ನಿಮಗಲ್ಲ , ವ್ಯಕ್ತಿತ್ವಕ್ಕೊಂದು ಉದ್ಯೋಗ ತೋರಿಸುವ ಕೆರಿಯರ್‌ಇಂಡಿಯಾ
( ನಮ್ಮ ವರದಿಗಾರರಿಂದ)
ವ್ಯಕ್ತಿತ್ವಕ್ಕೆ, ವಿದ್ವತ್ತಿಗೆ ತಾಳೆಯಾಗುವಂಥಾ ಕೆಲಸದ ಶಿಕಾರಿಯಲ್ಲಿದ್ದೀರಾ ? ಹೌದಾದಲ್ಲಿ , ಒಮ್ಮೆ ಕೆರಿಯರ್‌ಇಂಡಿಯಾ.ಕಾಂಗೆ ಭೇಟಿ ಕೊಡಿ. ಅಂದಮಾತ್ರಕ್ಕೆ ಇದೇನು ಕೆಲಸ ಕೊಡಿಸುವ ಅಂಗಡಿ- ಏಜನ್ಸಿ ಅಲ್ಲ . ಹೋಲಿಸುವುದಾದರೆ, ಧರ್ಮಾಸ್ಪತ್ರೆ ಮಾದರಿಯದು. ವ್ಯಾಖ್ಯಾನಿಸುವುದಾದರೆ, ಭಾರತೀಯ ಪ್ರತಿಭೆಗಳ ಹೆಬ್ಬಾಗಿಲು ಹಾಗೂ ಮಾಲಿಕ- ಕೆಲಸಗಾರನ ನಡುವೆ ಸಂಪರ್ಕ ಕಲ್ಪಿಸುವ ಕೊಂಡಿ.
ಇಂಡಿಯೋಇನ್ಫೋ.ಕಾಂನ ಅಧಿಕೃತ ಫೋರ್ಟಲ್‌ಗಳಲ್ಲಿ ಕೆರಿಯರ್‌ಇಂಡಿಯಾ ಕೂಡಾ ಒಂದು. ಅದು ಪ್ರಾರಂಭವಾದದ್ದು 1998 ರಲ್ಲಿ . ಇಂಡಿಯಾ ಇನ್ಫೋ ತೆಕ್ಕೆಗೊಳಪಟ್ಟಿದ್ದು ಏಪ್ರಿಲ್ 1999 ರಲ್ಲಿ . ಮೂರು ವರ್ಷಗಳಿಂದ ಉದ್ಯೋಗದಾತ, ಉದ್ಯೋಗಾಕಾಂಕ್ಷಿ ಇಬ್ಬರನ್ನೂ ನಿರಂತರವಾಗಿ ಬೆಸೆಯುತ್ತಾ ಹೊಂಟಿರುವ ಕೆರಿಯರ್‌ಇಂಡಿಯಾ ತನ್ನ ಗಮನ ಕೇಂದ್ರೀಕರಿಸಿರುವುದು, ಮುಖ್ಯವಾಗಿ ಐಟಿ ಕ್ಷೇತ್ರದ ಮೇಲೆ.
ಜಾಗತಿಕ ಮಟ್ಟದಲ್ಲಿ ದೊಡ್ಡಣ್ಣ ಎನಿಸಿರುವ ನೂರಕ್ಕೂ ಹೆಚ್ಚು ಕಂಪನಿಗಳು ಕೆರಿಯರ್‌ಇಂಡಿಯಾದೊಂದಿಗೆ ಸಂಬಂಧ ಹೊಂದಿವೆ. ಅವುಗಳ ಬಾಗಿಲು ಕೆರಿಯರ್‌ಇಂಡಿಯಾದಲ್ಲಿ ನಿಮಗಾಗಿ ತೆರೆದಿರುತ್ತದೆ. ಉದಾಹರಣೆಗೆ ಹೇಳುವುದಾದರೆ- ಹೆವ್ಲೆಟ್ ಪ್ಯಾಕರ್ಡ್, ಸೋನಿ, ವಿಫ್ರೋ, ಷಾರ್ಪ್, ಟಾರ್ರಿ ಹ್ಯಾರಿಸ್, ಅಕ್ವಿಲಾ, ಅದಿತಿ, ಮೈಕ್ರೋಸಾಫ್ಟ್, ಬ್ಲೂಸ್ಟಾರ್, ಹನಿವೆಲ್,ಸೊನಾಟ, ಮೊಟೊರೊಲ, ಆಸ್ಟ್ರಾ ಐಡಿಎಲ್, ಭಾರತ್ ಪೆಟ್ರೋಲಿಯಂ, ಪಿಎಸ್‌ಐ ಡೇಟಾಸಿಸ್ಟಂ .. ದಿಗ್ಗಜರ ಸಾಲು ಮುಂದುವರಿಯುತ್ತದೆ.
