ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಆಗದ ಹೋಗದ ಕೆಲಸಗಳನ್ನು ಮಾಡಲು ಹೊರಟರೆ ಸುಮ್ಮನೇ ಪರದಾಡುತ್ತೀರಿ. ಗೊಂದಲಗಳ ಬಗೆಗೆ ಹಿರಿಯರಿಂದ ಸಲಹೆ ಕೇಳಿ ಮುಂದುವರೆಯಿರಿ.ವೃಷಭ : ಇವತ್ತಿನ ವ್ಯಾಪಾರದಲ್ಲಿ ಸಿಕ್ಕಾಪಟ್ಟೆ ಲಾಭ ಬರಲಿದೆ. ಆದ್ದರಿಂದ ದೊಡ್ಡ ದೊಡ್ಡ ವ್ಯವಹಾರಗಳನ್ನು ಇವತ್ತು ಕೈಗೆತ್ತಿಕೊಳ್ಳಬಹುದು. ಕೈ ತುಂಬ ಕೆಲಸ ಎನಿಸಿದರೂ ಪರವಾಗಿಲ್ಲ.
ಮಿಥುನ : ಇವತ್ತೆಲ್ಲಾ ಕೆಲಸಗಳನ್ನು ಕಡಿಮೆ ಆಸಕ್ತಿಯಿಂದಲೇ ಆರಂಭಿಸುತ್ತೀರಿ. ಸ್ನೇಹಿತರ ಬಳಿ ಮಾತುಕತೆ ನಡೆಸುವ ಪರಿಸ್ಥಿತಿ ಸಿಗದು, ಬೇಜಾರು ಮಾಡಿಕೊಳ್ಳಬೇಡಿ.
ಕಟಕ : ಸಾಲ ಮಾಡಿದ ಮೇಲೆ ಅವುಗಳನ್ನು ನಿಭಾಯಿಸಬೇಕಲ್ಲವೇ ? ಇವತ್ತು ನಿಮ್ಮ ಸ್ನೇಹಿತರನ್ನು ತುಂಬಾ ತುಂಬಾ ನೆನೆಸಿಕೊಳ್ಳುತ್ತೀರಿ. ಒಂದು ಫೋನ್ ಹಚ್ಚಿ ಮಾತನಾಡುವುದು ಬಿಟ್ಟರೆ ಬೇರೆ ದಾರಿಯಿಲ್ಲ.
ಸಿಂಹ : ನಿಮ್ಮ ಮನೆಯವರು ನಿಮ್ಮನ್ನೇ ನೆಚ್ಚಿಕೊಂಡಿದ್ದಾರೆ. ನೀವು ದೊಡ್ಡ ದೊಡ್ಡ ಆದರ್ಶಗಳನ್ನು ನೆಚ್ಚಿಕೊಂಡಿದ್ದೀರಿ. ಅವರ ಆಸೆಗಳನ್ನು ಮರೆತಿಲ್ಲ ತಾನೇ?
ಕನ್ಯಾ : ನೌಕರಿಯಲ್ಲಿ ನ್ಯಾಯವಾಗಿ ಸಿಗಬೇಕಾದ ಮುನ್ನಡೆ ನಿಮ್ಮ ಪಾಲಿಗೆ ಲಭಿಸುತ್ತದೆ. ಶತ್ರುಗಳ ಬಗ್ಗೆ ಭೀತಿ ಬೇಡ. ನಿಮ್ಮ ಎಲ್ಲ ಕೆಲಸಗಳು ನೀಟಾಗಿದ್ದರೆ ಅವರೇನೂ ಮಾಡಲಾರರು. ಅಲ್ವೇ?
ತುಲಾ : ಮಿತವ್ಯಯದ ಬಗೆಗೆ ತುಂಬಾ ದಿನಗಳ ಬಳಿಕ ಯೋಚಿಸುತ್ತೀರಿ. ಇವತ್ತು ಬ್ಯಾಂಕ್ ವ್ಯವಹಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಹಣ ನಿಮ್ಮ ಬಳಿಯೇ ಇರುತ್ತದೆ.
ವೃಶ್ಚಿಕ : ಒಂದೇ ಕೆಲಸವನ್ನು ಮಾಡಿ ಸುಸ್ತಾಗುತ್ತೀರಿ. ಮತ್ತೆ ಸಂಜೆಯೆಲ್ಲಾ ಅಂಥ ಖುಷಿಯೇನೂ ಇರದ ಸಮಾರಂಭವಿರುತ್ತದೆ. ಮನೆಯವರನ್ನು ಮಿಸ್ ಮಾಡಿಕೊಂಡು ಬೇಸರಿಸಿಕೊಳ್ಳಬೇಡಿ.
ಧನಸ್ಸು : ಕೋರ್ಟ್ ವ್ಯವಹಾರಗಳಲ್ಲಿ ನಿಮಗೆ ಇವತ್ತು ಜಯ ಇರುತ್ತದೆ. ಕೊನೇ ಪಕ್ಷ ಲಾಯರ್ ಬಳಿ ನಡೆಸಬೇಕಿರುವ ಮಾತುಕತೆಗಳನ್ನಾದರೂ ಇಂದು ಮುಗಿಸಿಬಿಡಿ.
ಮಕರ : ಇವತ್ತು ನಿಮ್ಮ ಮಾತುಗಳನ್ನು ಎಲ್ಲರೂ ಕೇಳುತ್ತಾರೆ. ಆದರೆ ಸಂಜೆಯ ಹೊತ್ತಿಗೆ ಮನೆಯವರ ಮಾತನ್ನು ಮರೆತು ಬಿಟ್ಟೀರಾ ಜೋಕೆ.
ಕುಂಭ : ಸೃಜನ ಶೀಲ ಕೆಲಸಗಳಲ್ಲಿ ಜಯವಿದೆ. ರಿಲ್ಯಾಕ್ಸಿಂಗ್ ದಿನಗಳಿವು ಅಂತ ಸುಮ್ಮನಿದ್ದರೆ ಅವಕಾಶ ಹಾಳು ಮಾಡಿಕೊಂಡಂತೆ. ಮಕ್ಕಳ ಬಗೆಗಿನ ಕಾಳಜಿಯಿಂದಾಗಿ ಸುಸ್ತಾಗಬಾರದು.
ಮೀನ : ಮನೆಯಲ್ಲಿನ ಕಾರ್ಯಕ್ರಮಗಳು, ಕಚೇರಿಯಲ್ಲಿನ ಸ್ನೇಹಿತರ ಬಗೆಗಿನ ಜವಾಬ್ದಾರಿಗಳು ನಿಮ್ಮನ್ನು ಹಣ್ಣು ಮಾಡುತ್ತವೆ. ಸಜ್ಜನರ ಭೇಟಿಯಿಂದ ಶುಭವಾಗಲಿದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications