ಕಣ್ಣೆತ್ತಿ ನೋಡದ ಬಜೆಟ್, ದಿಗಿಲಿನಲ್ಲಿ ಮಂಜುಗಡ್ಡೆ ತಯಾರಕರು
ಮಂಗಳೂರು : ಸಂಪನ್ಮೂಲಗಳ ಕೊರತೆಯಿಂದ ಸಂಕಷ್ಟದಲ್ಲಿರುವ ಮಂಜುಗಡ್ಡೆ ತಯಾರಿಕಾ ಘಟಕಗಳು ಸರಕಾರದ ಸವಲತ್ತುಗಳ ನೆರವಿಗಾಗಿ ಈ ಬಾರಿಯ ಬಜೆಟನ್ನೇ ಎದುರು ನೋಡುತ್ತಿದ್ದವು. ಆದರೆ ಬಜೆಟ್‌ನಲ್ಲಿ ಮಂಜುಗಡ್ಡೆ ತಯಾರಿಕಾ ಘಟಕಗಳಿಗೆ ಸಿಕ್ಕದ್ದು ಮಲತಾಯಿ ಉಪಚಾರ.
ಮೀನುಗಾರಿಕಾ ನಿರ್ದೇಶನಾಲಯವನ್ನು ಮಂಗಳೂರಿಗೆ ಸ್ಥಳಾಂತರಿಸುವ ಉಲ್ಲೇಖದ ಹೊರತಾಗಿ ಬಜೆಟ್‌ನಲ್ಲಿ ಸಮುದ್ರ ಉದ್ಯಮದ ಕುರಿತು ಬೇರೆ ಪ್ರಸ್ತಾಪ ಇಲ್ಲದಿರುವುದು ಮುಖ್ಯವಾಗಿ ಮಂಜುಗಡ್ಡೆ ತಯಾರಕರಿಗೆ ದಿಗಿಲು ಹುಟ್ಟಿಸಿದೆ. ಮಾರ್ಚ್ ಏಳರಂದು ಒಂದು ಯೂನಿಟ್ ವಿದ್ಯುತ್‌ಗೆ ಒಂದು ರೂಪಾಯಿಯಂತೆ ರಿಯಾಯಿತಿ ನೀಡಲು ಆಗ್ರಹಿಸಿ ಮಂಜುಗಡ್ಡೆ ತಯಾರಿಕಾ ಘಟಕಗಳ ಸಂಘದ ಮಾಲಿಕರು ಅನಿರ್ದಿಷ್ಟಾವಧಿಯ ಮುಷ್ಕರ ಹೂಡಿದ್ದರು. ಆದರೆ ಸಣ್ಣ ಕೈಗಾರಿಕಾ ಮಂತ್ರಿ ಕಾಶಪ್ಪನವರ್ ಮತ್ತು ಜಿಲ್ಲಾ ಉಸ್ತುವಾರಿ ಮಂತ್ರಿ ರಮಾನಾಥ ರೈ ಅವರು ಮಾಲಕರ ಸಂಘದ ಪ್ರತಿನಿಧಿಗಳಿಗೆ ನೀಡಿದ ಸಾಂತ್ವನ ಅವರನ್ನು ಮತ್ತೆ ಕೆಲಸ ಆರಂಭಿಸುವಂತೆ ಮಾಡಿತು. ಆದರೆ ಅವರೆಲ್ಲರ ಕಣ್ಣಿದ್ದುದು ರಾಜ್ಯ ಬಜೆಟ್‌ನತ್ತ .
ಕಹಿ ಬಜೆಟ್ : ಬಜೆಟ್ ನಮ್ಮ ನಿರೀಕ್ಷೆಗಳನ್ನೆಲ್ಲಾ ಹುಸಿ ಮಾಡಿದೆ ಎಂದು ಘಟಕಗಳ ಮಾಲಕರ ಸಂಘದ ಅಧ್ಯಕ್ಷ ಪರಶುರಾಮ್ ಹೇಳುತ್ತಾರೆ.