ನೀವು ಸಲ್ಲಿಸಿದ ರೆಸ್ಯೂಮ್ ಇಲ್ಲಿ ನೂರಕ್ಕೆ ನೂರರಷ್ಟು ಗುಟ್ಟಾಗಿರುತ್ತದೆ. ಕೆಲಸಗಳ ಬಗ್ಗೆ ನಿಮಗೆ ಮಾಹಿತಿ, ಆನ್‌ಲೈನ್‌ಗೆ ನಿಮ್ಮ ರೆಸ್ಯೂಮ್ ಸಲ್ಲಿಕೆ ಮುಂತಾದ ಅನುಕೂಲಗಳೂ ಇಲ್ಲುಂಟು. ವಿವಿಧ ಕ್ಷೇತ್ರಗಳಲ್ಲಿ ನಿಮಗೆ ಪರಿಣತಿಯಿದ್ದರೆ ಪ್ರತ್ಯೇಕ ರೆಸ್ಯೂಮ್‌ಗಳನ್ನು ತಯಾರಿಸಿ ಸಲ್ಲಿಸಬಹುದು. ಇದರಿಂದಾಗಿ, ಅಭ್ಯರ್ಥಿ ಏಕಕಾಲದಲ್ಲಿ ಹೆಚ್ಚು ಕ್ಷೇತ್ರಗಳನ್ನು ಮುಟ್ಟುವುದು ಸಾಧ್ಯವಾಗುತ್ತದೆ.
ಕೆರಿಯರ್ ಇಂಡಿಯಾ ನಿಮಗೆ ಎಂಥದ್ದೋ ಒಂದು ಉದ್ಯೋಗವನ್ನು ಸೃಷ್ಟಿಸಿಕೊಡುವ ಅಲ್ಪತೃಪ್ತ ಸಂಘಟನೆಯಲ್ಲ . ಹೊಸ ಕೆಲಸವನ್ನು ಹೊಂದಲಿಕ್ಕೆ ಮಾತ್ರವಲ್ಲದೆ, ಇರುವ ಕೆಲಸವ ಬಿಟ್ಟು ಮತ್ತೂ ಉತ್ತಮವಾದ ಕೆಲಸವನ್ನು ಹುಡುಕಿಕೊಳ್ಳಲೂ ನೆರವಾಗುತ್ತದೆ. ಆ ಕಾರಣದಿಂದಲೇ ಆನ್‌ಲೈನ್ ಚಾಟ್ ಮೂಲಕವೇ ಉದ್ಯೋಗದಾತ ಹಾಗೂ ಉದ್ಯೋಗಾಕಾಂಕ್ಷಿ ಮುಖಾಮುಖಿಯಾಗುವ ವಿಶೇಷ ಸೌಲಭ್ಯ ಇಲ್ಲುಂಟು.
ಕೆಲಸಕ್ಕಾಗಿ ಎಂದೇ ನೀವು ಕೆರಿಯರ್‌ಇಂಡಿಯಾಗೆ ಬಂದು ಹೋಗಬೇಕೆಂದಿಲ್ಲ . ಇಲ್ಲಿ ಬಂದುಹೋಗಲು ಹೊಂದಿರಬೇಕಾದ ಕನಿಷ್ಟ ಅರ್ಹತೆ ಆಸಕ್ತಿ . ನಿಮ್ಮೊಂದು ಸಲದ ಭೇಟಿಯಲ್ಲಿ , ನಿಮಗಲ್ಲವಾದರೆ - ಮಕ್ಕಳಿಗೆ, ಗೆಳೆಯರಿಗೆ ಯಾರಿಗಾದರೂ ಒಂದಷ್ಟು ಬೆಳಕು ಸಿಕ್ಕೀತು. ದೀಪ ಬೆಳಗಿದ ಪುಣ್ಯ ನಿಮ್ಮದಾದೀತು.
serching for a job? Log on to ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications