Get Updates
Get notified of breaking news, exclusive insights, and must-see stories!

ಕತ್ತಲಲ್ಲಿ ಷೇರುಪೇಟೆ ! ಸಿಬಿಐ ವಶದಲ್ಲಿಕೇತನ್‌ ಪಾರೇಖ್‌

ಮುಂಬಯಿ : ಹರ್ಷದ್‌ ಮೆಹ್ತಾ ಅನ್ನುವ ಖದೀಮ 1992 ರಲ್ಲಿ ಷೇರುಪೇಟೆಯಲ್ಲಿ ಇತಿಹಾಸ ಕಂಡರಿಯದ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದ . ಅವನ ವಾರಸುದಾರರು ಇನ್ನೂ ಇದ್ದಾರೆ ಅನ್ನುವುದು ಎಂಟು ವರ್ಷಗಳ ನಂತರ ರುಜುವಾತಾಗಿದೆ. ಶುಕ್ರವಾರ ಬಯಲಿಗೆ ಬಂದ ಷೇರು ಹಗರಣ 843 ಕೋಟಿ ರುಪಾಯಿ ಮೊತ್ತದ್ದು. ಹಗರಣದ ಹಿಂದಿನ ಕೈ ದಲ್ಲಾಳಿ ಕೇತನ್‌ ಪಾರೇಖ್‌ ಎಂಬಾತನದ್ದು .

ಕೇತನ್‌ ಪಾರೇಖ್‌ನನ್ನು ಬಂಧಿಸಲಿರುವ ಸಿಬಿಐ, ಆತನ ಸಂಬಂಧಿಗಳು ಹಾಗೂ ದಲ್ಲಾಳಿಗಳಾದ ಕೀರ್ತಿಕುಮಾರ್‌ ಪಾರೇಖ್‌ ಹಾಗೂ ಕಾರ್ತೀಕ್‌ ಪಾರೇಖ್‌ ಅವರ ವಹಿವಾಟುಗಳತ್ತ ತೀವ್ರ ನಿಗಾ ಇಟ್ಟಿದೆ. ಮಾತ್ರವಲ್ಲದೆ ಪಾರೇಖ್‌ ಅವ್ಯವಹಾರಗಳಿಗೆ ಇಂಬುಕೊಟ್ಟಿರುವರೆಂದು ಶಂಕಿಸಲಾದ ಅಧಿಕಾರಿಗಳ ಮೇಲೂ ಹದ್ದಿನ ಕಣ್ಣಿಟ್ಟಿದೆ.

ಪಾರೇಖ್‌ ಜೊತೆ ವಾಣಿಜ್ಯಿಕ ನಂಟು ಹೊಂದಿದೆ ಎನ್ನಲಾದ ಪ್ಯಾಂಥರ್‌ ಇನ್‌ವೆಸ್ಟ್‌ಮೆಂಟ್‌ ಟ್ರೇಡರ್ಸ್‌, ಪ್ಯಾಂಥರ್‌ ಫೈನ್‌ಕಾಪ್‌ ಅಂಡ್‌ ಮ್ಯಾನೇಜ್‌ಮೆಂಟ್‌ ಸರ್ವೀಸ್‌, ಕ್ಲಾಸಿಕ್‌ ಪ್ರೆೃವೇಟ್‌ ಲಿಮಿಟೆಡ್‌, ಚಿತ್ರಕೂಟ ಕಂಪ್ಯೂಟರ್ಸ್‌ ಪ್ರೆೃವೇಟ್‌ ಲಿ ಹಾಗೂ ನಕ್ಷತ್ರ ಸಾಫ್ಟ್‌ವೇರ್‌ ಪ್ರೇವೇಟ್‌ ಲಿಮಿಟೆಡ್‌ಗಳ ಮೇಲೆ ದಾಳಿ ನಡೆಸಿರುವ ಸಿಬಿಐ ಅನೇಕ ದಾಖಲೆಗಳನ್ನು ಹೊತ್ತು ತಂದಿದೆ. ಮುಂಬಯಿಯ ಮಾಂಡ್ವಿ ಹಾಗೂ ಮಾಧವಪುರಗಳ ಬ್ಯಾಂಕ್‌ ಆಫ್‌ ಇಂಡಿಯಾದ ಶಾಖೆಗಳ ಮೇಲೂ ಸಿಬಿಐ ದಾಳಿ ನಡೆದಿದೆ.

ಬೌನ್ಸಾದ 130 ಕೋಟಿ ರು.ಗಳ ಪೇ ಆರ್ಡರ್‌

ಮಾಧವಪುರ ಮರ್ಕಂಟೈಲ್‌ ಸಹಕಾರಿ ಬ್ಯಾಂಕ್‌ ನೀಡಿದ್ದ 130 ಕೋಟಿ ರುಪಾಯಿಗಳ ಪೇ ಆರ್ಡರನ್ನು , ಕೇತನ್‌ ಪಾರೇಖ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ ನೀಡಿದ್ದು , ಅದು ಬೌನ್ಸ್‌ ಆಗುತ್ತಿದ್ದಂತೆಯೇ ಷೇರುಪೇಟೆಯಲ್ಲಿ ಭಾರೀ ಕೋಲಾಹಲ ಉಂಟಾಯಿತು. ಸೂಚ್ಯಂಕದಲ್ಲಿ ದಿಢೀರನೆ 147 ಪಾಯಿಂಟುಗಳಷ್ಟು ಕುಸಿತ ಕಂಡರೆ, ಚೆನ್ನೈ ಷೇರು ವಿನಿಮಯ ಕೇಂದ್ರದಲ್ಲಿ ಇಂಡೆಕ್ಸ್‌ 130 ಪಾಯಿಂಟುಗಳಷ್ಟು ಕುಸಿತ ಕಂಡಿತು.

ಷೇರು ಹಗರಣವನ್ನು ಕುರಿತು ಸೆಬಿ ಕೂಲಂಕಷವಾಗಿ ಪರಿಶೀಲಿಸುವುದು. ಅದರ ತನಿಖಾ ವರದಿಯ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ವಿತ್ತ ಸಚಿವ ಯಶವಂತ ಸಿನ್ಹಾ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+