Get Updates
Get notified of breaking news, exclusive insights, and must-see stories!

ಚೌಟ,ಅಕ್ಷರ ಸೇರಿದಂತೆ 8 ಮಂದಿಗೆ ನಾಟಕಅಕಾಡೆಮಿ ಫೆಲೋಷಿಪ್‌

ಬೆಂಗಳೂರು : ಕರ್ನಾಟಕ ನಾಟಕ ಅಕಾಡೆಮಿ ಡಿ.ಕೆ. ಚೌಟ, ಕೆ.ವಿ. ಅಕ್ಷರ ಸೇರಿದಂತೆ ಎಂಟು ಹಿರಿಯ ಕಲಾವಿದರಿಗೆ ಈ ಸಾಲಿನ ಗೌರವ ಫೆಲೋಷಿಪ್‌, 39 ಮಂದಿ ಕಲಾವಿದರು ವಾರ್ಷಿಕ ಪ್ರಶಸ್ತಿಯನ್ನು ಮತ್ತು 21 ಮಂದಿ ನೇಪಥ್ಯ ಕಲಾವಿದರಿಗೆ ಪದ್ದಣ್ಣ ಶ್ರಮ ಪ್ರಶಸ್ತಿಯನ್ನು ಪ್ರಕಟಿಸಿದೆ.

ಡಿ.ಕೆ. ಚೌಟ, ಎಸ್‌. ಜಿ. ಕಂಠಿ, ಲಕ್ಷ್ಮೀ ಚಂದ್ರಶೇಖರ, ವಿ. ಕೃಷ್ಣನ್‌, ಕೆ.ವಿ. ಅಕ್ಷರ, ಡಾ. ಎಂ.ಜಿ. ಈಶ್ವರಪ್ಪ, ಪ್ರೊ.ರಾಮದಾಸ್‌ ಮತ್ತು ಮಹಾಂತಯ್ಯ ಸ್ವಾಮಿ ಮುಂಡರಗಿ ಮಠ ಅವರು ಫೆಲೋಷಿಪ್‌ ಗೌರವಕ್ಕೆ ಭಾಜನರಾದವರು. ಪ್ರಶಸ್ತಿ ಪ್ರದಾನ ಸಮಾರಂಭವು ಗದಗಿನಲ್ಲಿ ಮೇ ತಿಂಗಳ ಮೊದಲ ವಾರದಲ್ಲಿ ನಡೆಯಲಿದೆ.

ವಾರ್ಷಿಕ ಪ್ರಶಸ್ತಿ ವಿಜೇತರು : ಗುರುರಾವ್‌ ಬಾಪಟ್‌, ಆರ್‌. ಭರಮಲಿಂಗಪ್ಪ , ನಂಜುಂಡ ಸ್ವಾಮಿ, ಆ.ನ. ರಮೇಶ್‌, ಪಿ. ಧನಂಜಯ, ಪಿ.ಎ. ವೇಣುಗೋಪಾಲ ರೆಡ್ಡಿ, ಹನುಮಯ್ಯ, ಡಾ. ಬಸವರಾಜ ಸಬರದ, ಕೆ.ಎಸ್‌. ಶೈಲಜಾ, ಶಂಕರಯ್ಯ ರಕ್ಕಸಗಿ, ಡಾ. ಸಂಜೀವ ದಂಡಕೇರಿ, ಶಂಕ್ರ ದನದಮನಿ, ಲೂಸಿ ಫೆರೇರ, ಎಂ. ಕೆ. ಸತ್ಯನಾರಾಯಣ, ಪ್ರೊ. ಮೋಹನ ರಾಜ್‌, ಎಚ್‌. ಅನಸೂಯ, ಬಿ.ವಿ.ವಿ. ಗಿರಿ, ಎಚ್‌. ಸಿ. ರಾಮಚಂದ್ರ, ಗೌರಿದತ್ತು , ಅಂಕಲ್‌ ಶ್ಯಾಂ, ಗೋಪಾಲಕೃಷ್ಣ ನಾಯಕ, ಪ್ರಕಾಶ್‌ ಶಣೈ, ಮಹಾನಂದ ಹುಲ್ಲೂರು, ಸುಬ್ಬಣ್ಣ ಶೆಟ್ಟಿ, ಪಿಚ್ಚಳ್ಳಿ ಶ್ರೀನಿವಾಸ, ವಿ. ಎಂ. ನಾಗೇಶ, ಎಸ್‌. ಕೆ. ಪರಮೇಶ್ವರಯ್ಯ, ತಿಪ್ಪೇಸ್ವಾಮಿ, ಎ.ಕಪಿನಯ್ಯ, ಜನಾರ್ಧನ, ರಾಧಮ್ಮ, ಎನ್‌. ನರಸಿಂಹಯ್ಯ, ಸೂತ್ರಧಾರ ರಾಮಯ್ಯ, ಸುಧೀಂದ್ರ ಶರ್ಮ, ಎಂ.ಬಿ. ಕೃಷ್ಣರಾವ್‌, ಸಂಗಮೇಶ ಆರ್‌. ಗುರವ, ಸುಲೋಚನಾ ವಿ.ಕಲಾವಂತ, ಪ್ರಮೀಳಾ ಬೇಂಗ್ರೆ ಹಾಗೂ ಯಶವಂತ.

ಪದ್ದಣ್ಣ ಶ್ರಮ ಪ್ರಶಸ್ತಿ ವಿಜೇತರು : ಜಗದೀಶ , ಎ. ಕೃಷ್ಣಯ್ಯ, ವೆಂಕಟಸುಬ್ಬಯ್ಯ, ಕಲ್ಲೂರು ಶ್ರೀನಿವಾಸ, ನಾರಾಯಣಪ್ಪ, ಪಿ.ವಿ. ಪರಮೇಶ, ಬುಡಾನ್‌ ಬಾಷಾ ಸಾಹೇಬ್‌, ಶಾಂತಯ್ಯ ಹಿರೇಮಠ, ಜಿ.ಎಸ್‌. ಸಬಕಾಳೆ, ರುದ್ರಯ್ಯ, ಬಿ.ಆರ್‌. ವಿಶ್ವನಾಥ, ಎ.ಜೆ. ದೇಸಾಯಿ, ಬಸವರಾಜಗೌಡ ನಾಡಂಗ, ಕಲ್ಲಪ್ಪ ಬಾಳಪ್ಪ ದ್ಯಾವಣಸಿ, ಬಹ್ಮಾಚಾರ್‌, ರವಿಕುಮಾರ್‌, ನರಸಿಂಗರಾವ್‌ ಕುಲಕರ್ಣಿ, ಜಿ. ಎಂ. ರಂಗಯ್ಯ, ಕಂಚಿಪತಿ, ಎಂ.ಎಸ್‌. ಗುರುಮೂರ್ತಿ ಹಾಗೂ ಚಂದ್ರಶೇಕರ ಚಕ್ಕಿ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+