Get Updates
Get notified of breaking news, exclusive insights, and must-see stories!

ಶಿರಾ : ಕುಡಿಯುವ ನೀರಿಗೆ ಬರ, ಗಮನಿಸಿದೆಯಂತೆ ಸರ್ಕಾರ

ಬೆಂಗಳೂರು : ಕುಡಿಯುವ ನೀರಿನ ಬರ ಎದುರಿಸುತ್ತಿರುವ ತುಮಕೂರು ಜಿಲ್ಲೆಯ ತಾಲ್ಲೂಕು ಪಟ್ಟಣ ಶಿರಾಕ್ಕೆ, ಕುಡಿಯುವ ನೀರು ಪೂರೈಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ನಗರಾಭಿವೃದ್ಧಿ ಸಚಿವ ಬಿ.ಬಿ. ಚಿಮ್ಮನಕಟ್ಟಿ ಹೇಳಿದ್ದಾರೆ.

ಸಂಯುಕ್ತ ಜನತಾದಳದ ಮುಖಂಡ ಪಿಜಿಆರ್‌ ಸಿಂಧ್ಯಾ ಹಾಗೂ ಜಾತ್ಯತೀತ ಜನತಾದಳದ ಸಿ. ಚೆನ್ನಿಗಪ್ಪ ವಿಧಾನಸಭೆಯಲ್ಲಿ ಮಂಗಳವಾರ ಎತ್ತಿದ ಪ್ರಶ್ನೆಯಾಂದಕ್ಕೆ ಚಿಮ್ಮನಕಟ್ಟಿ ಉತ್ತರಿಸುತ್ತಿದ್ದರು. ಶಿರಾ ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ಎದ್ದಿರುವ ಹಾಹಾಕಾರ ಸರ್ಕಾರದ ಗಮನಕ್ಕೆ ಬಂದಿದೆ ಎಂದರು.

ಪಟ್ಟಣಕ್ಕೆ 5 ಕೋಟಿ ರುಪಾಯಿ ವೆಚ್ಚದಲ್ಲಿ ಕುಡಿಯುವ ನೀರು ಪೂರೈಸುವ ಯೋಜನೆಯಾಂದನ್ನು ಸರ್ಕಾರ ಸಿದ್ಧಪಡಿಸಿದೆ. ಆದರೆ ಯೋಜನೆ ಇನ್ನೂ ಜಾರಿಯಾಗಿಲ್ಲ ಎಂದು ಚಿಮ್ಮನಕಟ್ಟಿ ಹೇಳಿದರು. ಯೋಜನೆ ಕಾರ್ಯಗತವಾಗುವ ದಿನಾಂಕದ ಬಗ್ಗೆ ಅವರು ಏನನ್ನೂ ಹೇಳಲಿಲ್ಲ .

ಎರಡು ವರ್ಷಗಳ ಹಿಂದೆ ಶೇಂಗಾ ಬೆಳೆಗೆ ಸೂಕ್ತ ಬೆಲೆ ದೊರಕದ ಕಾರಣ ಹೊತ್ತಿ ಉರಿದಿದ್ದ ಶಿರಾ, ಈಗ ಕುಡಿಯುವ ನೀರಿನ ಸಮಸ್ಯೆಯುರಿಯಲ್ಲಿ ಬೇಯುತ್ತಿದೆ. ಶಿರಾದಲ್ಲಿ ಮತ್ತೊಮ್ಮೆ ಗಲಭೆ, ಅಶಾಂತಿ ಉಂಟಾಗದಂತೆ ಸರ್ಕಾರ ಎಚ್ಚರ ವಹಿಸಬೇಕಿದೆ ಎಂದು ಸಿಂಧ್ಯಾ ಸರ್ಕಾರಕ್ಕೆ ತಿಳಿಹೇಳಿದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+