ಕ್ರಿಕೆಟ್ಟಿನೊಟ್ಟಿಗೆ ಬಾಜಿಗೂ ಜೀವ : ಹೈದರಾಬಾದಲ್ಲಿ ಮೂವರ ಬಂಧನ
ಹೈದರಾಬಾದ್ : ಬುಧವಾರ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆದ ಒಂದು ದಿನದ ಕ್ರಿಕೆಟ್ ಪಂದ್ಯದ ವೇಳೆ ಬಾಜಿ ಕಟ್ಟುತ್ತಿದ್ದ ಮೂವರನ್ನು ನಗರದ ಕಚಿಗುಡದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಪೊಲೀಸರು ಈ ವಿಷಯ ತಿಳಿಸಿದರು. ರಾಜೇಶ್ ಪಿಟ್ಟೀ, ಆತನ ಸಹೋದರ ವಿನೋದ್‌ಪಿಟ್ಟೀ ಹಾಗೂ ತರುಣ್ ಅಗರ್‌ವಾಲ್ ಎಂಬುವರು ಬಾಜಿ ಕಟ್ಟುತ್ತಿದ್ದುದನ್ನು ಪ್ರತ್ಯಕ್ಷ ಕಂಡ ಪೊಲೀಸರು, ಅವರನ್ನು ಬಂಧಿಸಿದ್ದಲ್ಲದೆ ಅವರಿಂದ 60 ಸಾವಿರ ರುಪಾಯಿ ನಗದನ್ನೂ ವಶಪಡಿಸಿಕೊಂಡಿದ್ದಾರೆ. ಜೊತೆಗೆ ಬಂಧಿತರ ಬಳಿಯಿದ್ದ 5 ಮೊಬೈಲ್ ಫೋನ್‌ಗಳು, ಬಾಜಿ ಕಟ್ಟಿದ್ದ ಮಂದಿಯ ಹೆಸರುಗಳನ್ನು ನಮೂದಿಸಲಾಗಿದ್ದ ಕಾಗದಗಳೂ (ಅವುಗಳಲ್ಲಿ ಯಾವ ತಂಡ ಗೆಲ್ಲುತ್ತದೆ ? ಯಾವ ಸಮಯಕ್ಕೆ ಬಾಜಿ ಕಟ್ಟಲಾಗಿದೆ? ಬಾಜಿ ಮೊತ್ತವೆಷ್ಟು ಇತ್ಯಾದಿ ವಿವರಗಳಿವೆ) ಪೊಲೀಸರಿಗೆ ಸಿಕ್ಕಿವೆ.
ಘಟನೆ ವಿವರ : ಮೂವರೂ ಆರೋಪಿಗಳು ಪುಣೆಯಲ್ಲಿ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಫ್ಲಾಟೊಂದನ್ನು ಬಾಡಿಗೆಗೆ ಪಡೆದು, ಬೆಟ್ಟಿಂಗ್ ದಂಧೆ ನಡೆಯುತ್ತಿದ್ದರು. ಮೊಬೈಲ್ ಫೋನುಗಳ ಜೊತೆಗೆ ಮೂರು ದೂರವಾಣಿಗಳ ಮೂಲಕ ಅವರು ತಮ್ಮ ಖಾಯಂ ಗ್ರಾಹಕರೊಡನೆ ಸಂಪರ್ಕ ಇಟ್ಟುಕೊಂಡಿದ್ದರು. ಬಾಜಿ ಬೆಲೆಯನ್ನು ನಿಗದಿ ಪಡಿಸಲು ಮುಂಬಯಿಯ ಬೆಟ್ಟಿಂಗ್ ಜಾಲದ ಜೊತೆಗೂ ಸಂಪರ್ಕ ಇಟ್ಟುಕೊಂಡಿದ್ದರು. ಭಾರತದ ಗೆಲುವಿನ ಮೇಲೆ 1: 5 ಹಾಗೂ ಆಸ್ಟ್ರೇಲಿಯಾ ಗೆಲುವಿನ ಮೇಲೆ 1: 20 ಅನುಪಾತದಲ್ಲಿ ಬಾಜಿ ಕಟ್ಟಲಾಗಿತ್ತು . ಸುಲಭ ಗೆಲುವಿನ ಹಾದಿಯಲ್ಲಿದ್ದ ಆಸ್ಟ್ರೇಲಿಯಾ ಆಟವನ್ನು ಕಂಡು, ಪಂದ್ಯ ಮುಗಿಯುವ ಒಂದು ಗಂಟೆ ಮುನ್ನವೇ ಬಾಜೀ ಕಟ್ಟುವುದು ನಿಂತಿತ್ತು ಎಂದು ಪೊಲೀಸರು ವಿವರಿಸಿದರು.
(ಯುಎನ್‌ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications