Get Updates
Get notified of breaking news, exclusive insights, and must-see stories!

ಶ್ರೀರಾಮ ನವಮಿ

(ನಮ್ಮ ವರದಿಗಾರರಿಂದ)

ಈಶ್ವರ ಅಲ್ಲಾ ತೇರೇನಾಮ್‌
ಸಬಕೋ ಸನ್ಮತಿ ದೇ ಭಗವಾನ್‌

ಬೆಂಗಳೂರು : ಚೈತ್ರಶುದ್ಧ ನವಮಿ ಏಪ್ರಿಲ್‌ 2ರ ಈ ಹೊತ್ತು ಕರ್ನಾಟಕದಲ್ಲಿ ಶ್ರೀರಾಮನವಮಿಯ ಸಂಭ್ರಮ. ಏರುತ್ತಿರುವ ಬಿಸಿಲ ಬೇಗೆಗೆ ಶ್ರೀರಾಮ ನವಮಿಯ ನೀರು ಮಜ್ಜಿಗೆ ಹಾಗೂ ಬೇಲದ ಹಣ್ಣಿನ ಪಾನಕ ತಂಪನ್ನೆರೆಯುತ್ತಿದೆ. ಬಾಯಾರಿದವರ ನೀರಿನ ದಾಹವನ್ನು ತೀರಿಸುತ್ತಿದೆ. ಬೆಂಗಳೂರೂ ಸೇರಿದಂತೆ ರಾಜ್ಯದೆಲ್ಲೆಡೆ ತ್ರೇತಾಯುಗಪುರುಷನ ಜನ್ಮದಿನ ಆಚರಣೆ ಅತ್ಯಂತ ಶ್ರದ್ಧಾಭಕ್ತಿ ಹಾಗೂ ವೈಭವದಿಂದ ಜರುಗುತ್ತಿದೆ.

ಶ್ರೀರಾಮ ಮಂದಿರ, ಊರಮುಂದಿನ ಆಂಜನೇಯನ ಗುಡಿಗಳಲ್ಲಿ ಶ್ರೀರಾಮ ನವಮಿಯ ಸಡಗರ ತುಂಬಿ ತುಳುಕುತ್ತಿದೆ. ಆಳೆತ್ತರದ ಶ್ರೀರಾಮನ ಫೋಟೋಗಳಿಗೆ ಪುಷ್ಪಗಳಿಂದ ಅಲಂಕರಿಸಿ ರಥೋತ್ಸವಗಳನ್ನೂ ನಡೆಸಲಾಗುತ್ತಿದೆ. ಬೆಂಗಳೂರಿನ ಶ್ರೀರಾಮಪುರ, ಬಸವನಗುಡಿ, ಮಲ್ಲೇಶ್ವರ, ರಾಜಾಜಿನಗರ, ಹನುಮಂತ ನಗರವೇ ಮೊದಲಾದ ಎಲ್ಲ ಬಡಾವಣೆಗಳಲ್ಲೂ ಶ್ರೀರಾಮ ಸೇವಾ ಸಮಿತಿಯ ಸೇವಾಕರ್ತರು ರಸ್ತೆಯಂಚಿನಲ್ಲಿ ಪೆಂಡಾಲ್‌ ಹಾಕಿ, ಶ್ರೀರಾಮನ ಪೂಜಿಸಿ, ಪುರಜನರಿಗೆ ಪಾನಕ, ಕೋಸಂಬರಿ ಹಂಚುತ್ತಿದ್ದಾರೆ.

ಹನುಮಂತನಗರ ನರಹರಿರಾಯನ ಗುಡ್ಡ, ಆನಂದ ಮಿಲನಾದ್ರಿ ದೇವಾಲಯದಲ್ಲಿ, ಮಹಾಲಕ್ಷ್ಮೀ ಲೇಔಟ್‌ ಹನುಮಂತನ ಗುಡಿಯಲ್ಲಿ, ಜಯನಗರ 9ನೇ ಬ್ಲಾಕ್‌ ರಾಗಿ ಗುಡ್ಡದ ಆಂಜನೇಯನ ಗುಡಿಯಲ್ಲಿ ಹಾಗೂ ಎಲ್ಲ ಕೋದಂಡರಾಮಸ್ವಾಮಿ ದೇವಾಲಯಗಳಲ್ಲೂ ವಿಶೇಷ ಪೂಜೆಗಳು ನಡೆದವು. ಸಾವಿರಾರು ಭಕ್ತರು ಸರತಿಯ ಸಾಲಿನಲ್ಲಿ ನಿಂತು ರಾಮನ ದರ್ಶನ ಮಾಡಿದರು.

