ಏಪ್ರಿಲ್ 5 ರಂದು ಬೆಂಗಳೂರಿನ ಎನ್ಡಿಎರ್ಯಾಲಿಗೆ ವಾಜಪೇಯಿ
ನವದೆಹಲಿ : ತೆಹಲ್ಕಾ ಬಹಿರಂಗಪಡಿಸಿದ ರಕ್ಷಣಾ ಅವ್ಯವಹಾರ ಕುರಿತಂತೆ ವಿರೋಧ ಪಕ್ಷಗಳ ಟೀಕೆಗಳಿಗೆ ಪ್ರತಿಯಾಗಿ ಹದಿನೈದು ದಿನಗಳ ಅಭಿಯಾನವೊಂದನ್ನು ರಾಷ್ಟ್ರೀಯ ಪ್ರಜಾ ಸತ್ತಾತ್ಮಕ ಒಕ್ಕೂಟ ಹಮ್ಮಿಕೊಂಡಿದೆ. ಏಪ್ರಿಲ್ ಐದರಂದು ಬೆಂಗಳೂರಿಗೆ ಆಗಮಿಸುವ ಅಭಿಯಾನವನ್ನು ಪ್ರಧಾನಿ ವಾಜಪೇಯಿ ಉದ್ದೇಶಿಸಿ ಮಾತನಾಡುವರು.
ಗ್ರಾಮೀಣಾಭಿವೃದ್ಧಿ ಸಚಿವ ವೆಂಕಯ್ಯನಾಯ್ಡು ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದ್ದಾರೆ. ಸತ್ಯವನ್ನು ಜನರ ಬಳಿಗೆ ಕೊಂಡೊಯ್ಯುವ ಸಲುವಾಗಿ ಈ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದ್ದು , ರ್ಯಾಲಿಯು ಏಪ್ರಿಲ್ ಒಂದರಂದು ಕೊಚ್ಚಿಯಲ್ಲಿ ಆರಂಭವಾಗಲಿದೆ ಎಂದರು.
ಕೊಚ್ಚಿಯಲ್ಲಿ ಗೃಹಮಂತ್ರಿ ಎಲ್.ಕೆ. ಅಡ್ವಾಣಿ , ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಮತ್ತು ಕೇರಳದ ಎನ್ಡಿಎ ಮುಖಂಡರು ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುವರು. ರ್ಯಾಲಿಯು ಏಪ್ರಿಲ್ 2ರಂದು ತಿರುಚನಾಪಳ್ಳಿ ಪ್ರವೇಶಿಸಲಿದ್ದು, ಅಡ್ವಾಣಿ, ಜಾರ್ಜ್ಫರ್ನಾಂಡಿಸ್ ಮತ್ತು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜನಾ ಕೃಷ್ಣ ಮೂರ್ತಿ ಭಾಷಣ ಮಾಡುವರು.
ಎರಡು ದಿನಗಳ ಬಳಿಕ ರ್ಯಾಲಿಯು ಹೈದರಾಬಾದಿನಲ್ಲಿ ನಡೆಯಲಿದ್ದು, ಅಡ್ವಾಣಿ ಮತ್ತು ಫರ್ನಾಂಡಿಸ್ ಜೊತೆಗೆ ಆಂಧ್ರಪ್ರದೇಶದ ಎನ್ಡಿಎ ಮುಖಂಡರು ತೆಹಲ್ಕಾ ಬಗ್ಗೆ ಮಾತನಾಡುವರು. ಎನ್ಡಿಎ ಸಂಯೋಜನಾ ಸಮಿತಿಯ ಸಂಯೋಜಕ ಜಾರ್ಜ್ ಫರ್ನಾಂಡಿಸ್ ರ್ಯಾಲಿಯ ರೂಪು ರೇಷೆಯನ್ನು ನಿರ್ಧರಿಸುತ್ತಾರೆ ಎಂದು ವೆಂಕಯ್ಯ ನಾಯ್ಡು ಹೇಳಿದರು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications