Get Updates
Get notified of breaking news, exclusive insights, and must-see stories!

ಶಾರ್ಜಾ ಟೂರ್ನಿ : ಚತುಷ್ಕೋನವೋ ?ತ್ರಿಕೋನವೋ ?

* ಅಶೋಕ್‌ ಟುತೇಜ

ದುಬೈ : ಭಾರತ ಆಡದಿದ್ದರೆ ಬೇಡ. ಕೋಕಾಕೋಲಾ ಕಪ್‌ ಕ್ರಿಕೆಟ್‌ ಸರಣಿ ಈಗ ನಿಗದಿಯಾಗಿರುವಂತೆ ಏಪ್ರಿಲ್‌ 8ರಿಂದ ಶುರುವಾಗೇ ಆಗುತ್ತೆ. ಈಗ ಸರಣಿಯಲ್ಲಿ ಆಡಲು ನ್ಯೂಜಿಲೆಂಡ್‌ಗೆ ಬುಲಾವು ನೀಡಲು ನಿರ್ಧರಿಸಲಾಗಿದ್ದು, ಭಾರತ ಆಡಿದಲ್ಲಿ ಇದು ನಾಲ್ಕು ರಾಷ್ಟ್ರಗಳ ನಡುವಣ ಸರಣಿಯಾಗಲಿದೆ. ಅದು ತನ್ನ ಪಟ್ಟು ಸಡಿಲಿಸದೇ ಇದ್ದಲ್ಲಿ ತ್ರಿಕೋನ ಸರಣಿಯಾಗಲಿದೆ ಎಂದು ಕ್ರಿಕೆಟರ್ಸ್‌ ಬೆನಿಫಿಟ್‌ ಫಂಡ್‌ ಸೀರೀಸ್‌ (ಸಿಬಿಎಫ್‌ಎಸ್‌) ಗಲ್ಫ್‌ ನ್ಯೂಸ್‌ಗೆ ಹೇಳಿಕೆ ಕೊಟ್ಟಿದೆ.

ಭಾರತ ಆಡದಿರುವ ಬಗ್ಗೆ ಪುಕಾರುಗಳು, ಅನುಮಾನಗಳು ಹೊರಬಿದ್ದಿವೆಯೇ ಹೊರತು ಬಿಸಿಸಿಐ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಆದರೆ ಈ ವಿಷಯದಲ್ಲಿ ಭಾರತ ಸರ್ಕಾರದ ವಿಳಂಬ ನೀತಿ ಹಾಗೂ ಭಾರತದ ಮಾಧ್ಯಮಗಳು ಪ್ರಕಟಿಸಿರುವ ಸುದ್ದಿಗಳನ್ನು ಗಮನಿಸಿದಲ್ಲಿ ಭಾರತ ಬಹುತೇಕ ಆಡುವುದಿಲ್ಲ. ಈ ಕಾರಣ ಸಿಬಿಎಫ್‌ಎಸ್‌ ನ್ಯೂಜಿಲೆಂಡ್‌ಗೆ ಆಮಂತ್ರಣ ಪತ್ರ ಕೊಟ್ಟಿದೆ. ಬಹುಶಃ ನ್ಯೂಜಿಲೆಂಡ್‌ ಶುಕ್ರವಾರ ತನ್ನ ಅನುಮತಿ ಪತ್ರವನ್ನು ಸಿಬಿಎಫ್‌ಎಸ್‌ಗೆ ಕಳುಹಿಸಲಿದೆ.

ಆದರೆ ಈ ವಿದ್ಯಮಾನಗಳ ಬಗ್ಗೆ ಸಿಬಿಎಫ್‌ಎಸ್‌ ಅಧಿಕೃತ ಮಾಹಿತಿ ಕೊಟ್ಟಿಲ್ಲ. ಒಂದು ವೇಳೆ ಕೊನೆ ಗಳಿಗೆಯಲ್ಲಿ ಭಾರತ ತಂಡವನ್ನು ಶಾರ್ಜಾಗೆ ಕಳುಹಿಸಲು ಸರ್ಕಾರ ಒಪ್ಪಿದಲ್ಲಿ ಏನು ಮಾಡುವಿರಿ ಎಂಬ ಪ್ರಶ್ನೆಗೆ ಸಿಬಿಎಫ್‌ಎಸ್‌ ಅಧಿಕಾರಿ ಹೇಳುತ್ತಾರೆ- ನಮ್ಮ ಬಳಿ ಸಾಕಷ್ಟು ಸಮಯವಿದೆ. ಪ್ರವಾಸದ ಅವಧಿ 13 ದಿನಗಳು. ಆದ್ದರಿಂದ ನಾಲ್ಕೂ ತಂಡಗಳನ್ನು ಆಡಿಸಲು ಅನುವಾಗುವಂತೆ ಪಂದ್ಯಗಳ ಪಟ್ಟಿ ತಯಾರಿಸಲಾಗುವುದು. ಭಾರತ ಬರದೇ ಇದ್ದಲ್ಲಿ ನ್ಯೂಜಿಲೆಂಡ್‌ ಜೊತೆಗೆ ಶ್ರೀಲಂಕಾ ಹಾಗೂ ಪಾಕಿಸ್ತಾನ ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ಬ್ಯಾಡ್‌ ಫಾರ್‌ ಇಂಡಿಯಾ. ಗುಡ್‌ ಫಾರ್‌ ನ್ಯೂಜಿಲೆಂಡ್‌ ಅಷ್ಟೆ.

ಭಾರತ ಹ್ಞೂಂ ಅಂದರೆ ಪಾಕ್‌? : ಈಗ ಭಾರತ ಆಡಲು ಒಪ್ಪಿದರೂ, ಪಾಕಿಸ್ತಾನ ಭಾರತದೊಂದಿಗೆ ಆಡಲು ಹಿಂಜರಿಯುವ ಸಾಧ್ಯತೆಯಿದೆ. ಪಾಕ್‌ ಕ್ರಿಕೆಟ್‌ಮಂಡಳಿ ಅಧ್ಯಕ್ಷ ತಾಕಿರ್‌ ಜಿಯಾ ಭಾರತ ಸರ್ಕಾರದ ಪಟ್ಟಿನಿಂದ ಬೇಸತ್ತು, ಇನ್ನು ಮುಂದೆ ಪಾಕಿಸ್ತಾನ ಭಾರತದ ವಿರುದ್ಧ ಎಲ್ಲೂ ಎಂದೂ ಕ್ರಿಕೆಟ್‌ ಆಡುವುದಿಲ್ಲ ಎಂಬ ಆತಂಕಕಾರಿ ಸುದ್ದಿ ಕೊಟ್ಟಿದ್ದಾರೆ.

(ಯುಎನ್‌ಐ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+