ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಎಲ್ಲ ದಿನಗಳೂ ಸುಂದರವಾಗಿರುವುದಿಲ್ಲ. ಆದರೂ ದೈನಂದಿನ ಕೆಲಸಗಳಿಗೆ ಧಕ್ಕೆ ತರುವಂತ ಯಾವುದೇ ಘಟನೆಗಳು ನಡೆಯುವುದಿಲ್ಲವಾದ್ದರಿಂದ ಆತಂಕಗಳಿಗೆ ಎಡೆಯಿರುವುದಿಲ್ಲ.ವೃಷಭ :ನೀವು ಮಾಡುವ ಪ್ರತಿಯಾಂದು ಕೆಲಸಗಳನ್ನು ಯಾರಾದರೂ ಗಮನಿಸುತ್ತಾರೆ ಎಂಬ ಭ್ರಮೆ ಬೇಡ. ನಿಮ್ಮ ಮನಸ್ಸಿನ ಮಾತಿಗೆ ಕಿವಿ ಕೊಟ್ಟು ಮಾಡುವ ಕೆಲಸಗಳು ಯಾವತ್ತೂ ಅಚ್ಚುಕಟ್ಟಾಗಿರುತ್ತವೆ.
ಮಿಥುನ : ದೂರ ಪ್ರಯಾಣದ ಕನಸು ಕಾಣುತ್ತಾ ಸಮಯ ಹಾಳು ಮಾಡದಿದ್ದರೆ ಸರಿ. ಸದ್ಯದಲ್ಲಿಯೇ ಧನಲಾಭ ಬರಲಿದೆ.
ಕಟಕ : ದಿನವಿಡೀ ಮನರಂಜನೆಯ ಮೊರೆ ಹೋಗಿ ನಂತರ ಕೆಲಸಗಳು ಬಾಕಿ ಉಳಿದಿರುವುದನ್ನು ಕಂಡು ಗಾಬರಿಗೊಳ್ಳುತ್ತೀರಿ. ಕೊನೇ ಪಕ್ಷ ಅಗತ್ಯ ಕೆಲಸಗಳತ್ತ ನಿಮ್ಮ ಗಮನ ಇರಲಿ.
ಸಿಂಹ : ಎಂದೋ ನೀವಾಡಿದ ಮಾತುಗಳ ಮೇಲೆ ಈಗ ಸಂಶಯ ಬೇಡ. ನಡೆದು ಹೋದ ವಿಚಾರಗಳ ತಳಪಾಯದ ಮೇಲೆ ನಿಮ್ಮ ಲೆಕ್ಕಾಚಾರಗಳನ್ನು ಕಟ್ಟಬೇಡಿ. ಸ್ವಂತವಾಗಿ ಸುಂದರ ಕೆಲಸಗಳನ್ನು ನಿರ್ವಹಿಸಬಲ್ಲ ತಾಕತ್ತಿರುವಾಗ ಬೇಸರವೇಕೆ ?
ಕನ್ಯಾ : ಮನೆಯಲ್ಲಿನ ಕಿರಿಕಿರಿಗಳನ್ನು ನಿಭಾಯಿಸಿಕೊಂಡು ಓದಿನಲ್ಲಿ ನೀವು ಮುಂದೆ ಬರಬೇಕಾದ ಆಗತ್ಯವಿದೆ. ನಿಮಗೂ ನಿಮ್ಮ ಮನೆಯವರಿಗೂ ಬೇಕಾಗಿರುವುದು ಅದೇ ತಾನೇ ?
ತುಲಾ : ಕಡಿಮೆ ನಿದ್ದೆ ಬರುತ್ತದೆ ಅಂತ ಕಸಿವಿಸಿಪಟ್ಟುಕೊಂಡರೆ ಹೇಗೆ ? ಆ ಸಮಯವನ್ನು ಸದುಪಯೋಗಪಡಿಸಿಕೊಳ್ಳಿ. ಉದಾಹರಣೆಗೆ ಬಾಕಿ ಉಳಿದುಕೊಂಡಿರುವ ಓದು...
ವೃಶ್ಚಿಕ : ಸದ್ಯದಲ್ಲಿಯೇ ಕಂಕಣ ಭಾಗ್ಯವಿದೆ ಅನ್ನುವುದು ನಿಮಗೆ ಎಲ್ಲಾ ದಿಕ್ಕುಗಳಿಂದಲೂ ತಿಳಿದುಬಂದಿದೆ. ಮತ್ತೆ ನಿಮ್ಮ ಯೋಚನೆಗಳ ಬಿಚ್ಚಿಡುವುದೇ ಬಾಕಿ ಉಳಿದಿರುವ ಕೆಲಸ.
ಧನಸ್ಸು : ಲಾಟರಿಯಲ್ಲಿ ಜಯ ಸಿಗುತ್ತದೆ. ಆದರೆ ಸೀಮಿತ ಜಯ ಇದಾದ್ದರಿಂದ ದೊಡ್ಡ ಮೊತ್ತದ ಹಣ ತೊಡಗಿಸುವ ಉಸಾಬರಿಗೆ ಕೈ ಹಾಕಬೇಡಿ.
ಮಕರ : ಮನೆಯಲ್ಲಿ ದೇವ ಕಾರ್ಯಗಳನ್ನು ನಡೆಸಬೇಕೆಂದು ಯೋಜನೆಗಳನ್ನು ಹಾಕಿಕೊಂಡರೆ ಅದು ಸದ್ಯಕ್ಕೆ ನೆರವೇರುವುದಿಲ್ಲ. ಆದ್ದರಿಂದ ಬೇರೆ ಯೋಚನೆಗಳತ್ತ ಗಮನ ಹರಿಸಿ.
ಕುಂಭ : ಅನುಕಂಪದ ಬೆನ್ನು ಹತ್ತಿಹೋಗುವುದರಿಂದ ಹೆಚ್ಚು ಹೊತ್ತು ಗೆಲುವು ನಿಮ್ಮ ಬಳಿ ನಿಲ್ಲುವುದಿಲ್ಲ. ಆದ್ದರಿಂದ ಸ್ನೇಹಿತರನ್ನು ಹತ್ತಿರಕ್ಕೆ ಸೇರಿಸಿಕೊಳ್ಳುವಾಗ ಎರಡು ಬಾರಿ ಯೋಚಿಸಿ.
ಮೀನ : ಬರೇ ಕಾಸು ಖರ್ಚು ಅಂತ ತಲೆ ಮೇಲೆ ಕೈ ಹೊತ್ತು ಕುಳಿತರಾಗುತ್ತದೆಯೇ ? ಮನೆಯವರ ಸಹಕಾರದಿಂದ ನೀವು ಉದ್ಧಾರವಾಗಲಿದ್ದೀರಿ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications