ಇದರಿಂದಾಗಿ ಮುಖ್ಯವಾಗಿ ಪೆಟ್ಟು ತಿಂದಿರುವುದು ಉತ್ಪಾದನಾ ಕ್ಷೇತ್ರ. ಇದರ ಪರಿಣಾಮ, ಆಟೋಮೊಬೈಲ್ಸ್‌ , ಸೂಪರ್‌ ಮಾರ್ಕೆಟ್‌ಗಳನ್ನು ತಟ್ಟಿದೆ. ಅಂದರೆ ಸಾಮಾನ್ಯ ಮನುಷ್ಯನನ್ನು ತಲುಪಿದೆ.
 2. ಅಮೆರಿಕಾದ ವಾಣಿಜ್ಯ ಸಂಘಟನೆಗಳು ಪ್ರಮುಖವಾಗಿ ವಾಲ್‌ ಸ್ಟ್ರೀಟ್‌ಪ್ರೊಜೆಕ್ಷನ್ಸ್‌ ನ್ನು ಅವಲಂಬಿಸಿವೆ. ಒಂದು ವೇಳೆ, ಈ ವಾಲ್‌ ಸ್ಟ್ರೀಟ್‌ಪ್ರೊಜೆಕ್ಷನ್ಸ್‌ ಮುಟ್ಟಲು ಕಂಪನಿಯಾಂದು ವಿಫಲವಾದಲ್ಲಿ , ಆ ಕಂಪನಿ ಷೇರು ಮಾರುಕಟ್ಟೆಯಲ್ಲೂ ಕುಸಿತವನ್ನು ಕಾಣಬೇಕಾಗುತ್ತದೆ. ಅಂದಮಾತ್ರಕ್ಕೆ, ಆ ಕಂಪನಿಗಳು ಬಿಂಬಿಸುವ ಸಂಕಟ ವಾಸ್ತವದ ನೆಲೆಗಟ್ಟಿನ ಮೇಲಿದೆ ಎಂದೇನು ಅರ್ಥವಲ್ಲ .
 3. ಅನೇಕ ಡಾಟ್‌ಕಾಂ ಕಂಪನಿಗಳು ಹಾಗೂ ಲ್ಯೂಸೆಂಟ್‌ ಮತ್ತು ಮೊಟೊರೊಲ ಅಂಥಹ ಬ್ಲೂ ಚಿಪ್‌ಗಳು ಕೆಲಸಗಾರರನ್ನು ತೆಗೆಯುವ ಮೂಲಕ ಸುದ್ದಿಯಲ್ಲಿವೆ. ಈ ಹಿನ್ನೆಲೆಯಲ್ಲಿ ಕೆಲವು ಕುತೂಹಲಕರ ಅಂಶಗಳು ಕಂಡುಬರುತ್ತವೆ -
 • ಡಾಟ್‌ಕಾಂಗಳ ವೈಫಲ್ಯ : ಕೆಲವೇ ತಿಂಗಳ ಹಿಂದೆ ನಾಯಿಕೊಡೆಗಳಂತೆ ಹುಟ್ಟಿಕೊಂಡ ಡಾಟ್‌ಕಾಂಗಳ ವೇಗ ಈಗ ಸಾಕಷ್ಟು ಕಡಿಮೆಯಾಗಿದೆ. ಹಾಗೆ ಹುಟ್ಟಿಕೊಂಡ ಬಹುತೇಕ ಡಾಟ್‌ಕಾಂಗಳು ಗಟ್ಟಿ ತಳಪಾಯ ಹಾಗೂ ವಾಸ್ತವ ವಾಣಿಜ್ಯದ ಹಿನ್ನೆಲೆಯಿಂದ ದೂರವಾಗಿದ್ದವು. ಆಕರ್ಷಕ ವೇತನ, ಹುದ್ದೆ , ಷೇರುಗಳು, ಉತ್ತಮ ಸೇವಾ ಪರಿಸರಗಳನ್ನು ಹೊಂದಿದ್ದ ಡಾಟ್‌ಕಾಂಗಳು ನಿಜವಾದ ಪ್ರತಿಭೆಗಳನ್ನು ಆಕರ್ಷಿಸಿದ್ದು ನಿಜ. ಆದರೆ, ಕೆಲವೇ ದಿನಗಳಲ್ಲಿ ಡಾಟ್‌ಕಾಂ ಗುಳ್ಳೆ ಒಡೆಯಿತು. ಈ ದುರಂತಕ್ಕೆ ಅವುಗಳು ಹೊಂದಿದ್ದ ಸಡಿಲ ಆರ್ಥಿಕ ನೀತಿಗಳು ಕಾರಣವೇ ಹೊರತು ಸರ್ಕಾರವಾಗಲೀ, ಅರ್ಥಿಕ ಬೆಳವಣಿಗೆ ದರದ ಇಳಿತವಾಗಲೀ ಅಲ್ಲ .
 • ಕುಸಿದ ಲ್ಯೂಸೆಂಟ್‌, ಕಂಗಾಲಾದ ಮಾರುಕಟ್ಟೆ

  ಈಗಲೂ ಲ್ಯೂಸೆಂಟ್‌ ಬಗೆಗೆ ಆಶಾಭಾವನೆ ಉಳಿದುಕೊಂಡಿದೆ. ಅವರ ಎಟಿ ಅಂಡ್‌ ಟಿ ಬೆಲ್‌ ಲ್ಯಾಬ್‌ ಮತ್ತು ಸಂಶೋಧನೆಗಳನ್ನು ಯಾರು ತಾನೇ ಮರೆಯಲು ಸಾಧ್ಯ. ಪ ್ರಸ್ತುತ , 90 ಡಾಲರ್‌ಗಳಿಂದ 10 ಡಾಲರ್‌ಗಳಿಗೆ ಕಂಪನಿಯ ಷೇರು ದರ ಕುಸಿದಿದೆ. 10 ಸಾವಿರ ನೌಕರರನ್ನು ಕೆಲಸದಿಂದ ತೆಗೆದುಹಾಕಿದೆ. ಇದಕ್ಕೆಲ್ಲಾ ಏನು ಕಾರಣ ?

  ಲ್ಯೂಸೆಂಟ್‌, ಒಂದು ಭಾರೀ ಕಂಪನಿ, ಆನೆ ಮಾದರಿಯದು. ಬಹುಶಃ ಈ ಭಾರೀ ಪ್ರಮಾಣವೇ ಮಾರುಕಟ್ಟೆಯಲ್ಲಿ ಕಂಪನಿ ಅಪ ಯಶಸ್ಸು ಕಾಣಲು ಕಾರಣವಿದ್ದರೂ ಇದ್ದೀತು. ಮುಖ್ಯವಾಗಿ, ಆಪ್ಟಿಕಲ್‌ ನೆಟ್‌ವರ್ಕಿಂಗ್‌ ಕೈ ತಪ್ಪಿದ್ದು ಲ್ಯೂಸೆಂಟ್‌ಗೆ ಭಾರೀ ಹೊಡೆತ ಕೊಟ್ಟಿತು. ಅಲ್ಲಿ ಯಶಸ್ವಿಯಾದ ಜ್ಯುನಿಫರ್‌ ನೆಟ್‌ವರ್ಕ್ಸ್‌ ಅಪಾರ ಯಶಸ್ಸು ಕಂಡಿತು. ಅದರ ಮಾರುಕಟ್ಟೆ ಹಾಗೂ ನೌಕರರ ಬೆಳವಣಿಗೆ ಏರುಗತಿಯಲ್ಲಿದೆ.

  ಪ್ರಸ್ತುತ, ಅಮೆರಿಕದಲ್ಲಿ ನ ವಾಣಿಜ್ಯದಲ್ಲಿ ಪ್ರತಿಯಾಂದು ತಪ್ಪುಗಳಿಗೂ ಬೆಲೆ ತೆರಲೇ ಬೇಕಾಗಿದೆ. ಅಮೇರಿಕವೇ ಏಕೆ, ವಿಶ್ವದ ಎಲ್ಲೆಡೆಯೂ ತಪ್ಪುಗಳಿಗೆ ದಂಡ ತಪ್ಪಿದ್ದಲ್ಲ .

