ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹತ್ತು ಸಾವಿರ ರನ್ನುಗಳ ಮೈಲುಗಲ್ಲಿನ ಹೊಸಿತಿಲಲ್ಲಿ ಸಚಿನ್‌

By Staff
|
Google Oneindia Kannada News

ಇಂದೋರ್‌ : ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ ಎನ್ನುವ ಅಗ್ಗಳಿಕೆಯ, ಸಿಡಿಲ ಹೊಡೆತಗಳ ಆಟಗಾರ ಸಚಿನ್‌ ತೆಂಡೂಲ್ಕರ್‌ ಮತ್ತೊಂದು ಮೈಲುಗಲ್ಲಿನ ಹೊಸಿತಿಲಲ್ಲಿ ನಿಂತಿದ್ದಾರೆ. ಇನ್ನು 34 ರನ್‌ ಚಚ್ಚಿದರೆ, ಸೀಮಿತ ಓವರ್‌ಗಳ ಪಂದ್ಯದಲ್ಲಿ 10 ಸಹಸ್ರ ರನ್‌ ಪೂರೈಸಿದ ಮೊದಲ ಆಟಗಾರ ಎನ್ನುವ ದಾಖಲೆಗೆ ಅವರು ಪಾತ್ರರಾಗುತ್ತಾರೆ.

ಶನಿವಾರ (ಮಾ.31) ನಡೆಯುವ ಪಂದ್ಯದಲ್ಲಿ 10 ಸಾವಿರ ರನ್‌ಗಳ ದಾಖಲೆಯನ್ನು ಸಚಿನ್‌ ಮುಟ್ಟುವ ವಿಶ್ವಾಸವನ್ನು ತಂಡದ ಮ್ಯಾನೇಜರ್‌ ರಾಜೇಶ್‌ ಚೌಹಾಣ್‌ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಅತ್ಯುತ್ತಮ ಫಾರ್ಮ್‌ನಲ್ಲಿರುವ ಸಚಿನ್‌ ಕೂಡ ಹೊಸ ದಾಖಲೆ ಬರೆಯುವ ಹುಮ್ಮಸ್ಸಿನಲ್ಲಿದ್ದಾರೆ. ಅವರಿಗೆ, ಅಭಿನಂದನೆಗಳು. ಮುಂಗಡವಾಗಿ .

ದ್ರಾವಿಡ್‌ ಆಡುತ್ತಾರೆ : ತಲೆ ಕೆಡಿಸಿಕೊಂಡು ಕೂತಿದ್ದ ಚಿಂತಕರ ಚಾವಡಿಯ ಮಂದಿಯೀಗ ನಿರಾಳವಾಗಿದ್ದಾರೆ. ಗಲ್ಲದ ಗಾಯದ ಕಾರಣವಾಗಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಸೀಮಿತ ಓವರ್‌ಗಳ ಪಂದ್ಯದಲ್ಲಿ ದ್ರಾವಿಡ್‌ ಆಡುವ ಕುರಿತು ಎದ್ದಿದ್ದ ಅನುಮಾನಗಳೆಲ್ಲ ಈಗ ಬಗೆಹರಿದಿವೆ.

ದ್ರಾವಿಡ್‌ ಸಂಪೂರ್ಣ ಗುಣಮುಖರಾಗಿದ್ದಾರೆ. ಅವರು ಚೇತರಿಕೆಯಿಂದಿದ್ದಾರೆ. ಮೂರನೇ ಪಂದ್ಯದಲ್ಲಿ ಆಡಿಯೇ ತೀರುತ್ತಾರೆ ಎಂದು ತಂಡದ ಮ್ಯಾನೇಜರ್‌ ಚೌಹಾಣ್‌ ಗುರುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಅವರೇ ಹೇಳಿದಂತೆ, ತಂಡದ ಯಾವ ಆಟಗಾರರೂ ದೈಹಿಕ ಸಮಸ್ಯೆಗಳನ್ನು ಎದುರಿಸುತ್ತಿಲ್ಲ .

ವಿಕೆಟ್‌ಗಳ ನಡುವೆ ಓಡುವ ಅಭ್ಯಾಸ : ಎರಡನೇ ಪಂದ್ಯದಲ್ಲಿ ಸುಲಭವಾಗಿ ಸೋತ ಹಿನ್ನೆಲೆಯಲ್ಲಿ ಭಾರತ ಕ್ರಿಕೆಟ್‌ ತಂಡದ ಸದಸ್ಯರು ತರಬೇತುದಾರ ಜಾನ್‌ ರೈಟ್‌ ನೇತೃತ್ವದಲ್ಲಿ ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ. ವಿಕೆಟ್‌ಗಳ ನಡುವಿನ ಓಟದ ಸುಧಾರಣೆ ಹಾಗೂ ಗಾಳಿಯಲ್ಲಿ ತೇಲುವ ಚೆಂಡುಗಳನ್ನು ಕ್ಯಾಚಾಗಿ ಪರಿವರ್ತಿಸುವ ಕಲೆಯ ಬಗೆಗೆ ಕಠಿಣ ಅಭ್ಯಾಸ ನಡೆಸಲಾಗುತ್ತಿದೆ. ಎರಡೂ ತಂಡಗಳು ಮುನ್ನಡೆಗಾಗಿ ತೀವ್ರ ಹೋರಾಟ ನಡೆಸುವ ನಿರೀಕ್ಷೆ ಇರುವುದರಿಂದ, ಪಂದ್ಯ ತೀವ್ರ ಕುತೂಹಲ ಮೂಡಿಸಿದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X