Get Updates
Get notified of breaking news, exclusive insights, and must-see stories!

ಬ್ಯಾಟು ಬೀಸಲು ಕಲಿತ ಬೌರೆಲ್‌ ಪರಿಸರಕ್ಕೆ ಬ್ರಾಡ್ಮನ್‌ ಚಿತಾಭಸ್ಮ

ಸಿಡ್ನಿ : ಕಳೆದ ಫೆಬ್ರವರಿ 25 ರಂದು ನಿಧನರಾದ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಸರ್‌ ಡೊನಾಲ್ಡ್‌ ಬ್ರಾಡ್‌ಮನ್‌ರ ಚಿತಾಭಸ್ಮವನ್ನು ಬೌರಲ್‌ನಲ್ಲಿ ವಿಸರ್ಜಿಸಲಾಯಿತು. ಬ್ರಾಡ್‌ಮನ್‌ ಬಾಲ್ಯ ಕಳೆದದ್ದು , ಕ್ರಿಕೆಟ್‌ ಬಗೆಗೆ ಎದೆಯಲ್ಲಿ ಕನಸುಗಳನ್ನು ಕಂಡದ್ದು ಬೌರಲ್‌ನಲ್ಲಿಯೇ. ಈ ನಂಟಿನ ಹಿನ್ನೆಲೆಯಲ್ಲಿ ಬೌರಲ್‌ನ ಪರಿಸರದಲ್ಲಿ ಕ್ರಿಕೆಟ್‌ ದಂತಕಥೆಯ ಚಿತಾಭಸ್ಮ ಬೆರೆಸಲಾಯಿತು.

ಖಾಸಗಿ ಕಾರ್ಯಕ್ರಮವೊಂದರಲ್ಲಿ ಚಿತಾಭಸ್ಮವನ್ನು ಬೌರಲ್‌ನ ಪರಿಸರದಲ್ಲಿ ಸೇರಿಸುವ ಕ್ರಿಯೆ ನಡೆಯಿತು ಎಂದು ಬ್ರಾಡ್ಮನ್‌ ಫೌಂಡೇಶನ್‌ನ ನಿರ್ದೇಶಕ ರಿಚರ್ಡ್‌ ಮುಲ್ವಾನಿ ತಿಳಿಸಿದ್ದಾರೆ. ಕಾರ್ಯಕ್ರಮದ ವಿವರಗಳನ್ನು ನೀಡಲು ಅವರು ನಿರಾಕರಿಸಿದ್ದಾರೆ.

1908 ರಲ್ಲಿ ನ್ಯೂ ಸೌತ್‌ ವೇಲ್ಸ್‌ನ ಕೂಟಮುಂದ್ರದಲ್ಲಿ ಜನಿಸಿದ ಬ್ರಾಡ್ಮನ್‌, ಬೆಳೆದದ್ದು ಸಿಡ್ನಿಯಿಂದ ವಾಯುವ್ಯಕ್ಕೆ 80 ಕಿಮೀ ದೂರದಲ್ಲಿರುವ ಬೌರೆಲ್‌ನಲ್ಲಿ . ಅಲ್ಲಿಯೇ ಬ್ಯಾಟು ಬೀಸಲು ಕಲಿತ ಅವರು, 1920 ರಲ್ಲಿ ಹೈಸ್ಕೂಲಿನ ದಿನಗಳಲ್ಲಿ ತಮ್ಮ ಮೊದಲ ಸೆಂಚುರಿಯನ್ನು ದಾಖಲಿಸಿದ್ದರು.

(ರಾಯ್ಟರ್ಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+