  ಇಷ್ಟು ಮಾತ್ರವಲ್ಲ , ಲ್ಯೂಸೆಂಟ್‌ ಹಲವಾರು ತಪ್ಪು ನಿರ್ಧಾರಗಳನ್ನು ಕೈಗೊಳ್ಳುತ್ತಲೇ ಹೋಯಿತು. ಹಲವಾರು ಕಂಪನಿಗಳನ್ನು ದೊಡ್ಡ ಮೊತ್ತಕ್ಕೇ ಕೊಂಡದ್ದು ಕಂಪನಿಗೆ ಬಿಸಿ ತುಪ್ಪವಾಯಿತು. ಲ್ಯೂಸೆಂಟ್‌ ತನ್ನ ತಪ್ಪು ನಿರ್ಧಾರಗಳ ಫಲವನ್ನೀಗ ಉಣ್ಣುತ್ತಿದೆ. ಈ ಇಳಿಮುಖ ಕ್ಲಿಂಟನ್‌ ಅಥವಾ ಬುಷ್‌, ಯಾರ ಕಾಲದಲ್ಲಿ ನಡೆಯಿತು ಅನ್ನುವುದು ಮುಖ್ಯ ಅಲ್ಲವೇ ಅಲ್ಲ . ಏಕೆಂದರೆ, ಲ್ಯೂಸೆಂಟ್‌ ತನ್ನ ತಪ್ಪುಗಳಿಂದಾಗಿಯೇ ಕುಸಿತ ಕಂಡಿದೆ ಅನ್ನುವುದನ್ನು ಮರೆಯಬಾರದು.

  ತಪ್ಪು ನಿರ್ಧಾರಗಳಿಂದಾಗಿ ಕುಸಿದ ಮೊಟೊರೊಲ

  ಈ ದಶಕದಲ್ಲಿ ಬಹಳ ದೊಡ್ಡ ವೈಫಲ್ಯ ಮೊಟೊರೊಲ ಹಾಗೂ ಅದರ ಇರಿಡಿಯಂ ಯೋಜನೆಯದು. 68 ಉಪಗ್ರಹಗಳನ್ನು ಆಕಾಶಕ್ಕೆ ಹಾರಿಬಿಡುವ ಮೂಲಕ, ಮೊಬೈಲ್‌ ಫೋನ್‌, ಆಡಿಯಾ, ವಿಡಿಯಾ, ದತ್ತಾಂಶಗಳ ಉತ್ಪನ್ನಗಳ ಮೂಲಕ ವಿಶ್ವದ ಎಲ್ಲ ಭಾಗಗಳಲ್ಲಿ ಸದ್ದು ಮಾಡಿದ್ದ ಮೊಟೊರೊಲ, ಮಿಲಿಯನ್‌ಗಟ್ಟಲೆ ಡಾಲರ್‌ಗಳ ವಹಿವಾಟು ನಡೆಸಿತ್ತು . ಆದರೀಗ, ಎಲ್ಲಾ ಯೋಜನೆಗಳು ಅಟ್ಟರ್‌ ಫ್ಲಾಫ್‌ ಎನಿಸಿವೆ, ತಪ್ಪು ನಿರ್ಣಯಗಳಿಂದಾಗಿ ಕಂಪನಿ ಮುಗ್ಗರಿಸಿದೆ.

