Get Updates
Get notified of breaking news, exclusive insights, and must-see stories!

ವಸಂತ ನವರಾತ್ರಿ

ನವರಾತ್ರಿ ಕನ್ನಡಿಗರಿಗೆ ಸುಪರಿಚಿತ. ನವರಾತ್ರಿ ಎಂದೊಡನೆ ನಮ್ಮ ನಾಡ ಹಬ್ಬ ದಸರೆಯ ನೆನಪಾಗುತ್ತದೆ. ವಿಶ್ವ ವಿಖ್ಯಾತ ಜಂಬೂಸವಾರಿ ಕಣ್ಣೆದುರು ನಿಲ್ಲುತ್ತದೆ. ಭಾರತದಲ್ಲಿ ಎರಡು ನವರಾತ್ರಿಗಳಿವೆ ಎಂಬುದು ಬಹಳ ಜನರಿಗೆ ತಿಳಿದಿಲ್ಲ.

ಶರನ್ನವರಾತ್ರಿ (ಶರದ್‌) ದುರ್ಗೆ ಹಾಗೂ ಶ್ರೀರಾಮನ ಪೂಜಿಸುವ ಹಬ್ಬ. ಆಯುಧಪೂಜೆ, ದುರ್ಗಾಪೂಜೆ, ವಾಹನಪೂಜೆ, ಬೊಂಬೆ ಹಬ್ಬ, ಮಹಾನವಮಿ, ಸರಸ್ವತಿ ಪೂಜೆ, ವಿಜಯದಶಮಿ ಶರನ್ನವರಾತ್ರಿಯ ವಿಶೇಷಗಳು. ಆದರೆ, ಶರದ್‌ ಕಾಲಕ್ಕೂ ಮೊದಲೆ, ಅಂದರೆ ಸಂವತ್ಸರದ ಆದಿಯಲ್ಲೇ ಆಚರಿಸುವುದು ವಸಂತ ನವರಾತ್ರಿ.

ವಸಂತ ನವರಾತ್ರಿಯ ಉತ್ತರ ಭಾರತದಲ್ಲಿ ಬಹು ಪ್ರಖ್ಯಾತ. ಕರ್ನಾಟಕ, ತಮಿಳುನಾಡು, ಆಂಧ್ರ ಸೇರಿದಂತೆ ದಕ್ಷಿಣ ಭಾರತದಲ್ಲೂ ವಸಂತನವರಾತ್ರಿ ಆಚರಣೆ ಇದೆ. ವಸಂತ ನವರಾತ್ರಿ ತ್ರೇತಾಯುಗದ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನಿಗೇ ಮೀಸಲಾದ ಉತ್ಸವ. ಹೊಸ ಸಂವತ್ಸರದ ಆದಿಯಿಂದಲೇ 9 ದಿನ ಆಂಜನೇಯನ ಗುಡಿಯಲ್ಲಿ, ಶ್ರೀರಾಮನ ದೇವಾಲಯಗಳಲ್ಲಿ ಹಾಗೂ ಶ್ರೀರಾಮ ಸೇವಾ ಸಮಿತಿಗಳು ವಸಂತ ನವರಾತ್ರಿ ಆಚರಿಸುತ್ತಾರೆ.

ಚಾಂದ್ರಮಾನ ಯುಗಾದಿಯ ದಿನದಿಂದಲೇ ಆರಂಭವಾಗುವ ವಸಂತ ನವರಾತ್ರಿಗೆ ಗರ್ಭ ನವರಾತ್ರಿ ಎಂಬ ಹೆಸರೂ ಇದೆ. 9ನೇ ದಿನ ಅಂದರೆ ಶ್ರೀರಾಮ ನವಮಿಯಂದು ಈ ನವರಾತ್ರಿ ಉತ್ಸವ ಅಂತ್ಯಗೊಳ್ಳುತ್ತದೆ. ಪಾನಕ, ಕೋಸಂಬರಿಯ ವಿತರಣೆ ನಡೆಯುತ್ತದೆ. ರಾಮ ಭಜನೆ, ರಾಮಕಥೆಯ ಪಾರಾಯಣ ನಡೆಯುತ್ತದೆ. ಗರಡಿಯ ಮನೆಗಳಲ್ಲಿ ಹಾಗೂ ಉತ್ತರ ಭಾರತದಲ್ಲಿ ರಾಮ ರಸವನ್ನು ಕುಡಿಯುವ ಸಂಪ್ರದಾಯವೂ ಇದೆ. ಬ್ರಹ್ಮಚಾರಿಗಳು ಹಾಗೂ ಆಂಜನೇಯನ ಭಕ್ತರು ಬೀದಿ ಬೀದಿಗಳಲ್ಲಿ ಪೆಂಡಾಲ್‌ ಹಾಕಿ, ಶ್ರೀರಾಮನ ಪ್ರತಿಷ್ಠಾಪಿಸಿ, ಪೂಜಿಸಿ, ಬಿಸಿಲಲ್ಲಿ ಬಸವಳಿದವರಿಗೆ ಪಾನಕ, ಕೋಸಂಬರಿ, ನೀರು ಮಜ್ಜಿಗೆ ಹಂಚುತ್ತಾರೆ.

ಚೈತ್ರ ಶುದ್ಧ ನವಮಿ ಶ್ರೀಮನ್ನಾರಾಯಣನು ರಾಮಾವತಾರದಲ್ಲಿ ಜನಿಸಿದ ದಿನ. ಹೀಗಾಗೇ ಹಿಂದೂಗಳು, ರಾಮನವಮಿಯನ್ನು ಹಬ್ಬವಾಗಿ ಆಚರಿಸುತ್ತಾರೆ. ಮನೆಗಳಲ್ಲಿ ಶ್ರೀರಾಮದೇವರನ್ನು ಪೂಜಿಸಿ, ಸಜ್ಜಿಗೆಯ ನೇವೇದ್ಯ ಮಾಡಿ, ಮುತ್ತೆೈದೆಯರನ್ನು ಕರೆದು ಪಾನಕ, ಕೋಸಂಬರಿ ನೀಡುತ್ತಾರೆ. ಶ್ರೀರಾಮ ರಥೋತ್ಸವಗಳೂ ಜರುಗುತ್ತವೆ.

ಸೌರಮಾನ ಆಚರಣೆಯಲ್ಲಿ ಮೇಷ ಶುಕ್ಲ ನವಮಿಯಂದು ರಾಮನವಮಿ ಆಚರಣೆ. ಆದರೆ, ಚಾಂದ್ರಮಾನದ ಚೈತ್ರ ಶುದ್ಧ ನವಮಿಯ ಶ್ರೀರಾಮ ನವಮಿ ಪ್ರಸಿದ್ಧ. ಚೈತ್ರ ಶುದ್ಧ ಪಾಡ್ಯದಿಂದ ಆರಂಭಿಸಿ 9 ದಿನ ಆಥವಾ ಚೈತ್ರ ಶುದ್ಧ ನವಮಿಯಿಂದ ಆರಂಭಿಸಿ 9 ದಿನ ವಂಸತ ನವರಾತ್ರಿ ಆಚರಿಸುವ ಪದ್ಧತಿಯೂ ಇದೆ. ಇದನ್ನು ಜನ್ಮ ನವರಾತ್ರಿ ಎಂದೂ ಕರೆಯುತ್ತಾರೆ.

ರಾಮೋತ್ಸವ ಅಥವಾ ವಸಂತ ನವರಾತ್ರಿ ಆರಂಭಿಸುವ ಮೊದಲ ದಿನದಿಂದ ವಾಲ್ಮೀಕಿ ವಿರಚಿತ ರಾಮಾಯಣ ಪಾರಾಯಣ ಆರಂಭಿಸಿ 9ನೇ ದಿನ ಪೂರ್ಣಗೊಳಿಸುತ್ತಾರೆ. ಕೊನೆಯ ದಿನ ಅಂದರೆ ನವಮಿಯಂದು ಶ್ರೀರಾಮ ಪಟ್ಟಾಭಿಷೇಕ ಮಹೋತ್ಸವವನ್ನೂ ಆಚರಿಸುತ್ತಾರೆ. ಕಾಲ ದೇಶ ಸಂಪ್ರದಾಯಕ್ಕನುಗುಣವಾಗಿ ಶ್ರೀರಾಮ ನವಮಿಯ ಆಚರಣೆ ಬದಲಾಗುತ್ತದೆ.

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+