Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ : ನಿಮಗಿವತ್ತು ಪ್ರಶಸ್ತಿ ಪತ್ರಗಳ, ಸನ್ಮಾನ ಸುದ್ದಿ ಎದುರಾಗುತ್ತದೆ. ಹಾಗಂತ ತುಂಬಾ ಜಂಬ ಮಾಡಿಕೊಳ್ಳಬೇಡಿ. ಈ ಖುಷಿಗೆ ಸಂಜೆ ಒಂದು ಸಣ್ಣ ಪಾರ್ಟಿಗಾಗಿ ಕಿಸೆ ಹಗುರಾಗುತ್ತದೆ.

ವೃಷಭ : ನಿಮ್ಮೊಡನೆ ವ್ಯವಹರಿಸುವುದು ಕಷ್ಟ ಅಂತ ನಿಮ್ಮ ಸ್ನೇಹಿತರೆಲ್ಲರೂ ನಿರ್ಧರಿಸುವ ಮುಂಚೆ ನೀವು ಸ್ವಲ್ಪ ಬದಲಾಗಬೇಕು. ಆ ದಿಕ್ಕಿನಲ್ಲಿ ಇನ್ನೂ ಯೋಚನೆ ಮಾಡಿಲ್ಲ ಅಲ್ಲವಾ ?

ಮಿಥುನ : ನಿಮ್ಮ ನಿರ್ಧಾರಗಳು ತುಂಬಾ ಡೈಲ್ಯೂಟ್‌ ಅಂತ ನೀವೇ ಸಂಶಯಪಟ್ಟುಕೊಳ್ಳುವ ಅಗತ್ಯ ಇಲ್ಲ. ಇವತ್ತು ಬ್ಯಾಂಕ್‌ ವ್ಯವಹಾರಗಳಲ್ಲಿ ಗೆಲವು ಅಂದಮೇಲೆ ಧನಲಾಭ ಅಂತ ಬೇರೆ ಹೇಳಬೇಕಿಲ್ಲ.

ಕಟಕ : ನಿಮ್ಮ ಆಫೀಸು ಕೆಲಸಗಳು ಟೇಬಲ್‌ ಮೇಲೆ ರಾಶಿ ಬೀಳುತ್ತಿರುವುದನ್ನು ನೋಡಿ ಗಾಬರಿಯಾಗಬೇಡಿ. ಸದ್ಯದಲ್ಲಿಯೇ ನಿಮಗೆ ಅಸಿಸ್ಟೆಂಟ್‌ ಒಬ್ಬರು ದೊರಕುತ್ತಾರೆ.

ಸಿಂಹ : ಇವತ್ತು ಶಾಪಿಂಗ್‌ಗೆ ಉತ್ತಮ ದಿನ. ಚೌಕಾಸಿ ಮಾಡುವುದರಲ್ಲಿ ನೀವು ಎತ್ತಿದ ಕೈಯಾಗಿದ್ದರೆ ಲಾಭ ಕಾದಿಟ್ಟದ್ದು. ಆದ್ದರಿಂದ ಆಲ್‌ ದ ಬೆಸ್ಟ್‌.

ಕನ್ಯಾ : ವಿದ್ಯಾ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಇವತ್ತು ಸುದಿನ. ನೀವು ಬಹುದಿನಗಳಿಂದ ಕಾಪಿಟ್ಟುಕೊಂಡು ಬಂದಿರುವ ಜ್ಞಾನ ಭಂಡಾರ ಇವತ್ತು ಉಪಯೋಗಕ್ಕೆ ಬರುತ್ತದೆ.

ತುಲಾ : ಮನೆ ವ್ಯವಹಾರಗಳು ತಲೆ ತುಂಬಾ ತುಂಬಿದೆ ಅಂತ ಅನಿಸುವುದು ಸಹಜ. ಆದರೆ ಸ್ವಲ್ಪವೇ ತಲೆ ಖರ್ಚು ಮಾಡಿದರೂ ಎಲ್ಲ ಕೆಲಸಗಳೂ ಮುಗಿದು ಹೋಗುತ್ತವೆ.

ವೃಶ್ಚಿಕ : ಮಕ್ಕಳು ಮರಿಗಳ ತಂಟೆ ಸಹಿಸಿಕೊಂಡರೆ ಆರಾಮವಾಗಿರುತ್ತೀರಿ. ಆಫೀಸಿನಲ್ಲಿಯೂ ಉಪಟಳಗಳಿರುವುದರಿಂದ ತಲೆ ಕೆಡಿಸಿಕೊಳ್ಳದೇ ಕೆಲಸ ಮಾಡಿ.

ಧನಸ್ಸು :ಸದ್ಯಕ್ಕೆ ಅಂತ ಎತ್ತಿಟ್ಟಿರುವ ಹಣವೇನೂ ನಿಮ್ಮ ಬಳಿ ಇಲ್ಲದೇ ಇರುವುದರಿಂದ ಸಾಲ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಬರಬಹುದು. ಹಣ ಪಡೆವ ಮುನ್ನ ಎರಡೆರಡು ಸಾರಿ ಯೋಚಿಸಿ.

ಮಕರ : ಒಂದಷ್ಟು ಕೆಲಸಗಳನ್ನು ಈ ಸಮಯದಲ್ಲಿಯೇ ಮಾಡಬೇಕು ಅಂತ ಯೋಚಿಸಿದ್ದು ನೆನಪಿದೆಯಾ ? ಅವುಗಳನ್ನೆಲ್ಲಾ ಮರೆತ ಹಾಗಿದೆ.

ಕುಂಭ : ಸ್ಪೋರ್ಟ್ಸ್‌ ಮೀಟ್‌ನಲ್ಲಿ ಭಾಗವಹಿಸಲು ಹಿಂದೆ ಮುಂದೆ ನೋಡುವುದು ಬೇಡ. ಇವತ್ತು ಲಕ್‌ ನಿಮ್ಮ ಪಾಲಿಗಿದೆ.

ಮೀನ : ಅಳಿದು ಹೋದ ರಾಜ್ಯಕ್ಕೆ ಉಳಿದವನೇ ಗೌಡ ಅನ್ನುವ ಗಾದೆ ನಿಮಗೀಗ ನೆನಪಿಗೆ ಬರಬೇಕು. ಪರಿಸ್ಥಿತಿಯ ದುರುಪಯೋಗ ಪಡೆಯಬಾರದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+