  ಕುಸಿತದಲ್ಲಿ ರಾಜಕಾರಣದ್ದೂ ಪಾಲಿದೆ

  ನಿಧಾನಗತಿಯ ಆರ್ಥಿಕತೆಯ ಬಗ್ಗೆ ಹೇಳಿಕೆ ನೀಡಿರುವ ಅಧ್ಯಕ್ಷ ಬುಷ್‌, ಇನ್ನೂ ಸ್ವಲ್ಪ ಕಾಲ ಆರ್ಥಿಕ ನೀತಿ ಇದೇ ಗತಿಯಲ್ಲಿರುತ್ತದೆ ಎಂದಿದ್ದಾರೆ. ಈ ನಿಟ್ಟಿನಲ್ಲಿ ಅಮೆರಿಕೆಯ ಚುನಾವಣೆಗಳನ್ನು ಗಮನಿಸಬೇಕು. ಚುನಾವಣಾ ಸಮಯದಲ್ಲಿ ಗೋರ್‌ ಒಳ್ಳೆಯ ಮಾತುಗಾರರು, ಬುಷ್‌ ಮಾತು ಕಮ್ಮಿ ಎಂಬ ಪಬ್ಲಿಕ್‌ ಒಪಿನಿಯನ್‌ ಅನ್ನು ಬುಷ್‌ ಹಿಂಬಾಲಕರು ನಿರ್ಮಿಸಿದ್ದರು. ಪರಿಣಾಮವಾಗಿ, ಬುಷ್‌ ಸ್ವಲ್ಪವೇ ಚೆನ್ನಾಗಿ ಮಾತಾಡಿದರೂ, ಗೋರ್‌ಗಿಂತ ಹೆಚ್ಚು ಪರಿಣಾಮಕಾರಿ ವ್ಯಕ್ತಿ ಎಂದು ಜನ ನಂಬುವ ಪರಿಸ್ಥಿತಿ ಸೃಷ್ಟಿಯಾಯಿತು. ಇದೇ ತಂತ್ರವನ್ನು ಆರ್ಥಿಕ ನೀತಿಯಲ್ಲೂ ಬಳಸಲಾಗುತ್ತಿದೆ. ಮೊದಲಿಗೇ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ ಎಂಬುದನ್ನು ಜನರ ಮುಂದೆ ಬಿಂಬಿಸುವುದರಿಂದ, ನಂತರದ ಸಣ್ಣ ಯಶಸ್ಸೂ ಬುಷ್‌ರನ್ನು ಎತ್ತರಕ್ಕೇರಿಸುತ್ತದೆ ಹಾಗೂ ಕೆಟ್ಟ ಆರ್ಥಿಕ ಪರಿಸ್ಥಿತಿಗೆ ಬುಷ್‌ ಕಾರಣರಲ್ಲ ಎನ್ನುವುದನ್ನು ಜನ ಮನದಲ್ಲಿ ಬಿಂಬಿಸುತ್ತದೆ.

  ಲ್ಯೂಸೆಕ್ಸ್‌ ಹಾಗೂ ಮೊಟೊರೊಲಗಳ ವೈಫಲ್ಯವನ್ನು ದೊಡ್ಡದು ಮಾಡುವ ನಾವು, ಇದೇ ಹೊತ್ತಿನಲ್ಲಿ ಯಶಸ್ಸು ಕಂಡ ಕಂಪನಿಗಳನ್ನು ಮರೆಯುತ್ತೇವೆ. ಅಂಥಾ ಕಂಪನಿಗಳನ್ನು ಉದಾಹರಿಸುವುದಾದರೆ-

  ಈಬೇ : ಆನ್‌ಲೈನ್‌ ಹರಾಜು ಮಳಿಗೆಯಾಗಿರುವ ಈ ಯಶಸ್ವಿ ಡಾಟ್‌ಕಾಂ ಕಂಪನಿ ಮಾರ್ಕೆಟ್‌ನ ಕಣ್ಮಣಿಯಾಗಿರುವುದಕ್ಕೆ ಅದರ ಸಮರ್ಥ ಆರ್ಥಿಕ ನೀತಿಗಳೇ ಕಾರಣ. ಅದಕ್ಕೆ ಮೊದಲಿಗನೆಂಬ ಅನುಕೂಲವೂ ಇದೆ. ನಾಲ್ಕು ಯಶಸ್ವಿ ವರ್ಷಗಳನ್ನು ಪೂರೈಸಿರುವ ಕಂಪನಿ, ಗಣನೀಯ ಪ್ರಮಾಣದಲ್ಲಿ ಲಾಭಾಂಶವನ್ನೂ ದಾಖಲಿಸಿದೆ.

  ಅಮೆಜಾನ್‌ : ಪುಸ್ತಕ ಹಾಗೂ ಸಂಗೀತ ಮಳಿಗೆಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ಅಮೆಜಾನ್‌ ಲಾಭಗಳಿಸುತ್ತಿರುವ ಸಂಸ್ಥೆ .

