ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೆಂದ ನೆಲದೆದೆಯಲ್ಲಿ ಮೂಡದ ಹೆಜ್ಜೆ ಪಸೆ
ಏಪ್ರಿಲ್ ಬಂತು. ಭೂಮಿಯಲ್ಲಿರುವ ಪಸೆಯನ್ನೆಲ್ಲಾ ಹಿಂಗಿಸುವ, ಮತ್ತೆರಡು ಹೆಜ್ಜೆ ನಡೆದರೂ ಉಸ್ಸೆನಿಸುವ ಬಿಸಿಲ ಕಾಲ. ನೀರು ಹುಡುಕುತ್ತಾ ಮೈಲುಗಟ್ಟಲೆ ನಡೆವ ಹೆಂಗಸರ ಸಾಲುಗಳು, ಮುಖದ ಮೇಲಿನ ಬೆವರು ಸಾಲೆಗಳಿಂದ ಮುಕ್ತಿ ಪಡೆಯಲು ಸೋಪಿನಿಂದ ಸೋಪಿಗೆ ಜೋತು ಬೀಳುತ್ತಾ, ಎಸಿಗೆ ಮೊರೆಹೋಗುವ ಸುಡುಬಿಸಿಲು ಹೊಸಿಲು ದಾಟಿ ಒಳಬಂದು ಬಿಟ್ಟಿದೆ.
ಪೆನ್ಶನರ್ಸ್ ಪಾರಡೈಸ್ ಬೆಂಗಳೂರು, ಮಂಗಳೂರಿನದೇ ಉಷ್ಣಾಂಶವನ್ನು ದಾಖಲಿಸಿಕೊಂಡು ಬಿಸಿಯಾಗಿದೆ. ನಿನ್ನೆಯಷ್ಟೇ ಬೆಳಗಿನ ಮಳೆ ಹನಿಗಳ ನಂತರ ಮೋಡ ತುಂಬಿದ ಆಕಾಶದಡಿಯಲ್ಲಿ ತಣ್ಣಗಿದ್ದ ಬೆಂಗಳೂರು ಇವತ್ತು ಹಾಗಿಲ್ಲ. ಮತ್ತೆ ಶನಿವಾರ ರಾತ್ರಿ ಕೂಡ ಆಕಾಶ ಸ್ವಚ್ಛ ಇರುವುದಿಲ್ಲವಂತೆ.
Comments
Story first published: Monday, April 2, 2001, 5:30 [IST]