Get Updates
Get notified of breaking news, exclusive insights, and must-see stories!

ಸತ್ಯಾಸತ್ಯತೆ ಜನತಾ ನ್ಯಾಯಾಲಯದಲ್ಲಿ ತೀರ್ಮಾನವಾಗಲಿ - ವಾಜಪೇಯಿ

ಬೆಂಗಳೂರು : ತೆಹಲ್ಕಾ ಬಹಿರಂಪಡಿಸಿದ ರಕ್ಷಣಾ ಹಗರಣದ ಹಿನ್ನೆಲೆಯಲ್ಲಿ ಎನ್‌ಡಿಎ ಸರಕಾರ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ . ಸರ್ಕಾರದ ರಾಜೀನಾಮೆಯಿಂದಾಗಿ ದೇಶದಲ್ಲಿ ಅರಾಜಕತೆ ತಲೆದೋರುತ್ತದೆ ಎಂದು ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಹೇಳಿದ್ದಾರೆ.

ನಗರದಲ್ಲಿ ತೆಹಲ್ಕಾ ಆರೋಪದ ಸತ್ಯಾಸತ್ಯತೆಗಳನ್ನು ಜನರಿಗೆ ತಿಳಿಸಲು ಎನ್‌ಡಿಎ ಹಮ್ಮಿಕೊಂಡಿದ್ದ ಬೃಹತ್‌ ಸಾರ್ವಜನಿಕ ರ್ಯಾಲಿಯನ್ನು ಗುರುವಾರ ನಗರದ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಉದ್ದೇಶಿಸಿ ವಾಜಪೇಯಿ ಮಾತನಾಡುತ್ತಿದ್ದರು. ತೆಹಲ್ಕಾ ಹಗರಣವನ್ನು ಸರಕಾರ ಸವಾಲಾಗಿ ಸ್ವೀಕರಿಸುತ್ತದೆ. ಹಗರಣದ ಹಿಂದಿನ ಸತ್ಯಗಳನ್ನು ಜನತಾ ನ್ಯಾಯಲಯವೇ ನಿರ್ಧ ರಿಸುತ್ತದೆ. ಅದಕ್ಕೆ ಮುಂಬರುವ ಚುನಾವಣೆಗಳು ಒಂದು ವೇದಿಕೆಯಾಗಲಿವೆ ಎಂದು ಪ್ರಧಾನಿ ಹೇಳಿದರು.

ಇಂತಹ ಹಗರಣಗಳು ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿದ್ದಾಗ ಸಾಕಷ್ಟು ಬಾರಿ ನಡೆದಿವೆ. ಆದರೆ ಯಾವುದೇ ಕಾಂಗ್ರೆಸ್‌ ಪ್ರಧಾನಿ ರಾಜೀನಾಮೆ ನೀಡಿದ ಉದಾಹರಣೆ ಇಲ್ಲ ಎಂದ ಪ್ರಧಾನಿ, ವ್ಯವಸ್ಥೆಯಲ್ಲಿಯೇ ದೋಷವಿದೆ, ಬಿಜೆಪಿ ವಿರೋಧ ಪಕ್ಷದಲ್ಲಿದ್ದಾಗ ವ್ಯವಸ್ಥೆಯನ್ನು ಸರಿಪಡಿಸಲು ಮಾಡಿದ ಆಗ್ರಹಗಳಿಗೆ ಕಾಂಗ್ರೆಸ್‌ನಿಂದ ಸರಿಯಾದ ಬೆಂಬಲ ದೊರೆಯಲಿಲ್ಲ ಎಂದರು.

ಯಾವುದೇ ಹಗರಣಗಳು ನಡೆದಾಗ ಆ ಕುರಿತು ಸರಿಯಾದ ವಿಚಾರಣೆ ನಡೆಯಬೇಕು ಅಥವಾ ಸಂಸತ್ತಿನಲ್ಲಿ ಚರ್ಚೆ ನಡೆಯಬೇಕು. ಎರಡಕ್ಕೂ ಸರಕಾರ ಸಿದ್ಧವಿದ್ದರೂ ವಿರೋಧ ಪಕ್ಷವಾದ ಕಾಂಗ್ರೆಸ್‌ ವಿಚಾರಣೆಗಾಗಲಿ, ಚರ್ಚೆಗಾಗಲಿ ಸಿದ್ಧವಿಲ್ಲ, ಕೇಂದ್ರ ಸರಕಾರ ರಾಜೀನಾಮೆ ನೀಡಬೇಕು ಎಂದೇ ಹೇಳುತ್ತಿದೆ. ರಾಜೀನಾಮೆ ನೀಡಲು ನಾನು ಮಾಡಿದ ತಪ್ಪೇನು ಎಂದ ಪ್ರಧಾನಿ 40 ವರ್ಷಗಳ ತಪಸ್ಸಿನ ಬಳಿಕ ಅಧಿಕಾರಕ್ಕೆ ಬಂದಿರುವೆ ಎಂದು ವಿರೋಧ ಪಕ್ಷಗಳ ನಡವಳಿಕೆಯನ್ನು ಟೀಕಿಸಿದರು.

ಹೆಂಡ ಕುಡಿಸಿ ಮಾತನಾಡಿದರು : ತೆಹಲ್ಕಾದವರು ಹೆಂಡ ಕುಡಿಸಿ ತಮಗೆ ಬೇಕಾದಂತೆ ಮಾತನಾಡಿಸಿದ್ದಾರೆ. ಈಗ ಅದನ್ನು ಹಗರಣ ಎಂದು ಬೊಬ್ಬೆ ಇಡುತ್ತಿದ್ದಾರೆ. ಮಾಜಿ ರಕ್ಷಣಾ ಸಚಿವ ಜಾರ್ಜ್‌ ಫರ್ನಾಂಡಿಸ್‌ ಭಾಷಣ ಮಾಡುವಾಗ ಸಾಕಷ್ಟು ಉದ್ವಿಗ್ನರಾಗಿದ್ದರು.

ಜನ ಸಾಮಾನ್ಯರೂ ನನ್ನ ಕಚೇರಿಗೆ ಬಂದು ಆರಾಮವಾಗಿ ತಮ್ಮ ಕಷ್ಟ ಸುಖ ಹೇಳಿಕೊಳ್ಳುತ್ತಿದ್ದರು. ಬಹುಶಃ ಇದೇ ನಾನು ಮಾಡಿರುವ ತಪ್ಪಿರಬೇಕು ಎಂದು ಜಾರ್ಜ್‌ ಹೇಳಿದರು. ಶಸ್ತ್ರಾಸ್ತ್ರಗಳನ್ನು ವಿದೇಶದಿಂದ ಕೊಳ್ಳುವ ಬದಲು ಸ್ವದೇಶಿಯಾಗಿಯೇ ನಿರ್ಮಿಸಲು ಪ್ರಯತ್ನಿಸಿದೆ. ಇದು ಕೂಡ ನನ್ನ ತಪ್ಪು ಎಂದು ಅವರು ತಣ್ಣನೆಯ ದನಿಯಲ್ಲಿ ಹೇಳಿದರು. ಮುಕ್ಕಾಲು ಗಂಟೆಗಳ ಭಾಷಣದಲ್ಲಿ - ತೆಹಲ್ಕಾ ಆರೋಪಗಳನ್ನು ನಿರಾಕರಿಸಲು ಹಾಗೂ ತಮ್ಮ ಪ್ರಾಮಾಣಿಕತೆಯನ್ನು ಬಿಂಬಿಸಲು ಅವರು ಪ್ರಯತ್ನಿಸಿದರು.

ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು , ಆಹಾರ ಖಾತೆ ಸಚಿವ ಶ್ರೀನಿವಾಸ ಪ್ರಸಾದ್‌, ಪ್ರವಾಸೋದ್ಯಮ ಸಚಿವ ಅನಂತಕುಮಾರ್‌, ಬಿಜೆಪಿ ನಾಯಕರಾದ ಗೋಪಿನಾಥ ಮುಂಡೆ, ಬಸವರಾಜ ಪಾಟೀಲ ಸೇಡಂ ಮುಂತಾದವರು ರ್ಯಾಲಿಯಲ್ಲಿ ಭಾಗವಹಿಸಿದ್ದರು.

(ಇನ್ಫೋ ವಾರ್ತೆ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+