  ಜ್ಯುನಿಫರ್‌ ನೆಟ್‌ವರ್ಕ್ಸ್‌ : ಲ್ಯೂಸೆಂಟ್‌ನ ಅಪ ಯಶಸ್ಸನ್ನೇ ಮೆಟ್ಟಿಲಾಗಿ ಬಳಸಿಕೊಂಡು ಬೆಳೆದುಬಂದ ಸಂಸ್ಥೆಯಿದು. ಈ ಹೊತ್ತು ಮಾರ್ಕೆಟ್‌ ಮಾತಾಡುತ್ತಿರುವುದು ಇದೇ ಕಂಪನಿಯ ಬಗ್ಗೆ .

  ಕಾಂಪ್ಯಾಕ್‌ : ಎರಡು ವರ್ಷಗಳ ಹಿಂದೆ ಎರಡು ದೊಡ್ಡ ಕಂಪನಿಗಳನ್ನು ಕಾಂಪ್ಯಾಕ್‌ ಕೊಂಡಾಗ, ಅದರ ನಿರ್ಣಯ ಮಾರುಕಟ್ಟೆಯಲ್ಲಿ ತಪ್ಪೆನಿಸಿತ್ತು . ಕಂಪನಿ ಇದರಿಂದಾಗಿ ಸಾಕಷ್ಟು ತೊಂದರೆಗಳನ್ನೂ ಅನುಭವಿಸಿತು. ಕಂಪನಿಯ ಷೇರು ಕುಸಿಯುತ್ತದೆ, ಕಂಪನಿ ಹಲವಾರು ಉದ್ಯೋಗಿಗಳನ್ನು ತೆಗೆದುಹಾಕುತ್ತದೆ ಎಂದು ಉದ್ಯಮ ನಿರೀಕ್ಷಿಸಿತ್ತು . ಆದರೆ, ಎಲ್ಲಾ ಹೊಡೆತಗಳನ್ನು ದಾಟಿ ಕಂಪನಿ ಗಟ್ಟಿಯಾಗಿ ನಿಂತಿದೆ. ಬಹುಶಃ ಇದೊಂದೇ ಕಂಪನಿ ಈ ರೀತಿಯ ದಿಟ್ಟತನವನ್ನು ಪ್ರದರ್ಶಿಸಿದೆ.

  ಸಿಯಾಬೆಲ್‌ ಬಿಇಎ : ಕಂಪನಿಯ ಅಧ್ಯಕ್ಷ ಬಿಲ್‌ ಕೊಲ್‌ಮನ್‌ ಒಬ್ಬರೇ ಈ ವರ್ಷ 250 ಮಿಲಿಯನ್‌ ಡಾಲರ್‌ಗಳ ದೇಣಿಗೆ ನೀಡಿದ್ದಾರೆ. ಸದ್ಯಕ್ಕೆ ಕಂಪನಿ ಉತ್ತಮ ಸ್ಥಿತಿಯಲ್ಲಿದೆ.

  ಮೇಲಿನ ಉದಾಹರಣೆಗಳಿಂದಾಗಿ, ಅಮೇರಿಕಾದ ಆರ್ಥಿಕ ಮಾರುಕಟ್ಟೆ ಮುಗ್ಗರಿಸಿದೆ ಅನ್ನುವುದಾಗಲೀ, ಸಾಫ್ಟ್‌ವೇರ್‌ ಮುಳುಗಿತು ಅನ್ನುವುದಾಗಲೀ ಕೇವಲ ವದಂತಿಗಳು ಮಾತ್ರ. ತಪ್ಪು ಹಾಗೂ ಆತುರದ ನಿರ್ಧಾರ ಕೈಗೊಂಡ ಕಂಪನಿಗಳು ಮಾತ್ರ ನೆಲ ಕಚ್ಚಿವೆ. ಮಾರುಕಟ್ಟೆ ತಂತ್ರಗಳನ್ನು ಬಲ್ಲ ಕಂಪನಿಗಳು ಯಥಾ ಪ್ರಕಾರ, ಯಶಸ್ಸಿನ ಕುದುರೆಯೇರಿವೆ.

  ವಾರ್ತಾಸಂಚಯ

  ಮುಖಪುಟ / ಇವತ್ತು... ಈ ಹೊತ್ತು...

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more