Get Updates
Get notified of breaking news, exclusive insights, and must-see stories!

ಜನಗಣತಿ -2001 : ನಮ್ಮವರ ಸಂಖ್ಯೆ 5,27,33,958

ಬೆಂಗಳೂರು : ಚತುಷ್ಕೋಟಿ ಕನ್ನಡಿಗರು ಎನ್ನುವ ಪರಿಕಲ್ಪನೆಯನ್ನು ಜನಗಣತಿ-2001 ಬದಲಿಸಿದ್ದು , ಕನ್ನಡಿಗರೀಗ ಪಂಚಕೋಟಿಯ ಗೆರೆ ದಾಟಿದ್ದಾರೆ. ಪಕ್ಕಾ ಹೇಳುವುದಾದರೆ - ಕರ್ನಾಟಕದ ಜನಸಂಖ್ಯೆಯೀಗ 5 ಕೋಟಿ 27 ಲಕ್ಷ 33 ಸಾವಿರದ 958. ಜನಗಣತಿ - 91 ರಲ್ಲಿ ರಾಜ್ಯದ ಜನಸಂಖ್ಯೆ 4, 49,77,201 ರಷ್ಟಿತ್ತು . ಜನಸಂಖ್ಯಾ ಗಾತ್ರದ ದೃಷ್ಟಿಯಿಂದ ಕರ್ನಾಟಕ ದೇಶದಲ್ಲಿ 9 ನೇ ಸ್ಥಾನದಲ್ಲಿದೆ.

1991ರ ಜನಗಣತಿಯ ಅಂಕಿ ಅಂಶಗಳಿಗೆ ಹೋಲಿಸಿದರೆ, ಕಳೆದೊಂದು ದಶಕದಲ್ಲಿ ಜನಸಂಖ್ಯೆಯ ಬೆಳವಣಿಗೆಯ ದರ ರಾಜ್ಯದಲ್ಲಿ ಇಳಿಮುಖವಾಗಿದೆ. ಜನಗಣತಿ-2001 ರ ಮೊದಲ ಸುತ್ತಿನ ವಿವರಗಳನ್ನು ಜನಗಣತಿ ನಿರ್ದೇಶನಾಲಯದ ನಿರ್ದೇಶಕ ಎಚ್‌. ಶಶಿಧರ್‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.

91 ರ ಜನಗಣತಿ ವಿವರಗಳಿಗೆ ಹೋಲಿಸಿದರೆ, ಲಿಂಗ ಅನುಪಾತ ಹಾಗೂ ಸಾಕ್ಷರತೆಯ ದರವೂ ರಾಜ್ಯದಲ್ಲಿ ಸ್ವಲ್ಪಮಟ್ಟಿಗಿನ ಏರಿಕೆಯನ್ನು ಕಂಡಿದೆ. ಸಾಕ್ಷರತೆಯ ಪ್ರಮಾಣ ಪ್ರತಿಶತ 56.04 ರಿಂದ 67.04 ಕ್ಕೆ ಏರಿಕೆ ಕಂಡಿದ್ದರೆ, ಲಿಂಗ ಅನುಪಾತದ ದರ - ಪ್ರತಿ ಸಾವಿರ ಪುರುಷರಿಗೆ ಮಹಿಳೆಯರ ಸಂಖ್ಯೆ 960 ರಿಂದ 964 ಕ್ಕೆ ಹೆಚ್ಚಿದೆ.

ರಾಜ್ಯದ ಒಟ್ಟು 3,07,74,988 ಸಾಕ್ಷರರಲ್ಲಿ ಪುರುಷರ ಸಂಖ್ಯೆ 1,78,17,682. ಮಹಿಳೆಯರ ಸಂಖ್ಯೆ 1,29,57,306. ಅಧಿಕ ಸಾಕ್ಷರರನ್ನು ಹೊಂದಿರುವ ಹೆಗ್ಗಳಿಕೆ ಬೆಂಗಳೂರಿನದಾದರೆ (ಶೇ.83.91), ಕಡಿಮೆ ಸಾಕ್ಷರರ ವಿಷಾದ ರಾಯಚೂರಿನದು (49.54). ದಕ್ಷಿಣ ಕನ್ನಡ ಜಿಲ್ಲೆಯ ಸಾಕ್ಷರರಲ್ಲಿ ಪುರುಷರ ಪ್ರಮಾಣ ಹೆಚ್ಚಾದರೆ, ಬೆಂಗಳೂರಿನಲ್ಲಿ ಸ್ತ್ರೀ ಸಾಕ್ಷರರ ಸಂಖ್ಯೆ ಹೆಚ್ಚು . ಇನ್ನು , ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಜಿಲ್ಲೆಗಳಲ್ಲಿ ಬೆಂಗಳೂರು ನಗರ(65 ಲಕ್ಷ) ಎಂದಿನಂತೆ ಮುಂದಿದೆ. 5 ಲಕ್ಷ ಜನಸಂಖ್ಯೆ ಹೊಂದಿರುವ ಕೊಡಗು ಕೊನೆಯ ಸ್ಥಾನದಲ್ಲಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+