ಕೆಪಿಟಿಸಿಎಲ್ ವಿದ್ಯುತ್ ದರದಲ್ಲಿ ರಿಯಾಯಿತಿ ನೀಡಲು ನಿರಾಕರಿಸಿದೆ. ಆದರೆ ತೋಟಗಾರಿಕಾ ಬೆಳೆಗಳಿಗೆ ಇರುವ ರಿಯಾಯಿತಿ ನೀಡುವ ಬಗ್ಗೆ ಪರಿಶೀಲಿಸುವುದಾಗಿ ಹೇಳಿದೆ. ಯಾವುದಕ್ಕೂ ಮುಖ್ಯಮಂತ್ರಿಗಳ ಮುದ್ರೆ ಬೀಳದೆ ಕೆಲಸ ಆಗುವುದಿಲ್ಲ. ಮುಷ್ಕರ ಹಿಂತೆಗೆದುಕೊಳ್ಳುವಂತೆ ಮನವೊಲಿಸುವ ಸಲುವಾಗಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕಾಶಪ್ಪನವರು ವಿದ್ಯುತ್ ದರ ರಿಯಾಯಿತಿ ಕುರಿತು ಮುಖ್ಯಮಂತ್ರಿಗಳ ಬಳಿ ಮಾತುಕತೆ ನಡೆಸುವುದಾಗಿ ಹೇಳಿದ್ದರೂ, ಈವರೆಗೆ ಯಾವುದೇ ಬೆಳವಣಿಗೆ ಆಗಿಲ್ಲ . ಈ ಬೇಡಿಕೆಗಳ ಬಗೆಗೆ ಮುಖ್ಯಮಂತ್ರಿಗಳು ಅಧ್ಯಯನ ಮಾಡಿ ನಂತರ ನಿರ್ಧಾರ ತೆಗೆದುಕೊಳ್ಳುವರು ಎಂದು ರಮಾನಾಥ ರೈ ಹೇಳುತ್ತಿದ್ದಾರೆ ಎಂದು ಪರಶುರಾಮ್ ಹೇಳುತ್ತಾರೆ.
ಈ ನಡುವೆ ಮಂಜುಗಡ್ಡೆ ತಯಾರಿಕಾ ಘಟಕಗಳಿಗೆ ಯಾವುದೇ ರಿಯಾಯಿತಿಗಳು ಸಿಗದಿದ್ದಲ್ಲಿ, ಮಾರ್ಚ್ 31ರೊಳಗಾಗಿ ಕರ್ನಾಟಕ ಮೀನುಗಾರರ ಕ್ರಿಯಾ ಸಮಿತಿಯ ಪ್ರತಿನಿಧಿಗಳು ಸಂಬಂಧಿಸಿದ ಅಧಿಕಾರಿಗಳ ಬಳಿಗೆ ನಿಯೋಗವೊಂದನ್ನು ಕಳುಹಿಸಲಿದೆ. ಮಂಜುಗಡ್ಡೆ ತಯಾರಿಕೆಗೆ ಬೇಕಾಗುವ ಡೀಸೆಲ್ ಆಗಲಿ, ವಿದ್ಯುತ್ ಆಗಲಿ ಅಗ್ಗಕ್ಕೆ ಸಿಗುವ ವಸ್ತುಗಳಲ್ಲ. ಸರಕಾರದ ಸಹಾಯವಿಲ್ಲದೆ ಈ ಉದ್ಯಮದಲ್ಲಿ ಲಾಭ ಗಳಿಸುವುದೆಂತು ಎಂಬುದು ಪರಶುರಾಮರ ಪ್ರಶ್ನೆ.
(ಮಂಗಳೂರು ಪ್ರತಿನಿಧಿಯಿಂದ)
ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications