ಕಳ್ಳಾಟದ ಆರೋಪಿತ ಕೈಗಳಿಂದ ಅದಿತಿಗೆ ತಾಳಿ ಕಟ್ಟಿದ ಜಡೇಜಾ
ನವದೆಹಲಿ : ಕ್ರಿಕೆಟ್ಟಲ್ಲಿ ಕಳ್ಳಾಟ ಆಡಿದರೆಂಬ ಆರೋಪದ ಕಾರಣ ಐದು ವರ್ಷಗಳ ಕಾಲ ಕಣದಿಂದ ಹೊರ ದೂಡಲಾಗಿರುವ ಅಜಯ್ ಜಡೇಜಾ ಈಗ ರಕ್ಷಣಾ ಹಗರಣದ ಆರೋಪ ಎದುರಿಸುತ್ತಿರುವ ಮಾಜಿ ಮಂತ್ರಿ ಜಯಾ ಜೇಟ್ಲಿ ಅವರ ಅಳಿಯ.
ಜಡೇಜಾ ಶುಕ್ರವಾರ ರಾತ್ರಿ ಸಂಸಾರಸ್ಥರಾಗಿದ್ದಾರೆ. ಬಹು ವರ್ಷಗಳ ಗೆಳತಿ ಅದಿತಿ ಜೇಟ್ಲಿ ಅವರಿಗೆ ಕಾಶ್ಮೀರ್ ಹೌಸ್‌ನಲ್ಲಿ ಶುಕ್ರವಾರ ರಾತ್ರಿ 10.30ಕ್ಕೆ ತಾಳಿ ಕಟ್ಟಿದ್ದಾರೆ. ಬಿಳಿ ಕುರ್ತಾ, ಕೆಂಪು ಪೇಟ ಕಟ್ಟಿದ್ದ ಶೋಕೀಲಾಲ ಜಡೇಜ ರಾಜಾಸ್ತಾನಿ ಗೆಟಪ್ಪಿನಲ್ಲಿ ಜೀವನದ ಹೊಸ ಇನ್ನಿಂಗ್ಸ್ ಪ್ರಾರಂಭಿಸಲು ಹುರುಪಿನಿಂದ ಇದ್ದರು.
ಯಾರು ಏನೇ ಬೆಟ್ಟು ಮಾಡಿ ತೋರಲಿ. ಜಯಾ ಹಾಗೂ ಆಕೆಯ ಮಗಳು ಅದಿತಿ ಪಾಲಿಗಂತೂ ಜಡೇಜಾ ಪುಟವಿಟ್ಟ ಬಂಗಾರ. ಈ ಹಗರಣ ಒಗ್ಗರಣೆ ರಗಳೆಗಳು ಇದ್ದದ್ದೇ ಅಲ್ಲವೇ ? ಅಳಿಯ ಹಾಗೂ ಅತ್ತೆ ಇಬ್ಬರೂ ಈಗ ಒಂದೇ ದೋಣಿಯಲ್ಲಿ ಪಯಣಿಸುತ್ತಿದ್ದಾರಲ್ಲಾ ಎಂಬ ಮಾತುಗಳು ಎಲ್ಲೆಲ್ಲೂ ಪ್ರತಿಧ್ವನಿಸುತ್ತಿವೆ.
ಈ ಎಲೈಟ್ ಮದುವೆಗೆ ಪ್ರಧಾನಿ ವಾಜಪೇಯಿ, ಚಿತ್ರತಾರೆ ಮಾಧುರಿ ದೀಕ್ಷಿತ್, ಜಮ್ಮು- ಕಾಶ್ಮೀರ ಮುಖ್ಯಮಂತ್ರಿ ಫರೂಕ್ ಅಬ್ದುಲ್ಲಾ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ದಿಗ್ವಿಜಯ್ ಸಿಂಗ್, ಕ್ರಿಕೆಟರ್ ಕಮ್ ರಾಜಕಾರಣಿ ಕೀರ್ತಿ ಆಜಾದ್, ಕೃಷಿ ಸಚಿವ ನಿತೀಶ್ ಕುಮಾರ್, ಕ್ರಿಕೆಟಿಗ ನಿಖಿಲ್ ಚೋಪ್ರಾ, ನೃತ್ಯಪಟು ಸೋನಾಲ್ ಮಾನ್‌ಸಿಂಗ್ ಮೊದಲಾದವರು ಬಂದಿದ್ದರು.
ಜಮ್ಮು ಕಾಶ್ಮೀರದ ಮುಖ್ಯ ಕಾರ್ಯದರ್ಶಿ ಅಶೋಕ್ ಜೇಟ್ಲಿ ಹಾಗೂ ಸಮತಾ ಪಕ್ಷದ ಜಯಾ ಜೇಟ್ಲಿ ಪುತ್ರಿ ಅದಿತಿ, ಜಡೇಜಾ ರ ಬಹು ವರ್ಷಗಳ ಗೆಳತಿ. ಅವರ ಕಾರುಬಾರುಗಳಲ್ಲೂ ಈಕೆ ಕೈಹಚ್ಚಿದ್ದರು. ಜಡೇಜಾ ಕಣದಲ್ಲಿ ಬ್ಯಾಟ್ ಮಾಡುತ್ತಿದ್ದರೆ, ಈಕೆ ಇತರೆ ವ್ಯವಹಾರಗಳನ್ನು ನಿಭಾಯಿಸುತ್ತಿದ್ದರು. ಈಗ ಜಡೇಜಾ- ಅದಿತಿ ದಂಪತಿಗಳಾಗಿದ್ದಾರೆ. ಅವರಿಗೆ ಶುಭವಾಗಲಿ.
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications