ಮುಗಿಲುದ್ದ ನಿಂತ ವಾಮನ ! ಸಚಿನ್ - 10000, ನಾಟೌಟ್
ಇಂದೋರ್ : ಎಂದಿನ ಹಸನ್ಮುಖತೆಯಿಂದ ಬಲಗೈಲಿ ಬ್ಯಾಟು ಬೀಸುತ್ತ ಮೈದಾನಕ್ಕಿಳಿದಾಗ, ಸಚಿನ್ 10 ಸಾವಿರ ರನ್ನುಗಳ ಗಡಿ ಮುಟ್ಟುವ ಬಗ್ಗೆ ಯಾರಿಗೂ ಅಪನಂಬಿಕೆ ಇರಲಿಲ್ಲ . ಅತ್ಯುತ್ತಮ ಫಾರ್ಮ್, ಅಪಾರ ಆತ್ಮ ವಿಶ್ವಾಸ ಬೆನ್ನಿಗಿತ್ತು . ಜೊತೆಗೆ, ಅಭಿಮಾನಿಗಳ ಹರ್ಷೋದ್ಘಾರ.
ಶನಿವಾರ, ತೆಂಡೂಲ್ಕರ್ಗೆ ಬೇಕಿದ್ದುದು ಕೇವಲ 34 ರನ್ಗಳು ಮಾತ್ರ. ಟಾಸ್ ಗೆದ್ದ ಸ್ಟೀವ್ ಚೆಂಡನ್ನೇ ಮುಟ್ಟಿದಾಗ, ತೆಂಡೂಲ್ಕರ್ಗೆ ಹೆಚ್ಚು ಸಂತೋಷವಾಗಿರಬೇಕು. ಅದಕ್ಕಿಂಥಾ ಹೆಚ್ಚು ಖುಷಿಯಾದದ್ದು ಪ್ರೇಕ್ಷಕರಿಗೆ. ಅದು ತೆಂಡೂಲ್ಕರ್ ಕ್ರೀಸ್ಗೆ ಆಗಮಿಸಿದಾಗ ಮೊಳಗಿದ ಭಾರೀ ಚಪ್ಪಾಳೆಯಲ್ಲಿ ವ್ಯಕ್ತವಾಯಿತು.
ನಿರಾಳವಾಗಿ ಆಡಿದ ಸಚಿನ್ ಪಂದ್ಯದಲ್ಲಿ 34 ನೇ ರನ್ ದಾಖಲಿಸಿದಾಗ ಸೀಮಿತ ಓವರ್ಗಳಲ್ಲಿ 10 ಸಾವಿರ ರನ್ ಪೂರೈಸಿದ ವಿಶ್ವದ ಮೊದಲ ಆಟಗಾರ ಎನಿಸಿದರು. ಇಂದೋರ್ನ ಪಂದ್ಯ ಅವರಿಗೆ 266 ನೆಯದು. ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಅತ್ಯಧಿಕ ಶತಕಗಳನ್ನು ದಾಖಲಿಸಿದ ದಾಖಲೆಯೂ ಅವರದೇ. 27 ಶತಕ ಹಾಗೂ 51 ಅರ್ಧಶತಕ ಚಚ್ಚಿದ ದಾಖಲೆ ಅವರದು. ಟೆಸ್ಟ್ ಕ್ರಿಕೆಟ್ನಲ್ಲಿ ಗವಾಸ್ಕರ್ 10 ಸಾವಿರ ರನ್ಗಳನ್ನು ದಾಖಲಿಸಿದರೆ, ಸಚಿನ್ ಸೀಮಿತ ಓವರ್ಗಳ ಪಂದ್ಯದಲ್ಲಿ 10 ಸಹಸ್ರ ರನ್ ಗಡಿ ದಾಟಿದ್ದಾರೆ. ಯಶಸ್ಸಿನ ಓಟ ಮುಂದುವರಿಯಲಿ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications