ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಓಐಸಿಎಲ್‌ಗೆ 25 : ಸಾಧಿಸಬೇಕಾದುದು ಇನ್ನೂ ಬಹಳಷ್ಟು

By Staff
|
Google Oneindia Kannada News

ಮಂಗಳೂರು : ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಕುದುರೆಮುಖ ಕಬ್ಬಿಣ ಅದಿರು ಕಂಪೆನಿ ರಜತ ಮಹೋತ್ಸವ ಆಚರಣೆಯ ಸಂಭ್ರಮದಲ್ಲಿದ್ದು , ಈ ಹಿನ್ನೆಲೆಯಲ್ಲಿ ಕುದುರೆಮುಖದ ಆಳ ಪ್ರದೇಶದಲ್ಲಿರುವ ಕಬ್ಬಿಣ ಅದಿರನ್ನು ಹೊರತೆಗೆದು ಸಂಸ್ಕರಿಸಲಿದೆ ಎಂದು ಕೆಒಐಸಿಎಲ್‌ನ ಪ್ರಕಟಣೆ ಹೇಳಿದೆ.

1976ರಲ್ಲಿ ಸ್ಥಾಪನೆಯಾದ ಕಂಪೆನಿ ಚಿಕ್ಕಮಗಳೂರಿನ ಕುದುರೆಮುಖ ಮತ್ತು ನವ ಮಂಗಳೂರಿನಲ್ಲಿ ತನ್ನ ಸ್ಥಾವರಗಳನ್ನು ಹೊಂದಿದೆ. ಈ ವರ್ಷದ ಕಾರ್ಯಸೂಚಿಯಲ್ಲಿ , ಕಾರವಾರದಲ್ಲಿ ಸ್ಥಾಪಿಸಲಿರುವ ಕಲ್ಲಿದ್ದಲ ಸ್ಥಾವರ ಮತ್ತು ಆಂಧ್ರ ಪ್ರದೇಶದ ಒಂಗೋಲ್‌ನಲ್ಲಿರುವ ಕಬ್ಬಿಣ ಅದಿರು ಕಾರ್ಖಾನೆಯ ಅಭಿವೃದ್ಧಿ ಸೇರಿದೆ.

ಪೈಪ್‌ಲೈನ್‌ ಮೂಲಕ ಕಚ್ಚಾ ಅದಿರನ್ನು 93 ಕಿಲೋ ಮೀಟರ್‌ ದೂರ ಸಾಗಿಸಿ ಕಬ್ಬಿಣ ತಯಾರಿಸುವ ದೇಶದ ಪ್ರಥಮ ಕಂಪೆನಿ ಎಂಬ ಹೆಗ್ಗಳಿಕೆ ಕುದುರೆಮುಖ ಕಂಪೆನಿಯದು. ಪ್ರಸ್ತುತ, ಕಂಪೆನಿಯು 6.8 ಮಿಲಿಯನ್‌ ಟನ್‌ ಕಬ್ಬಿಣ ಅದಿರು ಉತ್ಪಾದಿಸುತ್ತಿದೆ. ಚೀನಾ, ಜಪಾನ್‌, ತೈವಾನ್‌, ಟರ್ಕಿ, ಜಪಾನ್‌ ಹಾಗೂ ಇರಾನ್‌ ಮಾರುಕಟ್ಟೆಗಳಲ್ಲದೆ, ದೇಶೀ ಮಾರುಕಟ್ಟೆಯ ಕಡೆಗೂ ಕಂಪೆನಿ ಗಮನ ಹರಿಸಲಿದೆ. ಈ ಸಾಲಿನಲ್ಲಿ ಸುಮಾರು 570 ಕೋಟಿ ರೂಪಾಯಿಗಳ ಆಯವ್ಯಯ ಪಟ್ಟಿ ಕಂಪೆನಿಯ ಮುಂದಿದೆ ಎಂದು ಕಂಪೆನಿಯ ಪ್ರಕಟಣೆ ತಿಳಿಸಿದೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X