ರಾಜ್ಯದ ಗರಡಿಯ ಮನೆಗಳಲ್ಲಿ ಶ್ರೀರಾಮನ ಪೂಜೆ, ರಾಮರಸ ಪ್ರಸಾದ ವಿತರಣೆಯೂ ನಡೆಯಿತು. ರಾಮೋತ್ಸವದ ನಿಮಿತ್ತ ಸಂಗೀತೋತ್ಸವ, ಭಜನೆ, ನಾಟಕ, ನೃತ್ಯ ರೂಪಕಗಳೂ ನಡೆಯುತ್ತಿವೆ. ವಸಂತ ನವರಾತ್ರಿಯ ಸಂದಂರ್ಭದಲ್ಲಿ ವಸಂತ ಸಾಹಿತ್ಯೋತ್ಸವ ಕಾರ್ಯಕ್ರಮಗಳೂ ಜರುಗುತ್ತಿವೆ. ಬೆಂಗಳೂರಿನಲ್ಲಿ ಸೋಮವಾರ ಸಂಜೆ ನಡೆಯುವ ರಾಮೋತ್ಸವ ಕಾರ್ಯಕ್ರಮದ ಪಟ್ಟಿ ಇಲ್ಲದೆ:

ಮಾರುತಿ ಭಕ್ತ ಮಂಡಳಿ, ವಿಜಯನಗರ : ವಿದ್ಯಾಭೂಷಣ ಅವರಿಂದ ಹಾಡುಗಾರಿಕೆ, ಸಂಜೆ 6-30ಕ್ಕೆ

ಶ್ರೀರಾಮಮಂದಿರ, ಎನ್‌.ಆರ್‌. ಕಾಲೋನಿ : ಶ್ರೀವಿದ್ಯಾ ವಾಚಸ್ಪತಿ ತೀರ್ಥ ಸ್ವಾಮೀಜಿಗಳಿಂದ ರಾಮೋತ್ಸವ ಕಾರ್ಯಕ್ರಮ ಉದ್ಘಾಟನೆ, ಸಂಜೆ. 6-30ಕ್ಕೆ

ಶ್ರೀ ಜಯರಾಮ ಸೇವಾ ಮಂಡಳಿ, 8ನೇ ಬ್ಲಾಕ್‌ ಜಯನಗರ : ಹಂಸಿನಿ ನಾಗೇಂದ್ರ ಅವರಿಂದ ಹಾಡುಗಾರಿಕೆ, ಸಂಜೆ 6-30ಕ್ಕೆ.

ಶ್ರೀ ವಾಣಿ ವಿದ್ಯಾ ಕೇಂದ್ರ, ಬಸವೇಶ್ವರ ನಗರ : ಗುಡಿಬಂಡೆ ಸೋದರರಿಂದ ಹಾಡುಗಾರಿಕೆ, ಸಂಜೆ 6-30ಕ್ಕೆ.

ಶ್ರೀಕಾಂತ ಸಂಗೀತ ಸಭಾ, ಮಲ್ಲೇಶ್ವರ 8ನೇ ಕ್ರಾಸ್‌ : ಡಾ. ಎನ್‌.ಆರ್‌. ಶ್ರೀಲತಾ ಅವರಿಂದ ಹಾಡುಗಾರಿಕೆ, ಸಂಜೆ 6-30ಕ್ಕೆ.

ಸಮಾಜ ಸೇವಾ ಸಂಘ, ಜಯನಗರ ಎರಡನೇ ಬ್ಲಾಕ್‌ : ಕುಮಾರಿ ಭಾರ್ಗವಿ ಅವರಿಂದ ನೃತ್ಯ,

ಶ್ರೀರಾಮ ಮಂದಿರ ಸಂಘ, ಬಸವನಗುಡಿ : ಪ್ರಭಾತ್‌ ಕಲಾವಿದರಿಂದ ನೃತ ರೂಪಕ, ಸಂಜೆ -6-30ಕ್ಕೆ.

ಶ್ರೀರಾಮ ಮಂಡಳಿ, 9ನೇ ಬ್ಲಾಕ್‌ ಜಯನಗರ : ಜಗನ್ನಾಥರಾವ್‌ ಅವರಿಂದ ದೇವರನಾಮ, ಸಂಜೆ 6-30ಕ್ಕೆ.

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+